ಸಲ್ಮಾನ್ ಖಾನ್ ಸಿನಿಮಾವನ್ನೇ ರಿಜೆಕ್ಟ್ ಮಾಡಿದ್ದ ಬ್ಯೂಟಿ, ಸದ್ಯ ಅತಿಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ನಟಿ, ಈಕೆ ಯಾರ್ ಗೊತ್ತಾ!
ಮನೋವಿಜ್ಞಾನದಲ್ಲಿ ಹೆಸರು ಮಾಡುವ ಗುರಿಯಿಂದ ಬೋಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸ ಮಾಡುತ್ತಿದ್ದ ಈಕೆ ಫ್ಲಾಪ್‌ಗಳೊಂದಿಗೆ ವೃತ್ತಿ ಜೀವನ ಆರಂಭಿಸಿದ್ದರು.
ತಾವು ವಿದ್ಯಾರ್ಥಿಯಾಗಿದ್ದಾಗ ಕಾಫಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಈಕೆ ಬಾಲಿವುಡ್‌ನ ಖ್ಯಾತ ಖಳನಟ ಶಕ್ತಿ ಕಪೂರ್ ಪುತ್ರಿ.
ಈ ಸುಂದರಿ 17 ವರ್ಷದವರಾಗಿದ್ದಾಗ ಸಲ್ಮಾನ್ ಖಾನ್ ಅಭಿನಯದ ಚಿತ್ರಕ್ಕೆ ಆಫರ್ ಬಂತಿತ್ತಾದರೂ ಅಧ್ಯಯನಕ್ಕೆ ತೊಡಕುಂಟಾಗಬಾರದೆಂದು ಆ ಚಿತ್ರವನ್ನೆ ರಿಜೆಕ್ಟ್ ಮಾಡಿದ್ದರು.
ಫ್ಲಾಪ್‌ಗಳೊಂದಿಗೆ ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ಇಂದು ಬಾಲಿವುಡ್ ಸ್ಟಾರ್ ನಟಿಯರ ಸರಿಸಮನಾಗಿ ನಿಂತಿರುವ ಈ ನಟಿ ಬೇರಾರೂ ಅಲ್ಲ ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್.
ಅಮಿತಾಬ್ ಬಚ್ಚನ್, ಬೆನ್ ಕಿಂಗ್ಸ್ಲಿ ಮತ್ತು ಆರ್ ಮಾಧವನ್ ಜೊತೆಗೆ 'ತೀನ್ ಪಟ್ಟಿ'ಯಲ್ಲಿ ಮೊದಲಿಗೆ ಬಣ್ಣ ಹಚ್ಚಿದ್ದ ಶ್ರದ್ಧಾ ಹೆಚ್ಚು ಹೆಸರು ಮಾಡಲಿಲ್ಲ. ಅವರ ಲವ್ ಕಾ ದಿ ಎಂಡ್ ಸಿನಿಮಾ ಕೂಡ ಸೂಪರ್ ಫ್ಲಾಪ್. ಆದರೆ, 'ಆಶಿಕಿ 2' ಸಿನಿಮಾ ಮೂಲಕ ಈಕೆ ಹಿಂದಿರುಗಿ ನೋಡಲೇ ಇಲ್ಲ.
ಸದ್ಯ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ಅಭಿನಯಿಸಿ ಮೋಡಿ ಮಾಡಿರುವ ಶ್ರದ್ಧಾ ಕಪೂರ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ನಲ್ಲಿ 91.9 ಮಿಲಿಯನ್ ಅನುಯಾಯಿಗಳೊಂದಿಗೆ ಅತ್ಯಂತ ಜನಪ್ರಿಯ ಭಾರತೀಯ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.
ದೇಸೀ ಗರ್ಲ್ ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ನಲ್ಲಿ 91.8 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಎರಡನೇ ಅತ್ಯಂತ ಜನಪ್ರಿಯ ಭಾರತೀಯ ಸೆಲೆಬ್ರೆಟಿ ಎನಿಸಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ಫಾಲೋವರ್ಸ್‌ನಲ್ಲಿ 91.3 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.