Shani Shukra Yuti: 3 ರಾಶಿಯವರಿಗೆ ಧನ-ಸಂಪತ್ತು ಪ್ರಾಪ್ತಿ, ರಾಜಯೋಗ

Mon, 04 Mar 2024-6:06 am,

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳಲ್ಲಿ ಶುಕ್ರನನ್ನು ಸಂಪತ್ತು, ಐಷಾರಾಮಿ, ಪ್ರಣಯ, ಪ್ರೀತಿ ಮತ್ತು ಆಕರ್ಷಣೆಯ ಅಂಶ ಎಂದು ನಂಬಲಾಗಿದೆ. ಹಾಗಾಗಿಯೇ, ಶುಕ್ರನ ಚಲನೆಯಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಯವರ ಜೀವನದಲ್ಲಿ ಅವರ ಆರ್ಥಿಕ ಸ್ಥಿತಿ, ಸೌಕರ್ಯಗಳು, ಪ್ರೀತಿಯ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ. 

ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ದೇವನನ್ನು ನ್ಯಾಯದ ದೇವರು, ಕರ್ಮಫಲದಾತ ಎಂದು ಕರೆಯಲಾಗುತ್ತದೆ. ಇದೀಗ ಶೀಘ್ರದಲ್ಲೇ ಶುಕ್ರ-ಶನಿ ಇಬ್ಬರೂ ಒಂದೇ ರಾಶಿಚಕ್ರ ಚಿಹ್ನೆಯಲ್ಲಿ ಸಂಧಿಸಲಿದ್ದು, ಶನಿ-ಶುಕ್ರರ ಯುತಿ ನಿರ್ಮಾಣವಾಗಲಿದೆ.   

ಮಾರ್ಚ್ 7 ರಂದು, ಶುಕ್ರ ರಾಶಿ ಪರಿವರ್ತನೆ ಹೊಂದುವ ಮೂಲಕ ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಸುಮಾರು ಒಂದು ವರ್ಷದ ನಂತರ ಶುಕ್ರನು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. 

ಕುಂಭ ರಾಶಿಯನ್ನು ಶನಿಯ ರಾಶಿಚಕ್ರ ಚಿಹ್ನೆ ಎಂದು ಪರಿಗಣಿಸಲಾಗಿದೆ. ಇದಲ್ಲದೆ, ಶನಿ ದೇವನೂ ಕೂಡ ಸದ್ಯ ಕುಂಭ ರಾಶಿಯಲ್ಲಿಯೇ ಉಪಸ್ಥಿತನಿದ್ದಾನೆ. ಹಾಗಾಗಿ, ಶನಿಯ ರಾಶಿಚಕ್ರ ಚಿಹ್ನೆಯಲ್ಲಿ ಶುಕ್ರನ ಪ್ರವೇಶದಿಂದ ಶನಿ-ಶುಕ್ರರ ಯುತಿಯೂ ಏರ್ಪಡಲಿದೆ. 

ಕುಂಭ ರಾಶಿಯಲ್ಲಿ ಶನಿಯೊಟ್ಟಿಗೆ ಶುಕ್ರನ ಸಂಚಾರದ ಪರಿಣಾಮವಾಗಿ ಮೂರು ರಾಶಿಯ ಜನರಿಗೆ ಸುಖ-ಸಂಪತ್ತು ಪ್ರಾಪ್ತಿಯಾಗಲಿದೆ. ಅವರು ರಾಜಯೋಗವನ್ನು ಅನುಭವಿಸುವರು ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ತುಲಾ ರಾಶಿ:  ಶುಕ್ರ ರಾಶಿ ಪರಿವರ್ತನೆಯು ತುಲಾ ರಾಶಿಯವರ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲಿದೆ. ಈ ಸಮಯದಲ್ಲಿ ನೀವು ಮಕ್ಕಳಿಂದ ಶುಭ ವಾರ್ತೆಯನ್ನು ನಿರೀಕ್ಷಿಸಬಹುದು. ಜೀವನದಲ್ಲಿ ಸುಖ-ಸಂಪತ್ತು ವೃದ್ಧಿಯಾಗುತ್ತದೆ. 

ವೃಶ್ಚಿಕ ರಾಶಿ:  ಶುಕ್ರ ಸಂಚಾರ ಬದಲಾವಣೆಯು ವೃಶ್ಚಿಕ ರಾಶಿಯವರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ. ಈ ಸಂದರ್ಭದಲ್ಲಿ ಹೊಸ ಮನೆ, ಕಾರು ಖರೀದಿಸುವ ಯೋಗವಿದೆ. ಉದ್ಯೋಗಸ್ಥರಿಗೆ ಹೊಸ ಅವಕಾಶಗಳು ಲಭಿಸಿ ಸಕಾರಾತ್ಮಕ ಬದಲಾವಣೆಯೊಂದಿಗೆ ಆದಾಯ ಹೆಚ್ಚಾಗಲಿದೆ.   

ಮಕರ ರಾಶಿ:  ಶುಕ್ರ ರಾಶಿ ಬದಲಾವಣೆಯು ಮಕರ ರಾಶಿಯಾಯಾವರಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಈ ವೇಳೆ ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿದ್ದು, ಬ್ಯಾಂಕ್ ಬ್ಯಾಲೆನ್ಸ್ ವೃದ್ಧಿಯಾಗಲಿದೆ. ಇದು ವೈಯಕ್ತಿಕ ಜೀವನದ ಮೇಲೂ ಹಲವು ಮಹತ್ತರ ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link