Ayodhya Ram Mandir: ಶ್ರೀರಾಮ ಮಂದಿರದಿಂದಲೇ ರಾಜಕೀಯ ಭರವಸೆ ಈಡೇರಿದೆ ಎಂದ ನಟಿ: ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಶೃತಿ!

Tue, 23 Jan 2024-5:57 pm,

 ಶ್ರೀರಾಮ ಮಂದಿರ ಉದ್ಘಾಟನೆ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಹಲವು ವಿರೋಧ ವ್ಯಕ್ತಪಡಿಸಿದ್ದಾರೆ. ಇದೀಗ ನಟಿ ಶೃತಿ ಹರಿಹರನ್ ಇನ್ನೊಂದು ಧರ್ಮದ ಪ್ರವಿತ್ರ ಸ್ಥಳದಲ್ಲಿ ದೇವಸ್ಥಾನ ಕಟ್ಟಿರೋದ ಅಸಮಧಾನ ಹೆಚ್ಚಿಸಿದೆ ಎಂದಿದ್ದಾರೆ. 

ನೇರ ನುಡಿಯ ನಟಿ ಶೃತಿ ಹರಿಹರನ್  ಈಗ ಸಂವಿಧಾನದ ಪ್ರತಿಯನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಶ್ರೀರಾಮ ಮಂದಿರ ಉದ್ಘಾಟನೆ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ. 

ನಟಿ ಶೃತಿ ಹರಿಹರನ್‌ ಪೋಸ್ಟ್‌ನಲ್ಲಿ "ನಾನು ಏನನ್ನು ನಂಬುತ್ತೇನೋ ಅದರ ಹಿಂದೆ ಹೋಗುವುದು ಇದೀಗ ಉತ್ತಮ ಪ್ರವೃತ್ತಿಯಾಗಿಟ್ಟಿದೆ. ಇಂತಹ ಸಮಯದಲ್ಲಿ ಸಂವಿಧಾನವನ್ನು ನೆನಪಿಟ್ಟುಕೊಳ್ಳುವುದು ಏಕೆ ಮುಖ್ಯ? ಧರ್ಮದ ವಿಷಯದಲ್ಲಿ ದೇಶವು ತಟಸ್ಥವಾಗಿರಬೇಕೆಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಇದು ಯಾವುದೇ ಧರ್ಮದ ವಿರುದ್ಧ ತಾರತಮ್ಯ ಅಥವಾ ಪೋಷಣೆ ಮಾಡುವಂತಿಲ್ಲ. ನಾನಿಲ್ಲಿ ರಾಜಕೀಕರಣ ಆಗುತ್ತಿರುವುದನ್ನು ಗಮನಿಸುತ್ತಿದ್ದೇನೆ. ಇದನ್ನೆಲ್ಲ ನೋಡಿ ಆರಾಮಾಗಿ ಕೂತು ಗಮನಿಸಲು ಸಾಧ್ಯವಿಲ್ಲ." ಎಂದು ಹೇಳಿದ್ದಾರೆ.

ಶೃತಿ ಹರಿಹರನ್ ಇದೇ ಪೋಸ್ಟ್‌ನಲ್ಲಿ ಶ್ರೀರಾಮನ ಬಗ್ಗೆನೂ  ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ "ಹೀಗೆ ಹೇಳುವುದರಲ್ಲಿ ಸಮಸ್ಯೆಯಿಲ್ಲ. ರಾಮನಲ್ಲಿರುವ ಸ್ವಭಾವಗಳಿಂದ ಯಾರು ಪ್ರೇರಿತರಾಗುವುದಿಲ್ಲ? ಹನುಮಂತ ತನ್ನ ಎದೆಯನ್ನು ಬಗೆದು ರಾಮನನ್ನು ತೋರಿಸುವುದು ನನಗೆ ಕಾಕತಾಳೀಯ ಅಂತ ಅನಿಸುವುದಿಲ್ಲ. ಬಹುಶ: ರಾಮ ನಮ್ಮೊಳಗೆ ಇದ್ದಾನೆ ಅಂತ ಹೇಳುವುದಕ್ಕಂತಲೇ ಉದ್ದೇಶಪೂರ್ವಕವಾಗಿ ಇದನ್ನು ಹೇಳಲಾಗಿದೆಯೇ?" ಎಂದಿದ್ದಾರೆ. 

ನಟಿ  ಶೃತಿ ಹರಿಹರನ್ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕಟ್ಟಿದ್ದಾರೆಂದು ಬೇಸರ ಹೊರ ಹಾಕುತ್ತಾ, "ಇನ್ನೊಂದು ಧರ್ಮದ ಪವಿತ್ರ ಸ್ಥಳದಲ್ಲಿ ದೇವಸ್ಥಾನ ಕಟ್ಟುವ ರಾಜಕೀಯ ಭರವಸೆ ನೀಡಿ, ಅದನ್ನೀಗ ಈಡೇರಿಸಿರುವುದು. ಅಲ್ಲದೆ ಅದನ್ನು ಸಂಭ್ರಮಿಸುತ್ತಿರುವ ರೀತಿ ಅಸಮಧಾನಕ್ಕೆ ಕಾರಣವಾಗಿದೆ." ಎಂದು ಹೇಳಿದ್ದಾರೆ

ಶೃತಿ ಹರಿಹರನ್ ಪೋಸ್ಟ್‌ಗೆ  ಕೆಲವರು ಅಸಮಧಾನ ಹೊರ ಹಾಕಿದ್ದಾರೆ. ಇದೇ ವೇಳೆ ಭಾರತೀಯ ಸಂವಿಧಾನ ಪ್ರತಿಯನ್ನು ಹಂಚಿಕೊಂಡಿದ್ದರ ಬಗ್ಗೆನೂ ಚರ್ಚೆ ಮಾಡುತ್ತಿದ್ದಾರೆ. 

ಶೃತಿ ಹರಿಹರನ್‌ ಪೋಸ್ಟ್‌ಗೆ ಮತ್ತೆ ಕೆಲವರು  ಬೆಂಬಲವನ್ನೂ ಸೂಚಿಸುತ್ತಿದ್ದಾರೆ. ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಬೆನ್ನಲ್ಲೇ ಕಿಶೋರ್, ಚೇತನ್ ಬಳಿಕ ಶ್ರುತಿ ಹರಿಹರನ್ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link