Shukra Gochar 2024: ಮಿಥುನ ರಾಶಿಗೆ ಶುಕ್ರನ ಪ್ರವೇಶ, ಮೂರು ರಾಶಿಯವರಿಗೆ ಧನ-ಸಂಪತ್ತಿಗೆ ಕೊರತೆಯೇ ಇಲ್ಲ

Thu, 13 Jun 2024-7:00 am,

ವೈದಿಕ ಜ್ಯೋತಿಷ್ಯದಲ್ಲಿ, ಸಂಪತ್ತು ಮತ್ತು ಸಮೃದ್ಧಿಯ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಶುಕ್ರನು ಜೂನ್ 12ರಂದು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. 

ಮಿಥುನ ರಾಶಿಗೆ ಪ್ರವೇಶಿಸಿರುವ ಶುಕ್ರನು ಕೆಲವು ರಾಶಿಯವರ ಜೀವನದ ಅದೃಷ್ಟದ ಬಾಗಿಲುಗಳನ್ನು ಕೂಡ ತೆರೆದಿದ್ದಾನೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಶುಕ್ರ ಸಂಚಾರವು ಮೇಷ ರಾಶಿಯವರಿಗೆ ಪ್ರೀತಿಯ ಜೀವನದಲ್ಲಿ ಶುಭ ಫಲಗಳನ್ನು ನೀಡಲಿದೆ. ಹಣ ಸಂಪಾದನೆಗೆ ವಿವಿಧ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಇದರಿಂದ ಹಣಕಾಸಿನ ಸ್ಥಿತಿ ಸುಧಾರಿಸಲಿದೆ. 

ಸ್ವ ರಾಶಿಯಲ್ಲಿ ಶುಕ್ರ ಸಂಚಾರವು ಮಿಥುನ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಪ್ರಗತಿಯ ಹಾದಿಯನ್ನು ತೆರೆಯಲಿದೆ. ವ್ಯಾಪಾರ ವೃದ್ಧಿಯಾಗಲಿದೆ. ಹಣಕಾಸಿಗೆ ಯಾವುದೇ ಕೊರತೆ ಇರುವುದಿಲ್ಲ.   

ಶುಕ್ರ ಸಂಚಾರವು ಧನು ರಾಶಿಯವರಿಗೆ  ಅಪಾರ ಸಂಪತ್ತನ್ನು ನೀಡಲಿದೆ. ಸಮಾಜದಲ್ಲಿ ಗೌರವ ವೃದ್ಧಿಯಾಗಲಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ವೇಗವನ್ನು ಪಡೆಯಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link