ಶ್ರುತಿ ಹಾಸನ್ ಫೋಟೋಶೂಟ್.. ಖಾಸಗಿ ಮ್ಯಾಗಜಿನ್​ ಮುಖಪುಟಕ್ಕಾಗಿ ಪೋಸ್​ ನೀಡಿದ ಬೆಡಗಿ

Wed, 19 Jan 2022-7:16 pm,

ಖ್ಯಾತ ನಟ ಕಮಲ್​ ಹಾಸನ್​ ಪುತ್ರಿ ನಟಿ ಶ್ರುತಿ ಹಾಸನ್​ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.ಮಾತ್ರವಲ್ಲದೆ ಹಲವು ಬ್ರ್ಯಾಂಡ್​ಗಳಿಗೆ ರೂಪದರ್ಶಿ ಆಗಿಯೂ ಮಿಂಚುತ್ತಿದ್ದಾರೆ. 

ತಮ್ಮ ಹೊಸ ಫೋಟೋಗಳನ್ನು ​instagram ಅಕೌಂಟ್ ನಲ್ಲಿ ಹಂಚಿಕೊಂಡಿದ್ದು, ಶ್ರುತಿ ಹಾಸನ್ ಅವರ ಫ್ಯಾನ್ಸ್​ ಮೆಚ್ಚುಗೆ ಸೂಚಿಸಿದ್ದಾರೆ. 

ಸದ್ಯ ಸಿನಿಮಾಗಳಲ್ಲಿ ಸಖತ್ ಬ್ಯುಸಿ ಇದ್ದಾರೆ ನಟಿ ಶ್ರುತಿ ಹಾಸನ್. ಕಳೆದ ವರ್ಷ ಅವರ 5 ಸಿನಿಮಾಗಳು ತೆರೆಕಂಡಿದ್ದವು. ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಶ್ರುತಿ ಹಾಸನ್​ ಅವರು ರಾಯಭಾರಿ ಆಗಿದ್ದಾರೆ. 

ಹಲವು ಜಾಹೀರಾತುಗಳಲ್ಲಿ ಅವರು ನಟಿಸುವ ಶ್ರುತಿ, ಇದಕ್ಕೆಲ್ಲ ಉತ್ತಮ ಸಂಭಾವನೆಯನ್ನೇ ಪಡೆಯುತ್ತಾರೆ. ನಟಿ ಶ್ರುತಿ ಹಾಸನ್ ಅವರು ಡೇಟಿಂಗ್ ವಿಚಾರಕ್ಕೂ ಆಗಾಗ ಸುದ್ದಿಯಾಗುತ್ತಾರೆ.    

ಈ ವರ್ಷ ಅವರ ಬಹುನಿರೀಕ್ಷಿತ ಸಲಾರ್ ಹಾಗೂ ನಂದಮೂರಿ ಬಾಲಕೃಷ್ಣ ಅವರ ಜೊತೆಗಿನ ಹೊಸ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link