Malavya Rajyog: ಈ 5 ರಾಶಿಯವರಿಗೆ ಸಂಪತ್ತು ಹೆಚ್ಚಿಸಲಿದೆ ಮಾಲವ್ಯ ರಾಜಯೋಗ

Tue, 16 Apr 2024-6:40 am,

ಪ್ರಸ್ತುತ ಶುಕ್ರ ತನ್ನ ಉಚ್ಚ ಸ್ಥಾನ ಮೀನ ರಾಶಿಯಲ್ಲಿ ಇದ್ದಾನೆ. ಇದರಿಂದಾಗಿ ಮಾಲವ್ಯ ರಾಜಯೋಗ ಸೃಷ್ಟಿಯಾಗಿದೆ. ಮುಂದಿನ ವಾರ ಏಪ್ರಿಲ್ 24ರಂದು ಶುಕನು ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ, ಇದಕ್ಕೂ ಮೊದಲಿನ 8 ದಿನ ಮಾಲವ್ಯ ರಾಜಯೋಗವು ಕೆಲವು ರಾಶಿಯವರಿಗೆ ಧನ-ಸಂಪತ್ತನ್ನು ಕರುಣಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಮಾಲವ್ಯ ರಾಜಯೋಗವು ವೃಷಭ ರಾಶಿಯ ಜನರಿಗೆ ಬಂಪರ್ ಹಣಕಾಸಿನ ಲಾಭವನ್ನು ಒದಗಿಸಲಿದೆ. ಈ ಸಮಯದಲ್ಲಿ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗುವುದರೊಂದಿಗೆ ಸಮಾಜದಲ್ಲಿ ಗೌರವವೂ ವೃದ್ಧಿಯಾಗಲಿದೆ. 

ಶುಕ್ರ ಗೋಚರ ಮಾಲವ್ಯ ರಾಜಯೋಗದ ಫಲವಾಗಿ ಸಿಂಹ ರಾಶಿಯ ಜನರು ಹಲವು ರೀತಿಯಲ್ಲಿ ಸುಖ-ಸಂತೋಷವನ್ನು ಅನುಭವಿಸುತ್ತಾರೆ. ಭೂಮಿ-ಆಸ್ತಿಗೆ ಸಂಬಂಧಿಸಿದಂತೆ ಕುಟುಂಬ ಸದಸ್ಯಋಣ ಶುಭ ವಾರ್ತೆ ನಿರೀಕ್ಷಿಸಬಹುದು. 

ತುಲಾ ರಾಶಿಯವರಿಗೆ ಇದು ಅದೃಷ್ಟದ ಸಮಯ. ಪ್ರತಿ ಕೆಲಸದಲ್ಲೂ ಪ್ರಗತಿ, ವೃತ್ತಿ-ವ್ಯವಹಾರದಲ್ಲಿ ಭಾರೀ ಹಣಕಾಸಿನ ಲಾಭವನ್ನು ನಿರೀಕ್ಷಿಸಬಹುದು. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸಮಯ. 

ಈ ಸಮಯದಲ್ಲಿ ಮಾಲವ್ಯ ರಾಜಯೋಗದ ಫಲವಾಗಿ ಧನು ರಾಶಿಯ ಜನರಿಗೆ ಪ್ರತಿ ಕೆಲಸದಲ್ಲೂ ನಿಮ್ಮವರಿಂದ ಸಹಾಯವನ್ನು ಪಡೆಯಬಹುದು. ಉದ್ಯೋಗ ಹುಡುಕಾಟದಲ್ಲಿರುವವ ಮಂಗಳಕರ ಸಮಯ. 

ಸ್ವ ರಾಶಿಯಲ್ಲಿ ಶುಕ್ರ ಸಂಚಾರದಿಂದ ನಿರ್ಮಾಣವಾಗಿರುವ ಮಾಲವ್ಯ ರಾಜಯೋಗವು ಈ ರಾಶಿಯ ಜನರಿಗೆ ಬಹುದಿನಗಳ ಕನಸನ್ನು ನನಸಾಗಿಸಲಿದೆ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಮನಸ್ಸಿಗೆ ಸಂತೋಷವಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link