ಮತ್ತೊಮ್ಮೆ ಒಡೆದು ಚೂರಾಯ್ತು ಖ್ಯಾತ ನಟಿಯ ಹೃದಯ..ಸುಂದರಿಯ ಕೈ ಬಿಟ್ಟು ಹೋಗಿದ್ದೇಕೆ ಇನಿಯ..?
ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮತ್ತೊಮ್ಮೆ ತಮ್ಮ ರಿಲೇಷನ್‌ಶಿಪ್‌ನ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ನಟಿ ರಾಹುಲ್ ಮೋದಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಹಳ ದಿನಗಳಿಂದ ಭಾರಿ ಸುದ್ದಿಯಲ್ಲಿತ್ತು. ಈ ಜೋಡಿ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಈ ವದಂತಿಗಳಿಗೆ ಪುಷ್ಠಿ ನೀಡಿದ್ದರು. ಆದರೆ ಈಗ ಈ ಜೋಡಿ ಪರಸ್ಪರ ದೂರವಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಮಾಧ್ಯಮ ವರದಿಗಳ ಪ್ರಕಾರ, ಶ್ರದ್ಧಾ ಕಪೂರ್ ತನ್ನ ವದಂತಿಯ ಗೆಳೆಯ ರಾಹುಲ್ ಮೋದಿಯೊಂದಿಗೆ ಬ್ರೇಕ್‌ಅಪ್ ಮಾಡಿಕೊಂಡಿದ್ದಾರೆ.ನಟಿ ತಮ್ಮ ಗೆಳೆಯನನ್ನು ಇನ್ಸ್ಟಾಗ್ರಾಮ್‌ನಲ್ಲಿ( Instagram)ಅನ್ ಫಾಲೋ ಮಾಡಿದ್ದು, ಈ ಚರ್ಚೆಗಳು ಹುಟ್ಟಿಕೊಂಡಿವೆ. ರಾಹುಲ್ ಮಾತ್ರವಲ್ಲ, ರಾಹುಲ್ ಅವರ ಸಹೋದರಿ, ಅವರ ಪ್ರೊಡಕ್ಷನ್ ಹೌಸ್ ಮತ್ತು ಅವರ ನಾಯಿಯ ಖಾತೆಯನ್ನೂ ಅವರು ಅನ್ ಫಾಲೋ ಮಾಡಿದ್ದಾರೆ.
ಆದರೂ ರಾಹುಲ್ ಮೋದಿ ಇನ್ನೂ ಶ್ರದ್ಧಾ ಕಪೂರ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ಇದರಿಂದಾಗಿ ಇವರಿಬ್ಬರು ಬೇರೆಯಾಗಿದ್ದಾರೆ ಎಂದು ಅಭಿಮಾನಿಗಳು ಊಹೆ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಂಬಂಧವನ್ನು ಬಹುತೇಕ ಅಧಿಕೃತಗೊಳಿಸಿದ ನಂತರ, ಶ್ರದ್ಧಾ ರಾಹುಲ್ ಅವರನ್ನು ಅನ್ ಫಾಲೋ ಮಾಡಿದ್ದು ಎಲ್ಲರ ಗಮನ ಸೆಳೆದಿದೆ. ಆದರೆ, ಈ ಬಗ್ಗೆ ಜೋಡಿ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಅಂಬಾನಿ ಕುಟುಂಬದ ಸಮಾರಂಭದಲ್ಲಿ ರಾಹುಲ್ ಮೋದಿ ಜೊತೆ ಶ್ರದ್ಧಾ ಕಪೂರ್ ಕೂಡ ಕಾಣಿಸಿಕೊಂಡಿದ್ದರು. ಇದಲ್ಲದೇ ಕೆಲವು ದಿನಗಳ ಹಿಂದೆ ಸ್ಟ್ರೀ 2 ನಟಿ ರಾಹುಲ್ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.ಇದಾದ ನಂತರ ಇಬ್ಬರೂ ಮದುವೆಯಾಗಬಹುದು ಎಂಬ ಸುದ್ದಿ ಹಬ್ಬಿತ್ತು. ಆದರೆ, ಈಗ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ ನಂತರ ಈ ವದಂತಿಗಳಿಗೆ ತೆರೆ ಬಿದ್ದಿದೆ.
ಶ್ರದ್ಧಾ ಕಪೂರ್ ಮತ್ತು ರಾಹುಲ್ ಮೋದಿ ಮೊದಲು ಭೇಟಿಯಾದದ್ದು ತು ಜೂಥಿ ಮೈನ್ ಮಕ್ಕರ್ ಚಿತ್ರದ ಸಮಯದಲ್ಲಿ. ಇಬ್ಬರ ನಡುವೆ ಒಳ್ಳೆ ಗೆಳೆತನವಿತ್ತು ನಂತರ ಪರಸ್ಪರ ಹತ್ತಿರವಾದರು. ವರದಿಗಳನ್ನು ನಂಬುವುದಾದರೆ, ದಂಪತಿಗಳು ಕಳೆದ 2 ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಆದರೆ, ರಾಹುಲ್ ಜೊತೆಗಿನ ಸಂಬಂಧವನ್ನು ಶ್ರದ್ಧಾ ಕಪೂರ್ ಖಚಿತಪಡಿಸಿಲ್ಲ.