Malavya Rajyog: ಶೀಘ್ರದಲ್ಲೇ ವೃಷಭ ರಾಶಿಯಲ್ಲಿ ಶುಕ್ರನ ಗೋಚರ, ಮಾಲವ್ಯ ರಾಜಯೋಗದಿಂದ 3 ರಾಶಿಗಳ ಜನರಿಗೆ ಅಪಾರ ಧನಲಾಭ!

Fri, 31 Mar 2023-1:06 pm,

ಮೇಷ ರಾಶಿ: ಮಾಲವ್ಯ ರಾಜಯೋಗ ನಿರ್ಮಾಣದಿಂದ ಮೇಷ ರಾಶಿಯ ಜಾತಕದವರಿಗೆ ಸಾಕಷ್ಟು ಲಾಭ ಸಿಗುವ ನಿರೀಕ್ಷೆ ಇದೆ. ಏಕೆಂದರೆ ಶುಕ್ರ ನಿಮ್ಮ ಗೋಚರ ಜಾತಕದ ದ್ವಿತೀಯ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭದ ಯೋಗ ನಿರ್ಮಾಣಗೊಳ್ಳುತ್ತಿದೆ. ಇನ್ನೊಂದೆಡೆ ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಬಲಿಷ್ಟವಾಗಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿ ಬರಲಿದೆ. ಪ್ರೇಮ ಸಂಬಂಧಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಕುಟುಂಬದಲ್ಲಿ ಎಲ್ಲರೊಂದಿಗೆ ನಿಮ್ಮ ಸಂಬಂಧ ಗಟ್ಟಿಗೊಳ್ಳಲಿದೆ. ಈ ಅವಧಿಯಲ್ಲಿ ನಿಮ್ಮ ಮಾತಿನಲ್ಲಿ ಪ್ರಭಾವವನ್ನು ನೀವು ಗಮನಿಸಬಹುದು. ಇದರಿಂದ ಜನರು ನಿಮ್ಮಿಂದ ಇಂಪ್ರೆಸ್ ಆಗುವರು. ದೂರದ ಪ್ರಯಾಣ ಕಾರ್ಡ್ ಮೇಲಿದೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಉತ್ತಮ ಆರ್ಡರ್ ಗಳು ಸಿಗುವ ಸಾಧ್ಯತೆ ಇದೆ.    

ವೃಷಭ ರಾಶಿ: ಮಾಲವ್ಯ ರಾಜಯೋಗ ನಿರ್ಮಾಣದಿಂದ ವೃಷಭ ರಾಶಿಯ ಜಾತಕದವರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ ಏಕೆಂದರೆ ಶುಕ್ರ ನಿಮ್ಮ ಜಾತಕದ ಲಗ್ನ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿಯಲ್ಲಿಯೂ ಕೂಡ ಅಪಾರ ಸುಧಾರಣೆ ಕಂಡು ಬರಲಿದೆ. ಈ ಮೊದಲಿಗೆ ಹೊಲಿಸಿದರೆ ನೀವು ಅಧಿಕ ಹಣ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಪರಿಶ್ರಮ ನಿಮಗೆ ಫಲ ನೀಡಲಿದ್ದು, ನಿಮಗೆ ಧನಲಾಭದ ಒಳ್ಳೆಯ ಅವಕಾಶಗಳು ಪ್ರಾಪ್ತಿಯಾಗಲಿವೆ. ಇನ್ನೊಂದೆಡೆ ನಿರ್ಮಾಣಗೊಂಡಿರುವ ರಾಜಯೋಗದ ದೃಷ್ಟಿ ನಿಮ್ಮ ಜಾತಕದ ಸಪ್ತಮ ಭಾವದ ಮೇಲೆ ಇರಲಿದ್ದು, ಈ ಅವಧಿಯಲ್ಲಿ ನಿಮಗೆ ಬಾಲಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ನಿಮ್ಮ ಬಾಳಸಂಗಾತಿಯ ಪ್ರಗತಿ ಈ ಅವಧಿಯಲ್ಲಿ ನೀವು ಕಾಣಬಹುದಾಗಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ.   

ಸಿಂಹ ರಾಶಿ: ನಿಮ್ಮ ಪಾಲಿಗೆ ಮಾಲವ್ಯ ರಾಜಯೋಗ ಒಂದು ವರದಾನ ಎಂಬಂತೆ ಸಾಬೀತಾಗಲಿದೆ. ಏಕೆಂದರೆ ಶುಕ್ರ ನಿಮ್ಮ ಜಾತಕದ ಕರ್ಮ ಭಾವದಲ್ಲಿ ಗೋಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನೌಕರಿಯಲ್ಲಿ ಉತ್ತಮ ಅವಕಾಶ ಒದಗಿ ಬರುವ ಸಾಧ್ಯತೆ ಇದೆ. ಇದಲ್ಲದೆ ನೌಕರಿಯಲ್ಲಿ ನಿಮಗೆ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ಇನ್ನೊಂದೆಡೆ ನೌಕರಿಯ ಹುಡುಕಾಟದಲ್ಲಿ ನಿರತರಾದ ಜನರಿಗೆ ಉತ್ತಮ ಉದ್ಯೋಗಾವಕಾಶ ಸಿಗುವ ಸಾಧ್ಯತೆ ಇದೆ. ಕಾರ್ಯಸ್ಥಳದಲ್ಲಿ ಸಹೋದ್ಯೋಗಿಗಳ ಬೆಂಬಲ ಪ್ರಾಪ್ತಿಯಾಗಲಿದೆ. ವ್ಯಾಪಾರದಲ್ಲಿ ನಿರತರಾದವರಿಗೆ ಈ ಅವಧಿಯಲ್ಲಿ ಉತ್ತಮ ಧನಲಾಭ ಸಿಗಲಿದೆ. ಹೊಸ ಕೆಲಸ ಆರಂಭಿಸಲು ಸಮಯ ಅನುಕೂಲಕರವಾಗಿದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ತಂದೆಯ ಸಂಪೂರ್ಣ ಬೆಂಬಲ ಸಿಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link