Shrirasthu shubhamasthu serial: ಶ್ರೀರಸ್ತು ಶುಭಮಸ್ತು ಅವಿ ನಿಜಕ್ಕೂ ಯಾರು ಗೊತ್ತಾ? ಇವರ ಹಿನ್ನಲೆ ಕೇಳಿದ್ರೆ ಶಾಕ್ ಆಗ್ತೀರಾ!!
ಜೀ ಕನ್ನಡದಲ್ಲಿ ಸಾಕಷ್ಟು ಜನಪ್ರಿಯ ಧಾರವಾಹಿಗಳು ಪ್ರಸಾರವಾಗುತ್ತಿವೆ.. ಅದರಲ್ಲಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸೀರಿಯಲ್‌ನಲ್ಲಿ ಖ್ಯಾತ ನಟಿ ಸುಧಾರಾಣಿ ಹಾಗೂ ಅಜಿತ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿರೀಯಲ್ ಅಭಿಮಾನಿಗಳ ಫೇವರೆಟ್ ಆಗಿದೆ ಎಂದರೇ ತಪ್ಪಾಗುವುದಿಲ್ಲ..
ದಿನೇ ದಿನೇ ಕುತೂಹಲ ಕೆರಳಿಸುತ್ತಿರುವ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಅವಿನಾಶ್ ಪಾತ್ರ ಕೆಲವು ಜನರಿಗೆ ಇಷ್ಟವಾದರೇ ಇನ್ನು ಕೆಲವರಿಗೆ ಇಷ್ಟವಾಗಿಲ್ಲ.. ಅಂತಹ ವಿಭಿನ್ನ ಪಾತ್ರ ಅದು.. ಹಾಗಾದ್ರೆ ಈ ಅವಿ ಪಾತ್ರದಲ್ಲಿ ಮಿಂಚುತ್ತಿರುವ ನಟನ ಹೆಸರು ಏನು? ಇವರ ಹಿನ್ನಲೆ ಏನು? ಇದೆಲ್ಲದರ ಸಣ್ಣ ಮಾಹಿತಿ ಇಲ್ಲಿದೆ..
ಸದ್ಯ ಟಾಪ್ ಸಿರೀಯಲ್‌ಗಳಲ್ಲಿ ಒಂದೆನಿಸಿಕೊಂಡ ಶ್ರೀರಸ್ತು ಶುಭಮಸ್ತುದಲ್ಲಿ ಅವಿನಾಶ್ ಪಾತ್ರದಲ್ಲಿ ನಟಿಸುತ್ತಿರುವ ನಟನ ಹೆಸರು ಅರ್ಫತ್.. ಮುಸ್ಲಿಂ ಧರ್ಮದವರಾಗಿದ್ದರೂ ಅಷ್ಟು ಅಚ್ಚುಕಟ್ಟಾಗಿ ಕನ್ನಡ ಮಾತನಾಡುವ ಕಲಾವಿದ..
ಅವಿನಾಶ್ ಅಲಿಯಾಸ್ ಅರ್ಫತ್ ಶ್ರೀರಸ್ತು ಶುಭಮಸ್ತುಗೂ ಮುನ್ನ ನನ್ನರಸಿ ರಾಧೆ ಸೇರದಂತೆ ಸಾಕಷ್ಟು ಧಾರವಾಹಿಗಳಲ್ಲಿ ನಟಿಸಿದ್ದಾರೆ.. ಇಷ್ಟೇ ಅಲ್ಲ ಇವರು ನಾಯಕನಾಗಿ ಸಿನಿಮಾದಲ್ಲಿಯೂ ನಟಿಸಿದ್ದಾರೆ.. ಇವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು ಶ್ರೀರಸ್ತು ಶುಭಮಸ್ತು ಅವಿ ಪಾತ್ರ..
ಸಾಕಷ್ಟು ಜಾಹೀರಾತುಗಳಲ್ಲಿಯೂ ಮಿಂಚಿರುವ ನಟ ಅರ್ಫತ್ ಶ್ರೀರಸ್ತು ಶುಭಮಸ್ತು ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.. ಇದ್ದರೆ ಇವರಂತಹ ಪತಿ ಇರಬೇಕು ಎಂದು ಫ್ಯಾನ್ಸ್ ಆಸೆ ಪಡುತ್ತಿದ್ದಾರೆ..