ಇನ್ನೆರಡು ದಿನಗಳಲ್ಲಿ ಈ ರಾಶಿಯಲ್ಲಿ ಲಕ್ಷ್ಮೀ ನಾರಾಯಣ ಯೋಗ !ಜೊತೆಗಿದ್ದು ಹರಸುತ್ತಿರುತ್ತಾಳೆ ಮಹಾಲಕ್ಷ್ಮೀ ! ನನಸಾಗುವುದು ಸ್ವಂತ ಮನೆಯ ಕನಸು

Tue, 08 Oct 2024-8:49 am,

ಇನ್ನೆರಡು ದಿನಗಳಲ್ಲಿ ಲಕ್ಷ್ಮೀ ನಾರಾಯಣ ಯೋಗ ರೂಪುಗೊಳ್ಳಲಿದೆ.ಈ ಕಾರಣದಿಂದ ಕೆಲವು ರಾಶಿಯವರ ಮೇಲೆ ತಾಯಿ ಲಕ್ಷ್ಮೀಯ ವಿಶೇಷ ಅನುಗ್ರಹ ಇರಲಿದೆ.      

ಮೇಷ ರಾಶಿ : ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರುವಿರಿ.ಲಕ್ಷ್ಮೀಯ ಕೃಪೆಯಿಂದ ಸಂಪತ್ತಿನಲ್ಲಿ ಹೆಚ್ಚ್ಳವಾಗುವುದು.ಜೀವನದಲ್ಲಿ ನೆಮ್ಮದಿ ಹೆಚ್ಚುವುದು. ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದು.   

ಮಿಥುನ ರಾಶಿ :ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ.ಬುಧ ಮತ್ತು ಶುಕ್ರರ ಸಂಯೋಗದಿಂದ  ಈ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಳೆಯ ಹೂಡಿಕೆಗಳು ಉತ್ತಮ ಆದಾಯವನ್ನು ನೀಡಬಹುದು.ಮನೆಯಲ್ಲಿ ಸಂತೋಷದ ವಾತಾವರಣ ಇರುವುದು.

ಸಿಂಹ ರಾಶಿ : ಲಕ್ಷ್ಮೀ ನಾರಾಯಣ ಯೋಗವು ಸಿಂಹ ರಾಶಿಯವರ ಆದಾಯದ ಮೂಲವನ್ನು ಹೆಚ್ಚಿಸುತ್ತದೆ.ವೃತ್ತಿ, ಕುಟುಂಬ,ಸಂಬಂಧಗಳಂತಹ ಪ್ರತಿಯೊಂದು ಕ್ಷೇತ್ರದಲ್ಲೂ ಒಳ್ಳೆಯದೇ ಆಗುವುದು. ಉತ್ತಮ ಹಣವನ್ನು ಗಳಿಸುವುದು ಮಾತ್ರವಲ್ಲದೆ ಬಹಳಷ್ಟು ಉಳಿತಾಯವನ್ನೂ ಮಾಡುವಿರಿ.   

ಕನ್ಯಾ ರಾಶಿ : ಶುಭ ಯೋಗದ ಕಾರಣ,ಮನಸ್ಸಿನ ಆಸೆಗಳು ಈಡೇರುತ್ತವೆ. ಆರೋಗ್ಯವೂ ಉತ್ತಮವಾಗಿರುತ್ತದೆ.ವೃತ್ತಿಜೀವನದಲ್ಲಿ ಬೆಳವಣಿಗೆಗೆ ಉತ್ತಮ ಅವಕಾಶಗಳು ಸಿಗುತ್ತವೆ. ಆದಾಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಕುಟುಂಬ ಮತ್ತು ವೈವಾಹಿಕ ಜೀವನವು ಉತ್ತಮವಾಗಿರುತ್ತದೆ.  

ತುಲಾ ರಾಶಿ :ಈ ಅವಧಿಯಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಭೂಮಿ ಮತ್ತು ಆಸ್ತಿಯನ್ನು ಖರೀದಿಸುವ ಅವಕಾಶ ಸಿಗುವುದು.ಸ್ವಂತ ವ್ಯವಹಾರ ನಡೆಸುತ್ತಿದ್ದರೆ,ಉತ್ತಮ ಲಾಭ ಗಳಿಸುವಿರಿ.  ಆರೋಗ್ಯವು ಉತ್ತಮವಾಗಿರುತ್ತದೆ.   

ಕುಂಭ ರಾಶಿ : ಯಾವುದೇ ಕೆಲಸ ಮಾಡಿದರೂ ಯಶಸ್ಸು ನಿಮ್ಮದಾಗುವುದು.ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುತ್ತಾರೆ. ಉದ್ಯೋಗಸ್ಥರಿಗೆ ಈ ಅವಧಿಯಲ್ಲಿ ಉತ್ತಮ ಅವಕಾಶಗಳು ಒದಗಿ ಬರುವುದು. ವೈವಾಹಿಕ ಜೀವನವು ಉತ್ತಮವಾಗಿರುತ್ತದೆ.   

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ, ZEE NEWS ಅದನ್ನು ಖಚಿತಪಡಿಸುವುದಿಲ್ಲ  

ZEENEWS TRENDING STORIES

By continuing to use the site, you agree to the use of cookies. You can find out more by Tapping this link