Shravan Masa 2021: ಈ ಗಿಡವನ್ನು ಸಾಕ್ಷಾತ್ ಶಿವ ಸ್ವರೂಪಿ ಎನ್ನಲಾಗುತ್ತದೆ, ನಿಮ್ಮ ಮನೆಯಲ್ಲಿಯೂ ಇದೆಯಾ?

Tue, 03 Aug 2021-3:01 pm,

1. ಚಮತ್ಕಾರದಿಂದ ಕೂಡಿದೆ ಈ ಸಸ್ಯ - ರುದ್ರಾಕ್ಷ ಧರಿಸುವುದರಿಂದ ಮನಸ್ಸಿನಲ್ಲಿನ ಹಾಗೂ ಶರೀರದಲ್ಲಿನ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಇದನ್ನು ನಿಮ್ಮ ಬಳಿ ಇಡುವುದರಿಂದ ನಿಮ್ಮಲ್ಲಿನ ನಕಾರಾತ್ಮಕ ವಿಚಾರಗಳು ದೂರವಾಗುತ್ತವೆ. ಅನಾವಶ್ಯಕ ಭಯದಿಂದ ಮುಕ್ತಿ ಸಿಗುತ್ತದೆ. ನಿರಾಸೆ ಹಾಗೂ ಆಲಸ್ಯ ದೂರವಾಗುತ್ತದೆ ಹಾಗೂ ಮನಸ್ಸಿನಲ್ಲಿ ಕೆಲಸ ಮಾಡುವ ಶಕ್ತಿಯ ಸಂಚಾರವಾಗುತ್ತದೆ.

2. ದೇವಾದಿದೇವ ಶಿವನಿಗೆ ಪ್ರಿಯ ಈ ರುದ್ರಾಕ್ಷ - ಒಂದು ವೇಳೆ ಯಾರಾದರು ದೇವಾಧಿದೇವ ಶಿವನ ಜೊತೆಗೆ ಶ್ರೀಗಣೇಶನ ಕೃಪೆ ಬಯಸುತ್ತಿದ್ದರೆ, ಅವರು ಗಣೇಶ ರುದ್ರಾಕ್ಷ ಧರಿಸಬೇಕು. ಇದು ಗಣೇಶ ಸ್ವರೂಪಿ ರುದ್ರಾಕ್ಷವಾಗಿದೆ. ಇದನ್ನು ಧರಿಸುವುದರಿಂದ ಮನುಷ್ಯನ ಮಾನಸಿಕ ಸಂತುಲನ ಸರಿಯಾಗಿರುತ್ತದೆ ಹಾಗೂ ಸಂಕಷ್ಟದ ಪರಿಸ್ಥಿತಿಯಲ್ಲಿ ಆತ ಯಾವುದೇ ಹೆದರಿಕೆ ಇಲ್ಲದೆ ನಿರ್ಣಯಗಳನ್ನು ಕೈಗೊಳ್ಳುತ್ತಾನೆ. ಇದರಿಂದ ಆತನ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹರಿಸುತ್ತವೆ ಎನ್ನಲಾಗುತ್ತದೆ.

3. ಅದ್ಭುತ ಲಾಭಗಳಾಗುತ್ತವೆ - ದೇವಾದಿದೇವ  ಮಹಾದೇವನಿಗೆ ಇಷ್ಟವಾಗಿರುವ ಈ ರುದ್ರಾಕ್ಷದಿಂದ ನಮ್ಮ ಜೀವನದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ರುದ್ರಾಕ್ಷ ಚಿಕ್ಕದಾದಷ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಎನ್ನಲಾಗುತ್ತದೆ.  ಈ ರುದ್ರಾಕ್ಷ ಸಫಲತೆ, ಧನ-ಸಂಪತ್ತು, ಮಾನ-ಸನ್ಮಾನ ಹೆಚ್ಚಿಸುತ್ತದೆ.

4. ಪ್ರತಿಯೊಂದು ಸಮಸ್ಯೆಯ ಪರಿಹಾರ ರುದ್ರಾಕ್ಷ - ಶಿವ ಸಮಸ್ತ ಲೋಕ ಕಲ್ಯಾಣಕ್ಕಾಗಿ ತನ್ನ ಕಣ್ಣುಗಳಿಂದ ಕಣ್ಣಿರ ಹನಿಯ ರೂಪದಲ್ಲಿ ರುದ್ರಾಕ್ಷವನ್ನು ಉತ್ಪತ್ತಿಸಿದ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಶಿವನ ಕಣ್ಣಿನಿಂದ ಬಂದ ಮೊದಮೊದಲ ಹನಿಗಳನ್ನು ಏಕಮುಖಿ ರುದ್ರಾಕ್ಷ ಎಂದು ಕರೆಯಲಾಗುತ್ತದೆ. ಏಕಮುಖಿ ರುದ್ರಾಕ್ಷವನ್ನು ತುಂಬಾ ಮಹತ್ವಪೂರ್ಣ ಹಾಗೂ ಕಲ್ಯಾಣಕಾರಿ ಎನ್ನಲಾಗುತ್ತದೆ. ಜೋತಿಷ್ಯ ಮಾನ್ಯತೆಗಳ ಅನುಸಾರ ಮನೆಯಂಗಳದಲ್ಲಿ ಅಥವಾ ಮನೆಯ ಅಕ್ಕಪಕ್ಕಕ್ಕೆ ಇರುವುದು ಶುಭಕರ ಎಂದು ಹೇಳಲಾಗುತ್ತದೆ.

5. ವಿಭಿನ್ನ ಲಾಭಗಳಿವೆ - ಹಲವು ರೀತಿಯ ರುದ್ರಾಕ್ಷಗಳಿರುತ್ತವೆ. ದ್ವಿಮುಖ ರುದ್ರಾಕ್ಷವನ್ನು ಶಿವ ಶಕ್ತಿಯ ಸ್ವರೂಪ ಎನ್ನಲಾಗುತ್ತದೆ. ಇದನ್ನು ಧರಿಸುವುದರಿಂದ ಪತಿ-ಪತ್ನಿ, ತಂದೆ-ಮಗನ ಸಂಬಂಧದಲ್ಲಿ ಸುಮಧುರ ಭಾವ ನಿರ್ಮಾಣಗೊಳ್ಳುತ್ತದೆ. ಜನ್ಮ ಜಾತಕದಲ್ಲಿ ಒಂದು ವೇಳೆ ಚಂದ್ರ ದುರ್ಬಲನಾಗಿದ್ದರೆ, ಎರಡು ಮುಖಗಳ ರುದ್ರಾಕ್ಷ ಧಾರಣೆಯಿಂದ ವ್ಯಕ್ತಿ ಮಾನಸಿಕವಾಗಿ ಬಲಶಾಲಿಯಾಗುತ್ತಾನೆ ಹಾಗೂ ಸರಿಯಾದ ನಿರ್ಣಯಗಳನ್ನು ಕೈಗೊಳ್ಳುತ್ತಾನೆ. ನಾಲ್ಕು ಮುಖಗಳ ನೇಪಾಳಿ ರುದ್ರಾಕ್ಷ ಧರಿಸುವುದರಿಂದ ಸ್ಮರಣ ಶಕ್ತಿ ಹೆಚ್ಚಾಗುವುದರ ಜೊತೆಗೆ ಆತನ ಮಾತಿನಲ್ಲಿ ಮೃದುತ್ವ ಬರುತ್ತದೆ. ಮಕ್ಕಳಿಗೆ ಈ ರುಧ್ರಾಕ್ಷ ಧರಿಸುವುದರಿಂದ ಅವರ ಹಟಮಾರಿ ಸ್ವಭಾವ ದೂರವಾಗುತ್ತದೆ. ರುದ್ರಾಕ್ಷವನ್ನು ನುರಿತ ಜೋತಿಷ್ಯ ಪಂಡೀತರ ಅವಗಾಹನೆಯಲ್ಲಿ ಮಾತ್ರ ಧರಿಸಬೇಕು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link