Shani Rise 2023: ಶೀಘ್ರದಲ್ಲಿಯೇ ಶನಿ ಉದಯ, ಈ ಜನರಿಗೆ ನಿರ್ವಹಿಸಲು ಕಷ್ಟವಾಗುವಷ್ಟು ಹಣ ಕರುಣಿಸಲಿದ್ದಾನೆ
1. ಜ್ಯೋತಿಷ್ಯ ಶಾಸ್ತ್ರದಲ್ಲಿ, ಶನಿ ದೇವನನ್ನು ಕರ್ಮ ಫಲದಾಟ ಎಂದು ಕರೆಯಲಾಗುತ್ತದೆ. ಅಂದರೆ, ಒಬ್ಬ ವ್ಯಕ್ತಿಯ ಕರ್ಮಗಳಿಗೆ ಅನುಗುಣವಾಗಿ ಆತ ಅವನಿಗೆ ಫಲವನ್ನು ನೀಡುತ್ತಾನೆ. ಇದೇ ಕಾರಣದಿಂದ ಗ್ರಹಲೋಕದಲ್ಲಿ ಶನಿ ನ್ಯಾಯದೇವರ ಸ್ಥಾನಮಾನ ಪಡೆದುಕೊಂಡಿದ್ದಾನೆ. ಶನಿ ದೇವ ಜನವರಿ 30 ರಂದು ಅಸ್ತಮಿಸಿದ್ದಾನೆ ಮತ್ತು ಇದೀಗ ಆತ ಪುನಃ 5 ಮಾರ್ಚ್ 2023 ರಂದು ಉದಯಿಸಲಿದ್ದಾರೆ. ಶನಿ ಉದಯದ ಕಾರಣ ಶನಿಯ ಆಶೀರ್ವಾದವು ಕೆಲವು ವಿಶೇಷ ರಾಶಿಗಳ ಮೇಲೆ ಬೀಳುತ್ತದೆ.
2. ಶನಿದೇವನ ಉದಯ ಯಾವಾಗ?: ಜನವರಿ 17, 2023 ರಂದು ಶನಿದೇವ ಕುಂಭ ರಾಶಿಗೆ ಪ್ರವೇಶಿಸಿದ್ದಾನೆ. 30 ಜನವರಿ 2023 ರಂದು, ಆತ ಕುಂಭ ರಾಶಿಯಲ್ಲಿ ಅಸ್ತಮಿಸಿದ್ದಾನೆ. ಆತನ ಈ ಅಸ್ತ ಸ್ಥಿತಿ ಕೆಲ ರಾಶಿಗಳ ಪಾಲಿಗೆ ಹಾನಿಕಾರಕವೆಂದು ಸಾಬೀತುಪಡಿಸುತ್ತದೆ. ಪ್ರಸ್ತುತ ವೃಶ್ಚಿಕ ರಾಶಿ ಮತ್ತು ಕರ್ಕ ರಾಶಿಯವರಿಗೆ ಶನಿಯ ಎರಡೂವರೆ ವರ್ಷಗಳ ಪೀಡೆ ಆರಂಭವಾಗಿದೆ. ಇದರಿಂದ ಈ ರಾಶಿಗಳ ಜನರು ಮಾನಸಿಕ, ದೈಹಿಕ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುವ ಸಾಧ್ಯತೆ ಇದೆ. ಆದರೆ ಶನಿದೇವನ ಉದಯದಿಂದ ಕೆಲ ರಾಶಿಗಳು ಲಾಭವನ್ನು ಪಡೆಯಲಿವೆ.
3. ವೃಷಭ ರಾಶಿ: ಶನಿ ದೇವನ ಉದಯ ವೃಷಭ ರಾಶಿಯವರಿಗೆ ಆರ್ಥಿಕ ಲಾಭವನ್ನು ಕೊಡುತ್ತದೆ. ಈ ಜನರು ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತಾರೆ. ಕೆಲಸ ಹುಡುಕುತ್ತಿರುವವ ಹುಡುಕಾಟಕ್ಕೆ ತೆರೆಬೀಳಲಿದೆ. ವ್ಯಾಪಾರ ಆರಂಭಿಸುವವರ ಪಾಲಿಗೆ ಇದು ಶುಭ ಸಮಯ.
4. ಸಿಂಹ ರಾಶಿ : ಶನಿಯ ಉದಯದಿಂದಾಗಿ ಸಿಂಹ ರಾಶಿಯವರಿಗೆ ಬಂಬಾಟ್ ಲಾಭವಾಗಲಿದೆ. ಈ ರಾಶಿಗಳ ಜನರ ಶುಭಕಾಲ ಆರಂಭವಾಗಲಿದೆ. ಶನಿದೇವನ ಆಶೀರ್ವಾದದಿಂದಾಗಿ ಇವರಿಗೂ ಕೂಡ ಒಳ್ಳೆಯ ಸುದ್ದಿ ಪ್ರಾಪ್ತಿಯಾಗಲಿದೆ. ಜೀವನದಲ್ಲಿ ಹೊಸ ಸಂತೋಷ ಹರಿದು ಬರಲಿದೆ. ಈ ಅವಧಿಯು ನಿಮಗೆ ತುಂಬಾ ಪ್ರಯೋಜನಕಾರಿಯಾಗಿದೆ.
5. ಕುಂಭ ರಾಶಿ: ಶನಿ ನಿಮ್ಮ ರಾಶಿಯಲ್ಲಿಯೇ ಅಸ್ತನಾಗಿ ನಿಮ್ಮ ರಾಶಿಯಲ್ಲಿಯೇ ಉದಯಿಸುತ್ತಿದ್ದಾನೆ. ಇದರಿಂದ ನಿಮಗೆ ಧನಾತ್ಮಕ ಫಲಿತಾಂಶಗಳು ಸಿಗಲಿವೆ. ಈ ರಾಶಿಯ ಜನರು ಕೆಲಸದ ಸ್ಥಳದಲ್ಲಿ ಪ್ರಶಂಸೆಗೆ ಪಾತ್ರರಾಗುತ್ತಾರೆ. ಸಮಾಜದಲ್ಲಿ ಸ್ಥಾನಮಾನಗಳು ಹೆಚ್ಚುತ್ತವೆ ಮತ್ತು ಹೊಸ ಉದ್ಯೋಗಾವಕಾಶಗಳು ಪ್ರಾಪ್ತಿಯಾಗುತ್ತವೆ. ಸಂಗಾತಿಯೊಂದಿಗಿನ ಸಂಬಂಧಗಳು ಸುಮಧುರವಾಗಲಿವೆ. ಬ್ಯಾಚುಲರ್‌ಗಳಿಗೆ ಸಂಬಂಧಗಳು ಕೂಡಿ ಬರುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ)