ಶೀಘ್ರದಲ್ಲೇ ಬೃಹಸ್ಪತಿಯ ಮನೆಯಲ್ಲಿ `ಪವರ್ಫುಲ್ ತ್ರಿಗ್ರಹಿ ಯೋಗ` ನಿರ್ಮಾಣ 3 ಜಾತಕದವರ ಮೇಲೆ ಅಪಾರ ಧನವೃಷ್ಟಿ!

Tue, 14 Mar 2023-3:31 pm,

ಕರ್ಕ ರಾಶಿ-ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳುವುದು ಕರ್ಕ ರಾಶಿಯವರಿಗೆ ಅತ್ಯಂತ ಪ್ರಯೋಜನಕಾರಿ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಸಂಕ್ರಮಣದ ಜಾತಕದ ಅದೃಷ್ಟ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಹೀಗಾಗಿ ನೀವು ಈ ಅವಧಿಯಲ್ಲಿ ನೀವು ಭಾರಿ ಅದೃಷ್ಟವನ್ನು ಪಡೆಯಬಹುದು. ಇದರೊಂದಿಗೆ ಸೂರ್ಯನು ಸಂಪತ್ತಿನ ಅಧಿಪತಿಯೂ ಹೌದು. ಹೀಗಾಗಿ ಈ ಸಮಯವು ಕೆಲಸ-ವ್ಯವಹಾರಗಳಿಗೆ ಉತ್ತಮವಾಗಿದೆ. ಉದ್ಯೋಗಸ್ಥರಿಗೆ ಬಡ್ತಿ ಸಿಗಬಹುದು. ಇದರೊಂದಿಗೆ, ನೀವು ಈ ಸಮಯದಲ್ಲಿ ವ್ಯಾಪಾರ-ಸಂಬಂಧಿತ ಪ್ರವಾಸಗಳನ್ನು ಕೈಗೊಳ್ಳಬಹುದು, ಅದು ನಿಮ್ಮ ಪಾಲಿಗೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಇದೇ ವೇಳೆ ವಿದ್ಯಾರ್ಥಿಗಳಿಗೆ ಈ ಸಮಯವು ಉತ್ತಮವಾಗಿರುತ್ತದೆ.  

ವೃಷಭ ರಾಶಿ-ತ್ರಿಗ್ರಹಿ ಯೋಗ ವೃಷಭ ರಾಶಿಯವರಿಗೆ ಮಂಗಳಕರವೆಂದು ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯ ಲಾಭ ಮತ್ತು ಆದಾಯದ ಭಾವದಲ್ಲಿ ಈ ಮೈತ್ರಿಯು ರೂಪುಗೊಳ್ಳಲಿದೆ. ಹೀಗಾಗಿ ಈ ಅವಧಿಯಲ್ಲಿ ಕೆಲಸ-ವ್ಯವಹಾರಗಳು ಉತ್ತಮವಾಗಿರಲಿವೆ. ಧನಲಾಭವೂ ಇರಲಿದೆ. ಇನ್ನೊಂದೆಡೆ ಈ ಅವಧಿಯಲ್ಲಿ ನಿಮಗೆ ಸಾಕಷ್ಟು ಘನತೆ ಗೌರವ ಕೂಡ ಪ್ರಾಪ್ತಿಯಾಗಲಿದೆ . ಇದರೊಂದಿಗೆ ಸಂತಾನ ಬಯಸುವವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಲಿದೆ.  ಹಳೆಯ ಹೂಡಿಕೆಯಿಂದಲೂ ನಿಮಗೆ ಲಾಭ ಸಿಗಲಿದೆ. ಅಲ್ಲದೆ, ಈ ಅವಧಿಯಲ್ಲಿ ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು.  

ಮಿಥುನ ರಾಶಿ- ತ್ರಿಗ್ರಹಿ ಯೋಗದ ರಚನೆಯು ನಿಮಗೆ ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಈ ಯೋಗವು ನಿಮ್ಮ ಜಾತಕದ ದಶಮ ಭಾವದಲ್ಲಿ ರೂಪುಗೊಳ್ಳಲಿದೆ. ಹೀಗಾಗಿ ಈ ಅವಧಿಯಲ್ಲಿ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು. ನೌಕರಸ್ಥರಿಗೆ  ಬಡ್ತಿ, ಇಂಕ್ರಿಮೆಂಟ್ ಭಾಗ್ಯ ಪ್ರಾಪ್ತಿಯಾಗಲಿದೆ. ಇದರೊಂದಿಗೆ ಕೆಲಸ-ವ್ಯವಹಾರದಲ್ಲಿ ಅಪಾರ ಗೌರವ ಪ್ರಾಪ್ತಿಯಾಗಲಿದೆ. ಸಂತೋಷ ಮತ್ತು ಆರ್ಥಿಕತೆಯಲ್ಲಿ  ಹೆಚ್ಚಳವಾಗಬಹುದು. ರಾಜಕೀಯ ಅಥವಾ ಸಾಮಾಜಿಕ ಕಾರ್ಯಕರ್ತರು ಕೂಡ. ಪ್ರಗತಿ ಹೊಂದಬಹುದು. ಅವರಿಗೆ ಸ್ಥಾನಮಾನ ಪ್ರಾಪ್ತಿಯಾಗಲಿದೆ.  ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಪ್ರಯೋಜನಗಳ ಬಲವಾದ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ಪ್ರಾರಂಭಿಸಿದ ಕೆಲಸ, ವ್ಯವಹಾರವು ದೀರ್ಘಾವಧಿಯ ಲಾಭವನ್ನು ನಿಮಗೆ ನೀಡಲಿದೆ. (ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಃತಿಯನ್ನು ಪುಷ್ಟಿಕರಿಸುವುದಿಲ್ಲ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link