Mars Transit 2023: ಶೀಘ್ರದಲ್ಲೇ ತನ್ನ ನೀಚ ರಾಶಿಗೆ ಸಾಗಿ ಈ ಜನರಿಗೆ ಬಂಪರ್ ಲಾಭ ಕಲ್ಪಿಸಲಿದ್ದಾನೆ ಮಂಗಳ!

Fri, 28 Apr 2023-12:44 pm,

ಮೇಷ ರಾಶಿ- ಮೇಷ ರಾಶಿಯ ಜನರ ಗೋಚರ ಜಾತಕದ ಚತುರ್ಥ ಭಾವದಲ್ಲಿ ಮಂಗಳನ ಈ ಗೋಚರ ನೆರವೇರಲಿದೆ. ಹಾಗೆ ನೋಡಿದರೆ ಮೇಷ ರಾಶಿಯ ಜನರಿಗೆ ಮಂಗಳ ಅಧಿಪತಿ. ಹೀಗಾಗಿ ಈ ರಾಶಿಯ ಜನರಿಗೆ ವಿಶೇಷ ಲಾಭ ಸಿಗುವ ಸಾಧ್ಯತೆ ಇದೆ. ಆದಾಯದ ಹೊಸ ಮೂಲಗಳು ನಿರ್ಮಾಣಗೊಳ್ಳಲಿವೆ. ಆರ್ಥಿಕ ಪಕ್ಷ ಬಲವಾಗಿರುವ ಕಾರಣ ನಿಮ್ಮ ಹಲವು ಕನಸುಗಳು ನನಸಾಗುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಪ್ರಸನ್ನರಾಗಲಿದ್ದಾರೆ. ಹೀಗಿರುವಾಗ ನಿಮಗೆ ಪದೋನ್ನತಿ ಸಿಗುವ ಎಲ್ಲಾ ಸಾಧ್ಯತೆಗಳಿವೆ. ವಾಹನ ಖರೀದಿಸಲು ಯೋಜನೆ ರೂಪಿಸುತ್ತಿದ್ದಾರೆ, ತಡಮಾಡಬೇಡಿ, ಶುಭ ಮುಹೂರ್ತ ನೋಡಿ ಖರೀದಿಸಿಯೇ ಬಿಡಿ. ಇದರಿಂದ ಶುಭ ಫಲ ಪ್ರಾಪ್ತಿಯಾಗಲಿದೆ.  

ಕನ್ಯಾ ರಾಶಿ- ನಿಮ್ಮ ರಾಶಿಯ ಗೋಚರ ಜಾತಕದ ಏಕಾದಶ ಭಾವದಲ್ಲಿ ಮಂಗಳನ ಈ ಗೋಚರ ನೆರವೇರಲಿದೆ. ಹೀಗಿರುವಾಗ ಈ ರಾಶಿಯ ಜಾತಕದವರಿಗೆ ಹಣಕಾಸಿನ ಮುಗ್ಗಟ್ಟಿನಿಂದ ಮುಕ್ತಿ ಸಿಗಲಿದೆ. ವೈವಾಹಿಕ ಜೀವನ ಸುಖಮಯವಾಗಲಿದೆ. ಒತ್ತಡದಿಂದ ಮುಕ್ತಿ ಸಿಗಲಿದೆ. ಬಂಧು ಮಿತ್ರರ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಬಿಸ್ನೆಸ್ ಹಾಗೂ ನೌಕರಿಯಲ್ಲಿಯೂ ಕೂಡ ಲಾಭದ ಲಕ್ಷಣಗಳು ಗೋಚರಿಸುತ್ತಿವೆ. ಇದಲ್ಲದೆ ನಿಮಗೆ ಆಕಸ್ಮಿಕ ಧನಲಾಭ ಯೋಗ ಕೂಡ ಪ್ರಾಪ್ತಿಯಾಗಬಹುದು.   

ಕುಂಭ ರಾಶಿ- ಕುಂಭ ರಾಶಿಯ ಜಾತಕದವರಿಗೆ ಮಂಗಳನ ಈ ಗೋಚರ ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಶಷ್ಟಮ ಭಾವದಲ್ಲಿ ಮಂಗಳ ಪ್ರವೇಶಿಸುತ್ತಿದ್ದಾನೆ. ಹೀಗಿರುವಾಗ ನೀವು ನಿಮ್ಮ ಶತ್ರುಗಳ ಮೇಲೆ ಜಯ ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಹೀಗಾಗಿ ಇನ್ನೂ ಹೆಚ್ಚಿನ ಪರಿಶ್ರಮವಹಿಸಿ. ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ, ಈ ಅವಧಿಯಲ್ಲಿ ನಿಮಗೆ ಹಣಕಾಸಿನ ಮುಗ್ಗಟ್ಟು ಎದುರಾಗುವುದಿಲ್ಲ. ಬಂಧು-ಮಿತ್ರರು ಅಥವಾ ಕುಟುಂಬ ಸದಸ್ಯರ ಜೊತೆಗೆ ನೀವು ಒಂದು ಅವಿಸ್ಮರಣೀಯ ಪ್ರವಾಸ ಕೈಗೊಳ್ಳಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link