ಬೇಸಿಗೆಯಲ್ಲಿ ಈ ಗಿಡಮೂಲಿಕೆಗಳಿಂದ ಸಾಧ್ಯವಾದಷ್ಟು ದೂರವಿರಿ

Fri, 13 May 2022-1:31 pm,

ತುಳಸಿ ಎಲೆಗಳ ಪ್ರಯೋಜನ ಸಾಕಷ್ಟಿದೆ. ಇದು ಆಂಟಿವೈರಲ್, ಆಂಟಿಆಕ್ಸಿಡೆಂಟ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಆದರೆ ಬೇಸಿಗೆಯಲ್ಲಿ ಇದರ ನಿಯಮಿತ ಸೇವನೆಯು ಹೊಟ್ಟೆಯ ಶಾಖವನ್ನು ಹೆಚ್ಚಿಸುತ್ತದೆ. ಇದರಿಂದ ಹೊಟ್ಟೆಯ ಆರೋಗ್ಯ ಹದಗೆಡುತ್ತದೆ.  ಹೊಟ್ಟೆ ನೋವು ಮತ್ತು ಆಸಿಡಿಟಿ ಉಂಟಾಗುತ್ತದೆ. 

ಬೇಸಿಗೆಯಲ್ಲಿ ಪಲಾವ್ ಎಲೆಗಳ ಬಳಕೆಯನ್ನು ಕಡಿಮೆ ಮಾಡಬೇಕು. ಏಕೆಂದರೆ ಇದು ದೇಹದ ಉಷ್ಣತೆಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಇದು ದೇಹದ ಉಷ್ಣತೆಯನ್ನು ಹೆಚ್ಚಿಸುವ ಸಂದರ್ಭದಲ್ಲಿ, ಇದು ಹುಣ್ಣುಗಳಂತಹ ಸಮಸ್ಯೆಗಳ ಬೆಳವಣಿಗೆಗೆ ಕಾರಣವಾಗಬಹುದು. 

ಓರಿಗಾನೊ ಸೇವನೆ ಚಳಿಗಾಲದಲ್ಲಿ ಪ್ರಯೋಜನಕಾರಿಯಾಗಿದೆ. ಆದರೆ ಬೇಸಿಗೆಯಲ್ಲಿ ಅದನ್ನು ಸೇವಿಸುವುದು ಹಾನಿಕಾರಕವಾಗಿದೆ. ಇದು ಇಟಾಲಿಯನ್ ಮೂಲಿಕೆಯಾಗಿದ್ದು ಅದು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಬೇಸಿಗೆಯಲ್ಲಿ ಇದರ ಸೇವನೆಯಿಂದ ಹೊಟ್ಟೆ ಮತ್ತು ಕರುಳುಗಳ ಶಾಖ ಹೆಚ್ಚುತ್ತದೆ ಮತ್ತು ಬಾಯಿಯಲ್ಲಿ ಹುಣ್ಣು ಉಂಟಾಗುತ್ತದೆ.   

ಬೇಸಿಗೆಯಲ್ಲಿ ಅಮೃತಬಳ್ಳಿ  ಸೇವನೆಯು  ಹಾನಿಕಾರಕವಾಗಿರುತ್ತದೆ.  ಇದು ಇಮ್ಯುನಿಟಿ ಬೂಸ್ಟರ್ ಆಗಿದ್ದರೂ, ಬೇಸಿಗೆಯಲ್ಲಿ ಇದರ ಸೇವನೆಯು ದೇಹದ ಪಿಹೆಚ್ ಅಸಮತೋಲನಕ್ಕೆ ಕಾರಣವಾಗಬಹುದು. ಅಲ್ಲದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೆಲವೊಮ್ಮೆ ಹೊಟ್ಟೆಗೆ ಸಂಬಂಧಿಸಿದ ಕೆಲವು ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link