Watermelon and milk: ಕಲ್ಲಂಗಡಿ ಹಣ್ಣು ತಿಂದ ನಂತರ ಹಾಲು ಕುಡಿಯಬಾರದು ..! ಇಲ್ಲಿದೆ ಕಾರಣ

Thu, 02 Jun 2022-3:13 pm,

ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬೇಸಿಗೆಯ ಧಗೆಯನ್ನು ತಪ್ಪಿಸಲು ಜನರು ಎಲ್ಲಾ ವಿಧಾನಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಬೇಸಿಗೆ ಬಂತೆಂದರೆ ಪ್ರತಿಯೊಬ್ಬರ ಮನದಲ್ಲಿ ಕಲ್ಲಂಗಡಿ  ಹಣ್ಣು  ಖಂಡಿತ ಬರುತ್ತದೆ. ಕಲ್ಲಂಗಡಿ ತಿನ್ನಲು ರುಚಿಕರ ಮಾತ್ರವಲ್ಲ, ದೇಹಕ್ಕೆ ನೀರನ್ನು ಪೂರೈಸುತ್ತದೆ. ಇದು ದೇಹಕ್ಕೆ ಅಗತ್ಯವಿರುವ ಅನೇಕ ಪೋಷಕಾಂಶಗಳನ್ನು ಪೂರೈಸುತ್ತದೆ. ಆದರೆ ನೀವು ಕಲ್ಲಂಗಡಿ ತಿನ್ನುವ ಮೊದಲು ಅಥವಾ ನಂತರ ಹಾಲು ಸೇವಿಸಿದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಕಲ್ಲಂಗಡಿ ಜೊತೆ ಹಾಲು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕಲ್ಲಂಗಡಿ ಮತ್ತು ಹಾಲು ಸೇವಿಸುವುದರಿಂದ ಆರೋಗ್ಯಕ್ಕೆ ಅನಾನುಕೂಲಗಲಾಗುತ್ತವೆ. 

ಕಲ್ಲಂಗಡಿ ಸೇವಿಸುವ ಮೊದಲು ಅಥವಾ ನಂತರ ತಕ್ಷಣವೇ ಹಾಲು ಕುಡಿಯಬಾರದು ಎನ್ನುವುದು ನೆನಪಿರಲಿ. ಕಲ್ಲಂಗಡಿಯಲ್ಲಿ ಕೆಲವು ಆಮ್ಲೀಯ ಗುಣಗಳು ಕಂಡುಬರುತ್ತವೆ. ಇದನ್ನು ಹಾಲಿನೊಂದಿಗೆ ಬೆರೆಸಿದಾಗ ಉದರದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.   ಸಾಮಾನ್ಯವಾಗಿ ಕೆಲವರಿಗೆ ಹಾಲು ಮತ್ತು ಕಲ್ಲಂಗಡಿ ಹಣ್ಣನ್ನು ಒಟ್ಟಿಗೆ ಸೇವಿಸುವುದರಿಂದ ಗ್ಯಾಸ್ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳು ಪ್ರಾರಂಭವಾಗುತ್ತವೆ.

ಹಾಲು ಮತ್ತು ಕಲ್ಲಂಗಡಿಗಳನ್ನು ಒಟ್ಟಿಗೆ ಸೇವಿಸುವುದರಿಂದ, ಅವು ಹೊಟ್ಟೆಯಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಇದರಿಂದಾಗಿ ಕೆಲಾರಿಗೆ ವಾಕರಿಕೆ ಮತ್ತು ವಾಂತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಎರಡು ಪದಾರ್ಥಗಳ ಸ್ವಭಾವವು ಒಂದಕ್ಕೊಂದು ಭಿನ್ನವಾಗಿರುತ್ತದೆ. ಈ ಕಾರಣದಿಂದ ಅವು ದೇಹದಲ್ಲಿ ಜೀರ್ಣವಾಗದೆ ಮತ್ತೆ ಹೊರಬರುತ್ತವೆ.

ಕಲ್ಲಂಗಡಿ ತಿಂದ ನಂತರ ಹಾಲು ಕುಡಿಯಲು ಅಥವಾ ಹಾಲು ಕುಡಿದ ನಂತರ ಕಲ್ಲಂಗಡಿ ಹಣ್ಣು ತಿನ್ನಬೇಕಾದರೆ ಕನಿಷ್ಠ 2 ಗಂಟೆಗಳ ಕಾಲ ಅಂತರ ಇರಬೇಕು.  ಇಲ್ಲವಾದರೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.  ============

ZEENEWS TRENDING STORIES

By continuing to use the site, you agree to the use of cookies. You can find out more by Tapping this link