ಮಗಳ ಜೊತೆ ಶ್ರೇಯಾ ಫೋಟೋ ಶೂಟ್..! ಕ್ಯೂಟ್ ಎಂದ ಫ್ಯಾನ್ಸ್
ನಟಿ ಶ್ರೇಯಾ ತನ್ನ ಮಗಳ ಜೊತೆ ಫೋಟೋ ಶೂಟ್ ಮಾಡಿಸಿದ್ದು, ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಅಮ್ಮ ಮಗಳ ತುಂಟಾಟದ ಫೋಟೋಗಳನ್ನು ನೋಡಿದ ನೆಟ್ಟಿಗರು ಕ್ಯೂಟ್ ಎನ್ನುತ್ತಿದ್ದಾರೆ.
ಶ್ರೇಯಾ ಹೆಚ್ಚಾಗಿ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದು, ಇತ್ತೀಚಿಗೆ ಕಬ್ಜ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಕಬ್ಜ ಸಿನಿಮಾದಲ್ಲಿ ಉಪೇಂದ್ರ ಮತ್ತು ಶಿವರಾಜ್‌ಕುಮಾರ್ ಜೊತೆಯಾಗಿ ಶ್ರೇಯಾ ನಟಿಸಿದ್ದರು.
ಅಲ್ಲದೆ ಸ್ನೇಹಾನಾ ಪ್ರೀತಿನಾ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಶ್ರೇಯಾ ಕಾಲಿಟ್ಟಿದ್ದರು.
ಇನ್ನು ಇತ್ತೀಚೆಗಷ್ಟೇ ಶ್ರೇಯಾ ತನ್ನ ಮಗಳ ಜೊತೆ ಫೋಟೋ ಶೂಟ್ ಮಾಡಿಸಿದ್ದಾರೆ.
ಈ ಫೋಟೋಗಳೊಂದಿಗೆ ಅಭಿಮಾನಿಗಳು ಹಾರ್ಟ್ ಇಮೋಜಿ ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.