ಶುಕ್ರ-ಬುಧ ಸಂಯೋಗದಿಂದ ರೂಪುಗೊಳ್ಳಲಿದೆ ಶುಭ ಯೋಗ; ಈ ರಾಶಿಯವರಿಗೆ ಅಪಾರ ಸಂಪತ್ತು ಸಿಗಲಿದೆ!
ಶುಕ್ರ ಗ್ರಹವು ತುಲಾ ರಾಶಿಯಲ್ಲಿ ಅಕ್ಟೋಬರ್ 13ರವರೆಗೆ ಸಂಚರಿಸಲಿದೆ. ಅಕ್ಟೋಬರ್ 10ರಂದು ಬುಧ ಸಹ ಈ ರಾಶಿಗೆ ಪ್ರವೇಶಿಸುತ್ತಾನೆ. ತುಲಾ ರಾಶಿಯಲ್ಲಿ ಬುಧ-ಶುಕ್ರ ಸಂಯೋಗ ಉಂಟಾಗಿ ಲಕ್ಷ್ಮೀನಾರಾಯಣ ಯೋಗ ರೂಪಗೊಳ್ಳುತ್ತದೆ. ನವಗ್ರಹಗಳಲ್ಲಿ ಶುಕ್ರ ಗ್ರಹವು ಸಂಪತ್ತು, ಸೌಂದರ್ಯ, ಐಷಾರಾಮಿ ಮತ್ತು ಪ್ರೀತಿಯ ಅಧಿಪತಿ. ಬುಧ ಗ್ರಹವು ಬುದ್ಧಿವಂತಿಕೆ, ಸಂವಹನ ಮತ್ತು ಹಾಸ್ಯ ಪ್ರಜ್ಞೆಯ ಅಧಿಪತಿ. ಲಕ್ಷ್ಮೀನಾರಾಯಣ ಯೋಗದ ಸಮಯದಲ್ಲಿ ಬುಧವು ವಿಷ್ಣುಸ್ಥಾನದಲ್ಲಿ ಮತ್ತು ಶುಕ್ರ ಲಗ್ನ ಸ್ಥಾನದಲ್ಲಿ ಇರಲಿದೆ.
ಜ್ಯೋತಿಷ್ಯದಲ್ಲಿ ಶುಕ್ರ ಮತ್ತು ಬುಧ ಗ್ರಹಗಳ ಸಂಯೋಗವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗಾದರೆ ಲಕ್ಷ್ಮೀನಾರಾಯಣ ಯೋಗದಿಂದ ಯಾವ ರಾಶಿಯವರು ಅದೃಷ್ಟವನ್ನು ಪಡೆಯುತ್ತಾರೆ ಎಂದು ತಿಳಿಯಿರಿ.
ಲಕ್ಷ್ಮೀನಾರಾಯಣ ಯೋಗವು ಮೇಷ ರಾಶಿಯವರಿಗೆ ಅದೃಷ್ಟವನ್ನು ಹೆಚ್ಚಿಸಲಿದೆ. ಈ ರಾಶಿಯವರ ಆರ್ಥಿಕ ಸ್ಥಿತಿಯು ಸುಧಾರಿಸಲಿದೆ. ಕೆಲಸದಲ್ಲಿ ನಿಮ್ಮ ಆದಾಯ ಹೆಚ್ಚಾಗಲಿದ್ದು, ಅಂದುಕೊಂಡ ಕಾರ್ಯಗಳು ಕೈ ಹಿಡಿಯಲಿವೆ. ಸಂಪತ್ತು, ಧನಲಾಭದಿಂದ ಆರ್ಥಿಕ ಜೀವನವು ಅಭಿವೃದ್ಧಿಯಾಗುತ್ತದೆ. ವೃತ್ತಿಯಲ್ಲಿ ಯಶಸ್ಸು ಸಿಗಲಿದ್ದು, ಉದ್ಯೋಗವಕಾಶಗಳು ಹುಡುಕಿಕೊಂಡು ಬರಲಿವೆ. ಅನಿರೀಕ್ಷಿತ ಆರ್ಥಿಕ ಲಾಭದಿಂದ ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ. ನವರಾತ್ರಿ ಹಬ್ಬಕ್ಕಾಗಿ ಸಂಬಂಧಿಕರು ಮನೆಗೆ ಆಗಮಿಸುವರು. ವಿದೇಶದಲ್ಲಿ ಕೆಲಸ ಮಾಡುವ ನಿಮ್ಮ ಆಸೆಯೂ ಈಡೇರಲಿದೆ.
ಸಿಂಹ ರಾಶಿಯವರಿಗೆ ಲಕ್ಷ್ಮೀನಾರಾಯಣ ಯೋಗವು ಸುಖ-ಸಂಪತ್ತನ್ನು ಹೆಚ್ಚಿಸಲಿದೆ. ಶುಕ್ರ ಮತ್ತು ಬುಧ ಈ ಎರಡೂ ಗ್ರಹಗಳಿಂದ ಸಿಂಹ ರಾಶಿಯವರು ಆಶೀರ್ವಾದ ಪಡೆಯುತ್ತಾರೆ. ಜೀವನದಲ್ಲಿ ತೃಪ್ತಿ ಮತ್ತು ಸಂತೋಷ ಹೆಚ್ಚಾಗಲಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ಸು ನಿಮ್ಮದಾಗುತ್ತದೆ. ಜೀವನದಲ್ಲಿ ತೃಪ್ತಿ ಮತ್ತು ಸಂತೋಷ ಹೆಚ್ಚಾಗಿರುತ್ತದೆ. ಬಹಳ ದಿನಗಳಿಂದ ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ವ್ಯಾಪಾರಸ್ಥರಿಗೆ ಧನಲಾಭ ಸಿಗಲಿದ್ದು, ಶ್ರಮಕ್ಕೆ ತಕ್ಕ ಪ್ರತಿಫಲಯೂ ದೊರೆಯಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ಚೆನ್ನಾಗಿ ಸುಧಾರಿಸಲಿದೆ.
ವೃಶ್ಚಿಕ ರಾಶಿಯವರಿಗೆ ಲಕ್ಷ್ಮೀನಾರಾಯಣ ಯೋಗವು ಮಂಗಳಕರವಾಗಿದೆ. ವೃಶ್ಚಿಕ ರಾಶಿಯವರ ಜೀವನದಲ್ಲಿ ಸುಖ-ಶಾಂತಿ ನೆಲೆಸಲಿದೆ. ಅಂದುಕೊಂಡ ಕಾರ್ಯಗಳು ಬೇಗ ಪೂರ್ಣಗೊಳ್ಳುತ್ತವೆ. ನೀವು ಮನೆ, ವಾಹನವನ್ನು ಖರೀದಿಸುವಿರಿ. ಈ ಸಮಯದಲ್ಲಿ ಖರೀದಿಸಿದ ಯಾವುದೇ ವಸ್ತು ದುಪ್ಪಟ್ಟು ಫಲ ನೀಡಲಿದೆ. ವೃಶ್ಚಿಕ ರಾಶಿಯ 6ನೇ ಮನೆಯಲ್ಲಿ ಶುಕ್ರ-ಬುಧ ಸಂಯೋಗ ನಡೆಯುತ್ತದೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭವನ್ನು ಪಡೆಯಲು ಇದು ಮಂಗಳಕರ ಸಮಯ. ನಿಮ್ಮ ಆರ್ಥಿಕ ಜೀವನ ಸುಧಾರಣೆ ಕಾಣಲಿದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.