Shreerastu Shubhamastu Serial: ಶ್ರೀರಸ್ತು ಶುಭಮಸ್ತು ಸಿರೀಯಲ್ ನಟ ಮಾಧವ್ ಅವರ ಪತ್ನಿ ಯಾರು ಗೊತ್ತೇ? ಅವರೂ ಕೂಡ ಫೇಮಸ್ ಸೆಲೆಬ್ರಿಟಿ!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸಿರೀಯಲ್‌ನಲ್ಲಿ ಹಿರಿಯ ಕಲಾವಿದರ ಬಳಗವೇ ಇದೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಧಾರವಾಹಿ ಎಂದರೇ ತಪ್ಪಾಗುವುದಿಲ್ಲ..
ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಚಂದನವನದ ಚೆಂದದ ನಟಿ ಸುಧಾರಾಣಿ ಸಹ ನಟಿಸಿದ್ದಾರೆ.. ಸದ್ಯ ಟಾಪ್ ಸಿರೀಯಲ್‌ಗಳಲ್ಲಿ ಒಂದು ಎನಸಿಕೊಂಡಿರುವ ಇದರಲ್ಲಿ ಎಲ್ಲ ಪಾತ್ರಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ..
ಶ್ರೀರಸ್ತು ಶುಭಮಸ್ತು ಸಿರೀಯಲ್‌ನಲ್ಲಿ ನಟ ಮಾಧವ್ ಅಲಿಯಾಸ್ ಅಜಿತ್ ತಮ್ಮ ವಯಸ್ಸಿಗೆ ಮೀರಿದ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಧಾರವಾಹಿಯಲ್ಲಿ ಹಿರಿಯ ಪಾತ್ರ ನಿರ್ವಹಿಸುತ್ತಿರುವ ಇವರಿಗೆ ನಿಜ ಜೀವನದಲ್ಲಿ 4 ವರ್ಷದ ಪುಟ್ಟ ಮಗನಿದ್ದಾನೆ..
ಸಾಕಷ್ಟು ಧಾರವಾಹಿಗಳ ಪಾತ್ರಕ್ಕೆ ಜೀವತುಂಬಿದ ನಟ ಅಜಿತ್ ಅಮೇರಿಕಾದಲ್ಲಿ ನಟನಾ ತರಬೇತಿಯನ್ನು ಪಡೆದಿದ್ದಾರೆ.. ಇವರಿಗೆ ಸ್ವಾಭಾವಿಕವಾಗಿ ಅತೀ ಬೇಗನೇ ಕೂದಲು ಬೆಳ್ಳಗಾಗಿದ್ದು ಅದಕ್ಕೆ ಡೈ ಹಾಕಲು ಇಷ್ಟವಿಲ್ಲದೇ ಹಾಗೇ ಬಿಟ್ಟಿದ್ದಾರಂತೆ..
ಇನ್ನು ನಟ ಮಾಧವ್ ಅವರ ಪತ್ನಿ ಹೆಸರು ಸಿಂಧು.. ಇವರು ಕೂಡ ಜನಪ್ರಿಯ ಸೆಲೆಬ್ರಿಟಿ.. ಎಂದರೇ ಸಿಂಧು ಅವರು ಗಾಯಕಿ ಹಾಗೂ ಚಿತ್ರಕಲಾವಿದೆ ಕೂಡ ಆಗಿದ್ದಾರೆ..
ಸದ್ಯ ಈ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಮಾಧವ್ ಅವರ ನಟನೆಗೆ ಕಿರುತೆರೆ ಪ್ರೇಕ್ಷಕರು ಫಿದಾ ಆಗಿದ್ದಾರೆ.. ಅಪ್ಪನಾಗಿ, ಪತ್ನಿಗೆ ಒಳ್ಳೆಯ ಪತಿಯಾಗಿ ಕಾಣಿಸಿಕೊಂಡಿರುವ ಅವರು ತಮ್ಮ ಅದ್ಭುತ ನಟನೆಯ ಮೂಲಕವೇ ಎಲ್ಲರನ್ನು ರಂಜಿಸುತ್ತಿದ್ದಾರೆ..