Shukra Gochar: ಶನಿಯ ರಾಶಿಗೆ ಶುಕ್ರನ ಪ್ರವೇಶ, ಈ 5 ರಾಶಿಯವರಿಗೆ ಭಾರೀ ಧನ ಲಾಭ

Mon, 12 Feb 2024-6:51 am,

ಜ್ಯೋತಿಷ್ಯ ಶಾಸ್ತ್ರದಲ್ಲಿ, ಶುಕ್ರನನ್ನು ಸಂಪತ್ತು, ಸಮೃದ್ಧಿ, ಪ್ರೀತಿ, ಪ್ರಣಯಕ್ಕೆ ಸಂಬಂಧಿಸಿದ ಗ್ರಹ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಶುಕ್ರನಾ ಸಂಕ್ರಮಣವನ್ನು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತದೆ. 

ಇಂದು, ಸೋಮವಾರ, ಫೆಬ್ರವರಿ 12 ರಂದು, ಶುಕ್ರನು ಶನಿಯ ರಾಶಿಚಕ್ರ ಚಿಹ್ನೆ ಮಕರ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಶುಕ್ರ ರಾಶಿ ಬದಲಾವನೆಯು ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ. ಆದರೂ, ಈ ಸಮಯವು 5 ರಾಶಿಯವರ ದೃಷ್ಟಿಯಿಂದ ಮಹತ್ವದ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಮೇಷ ರಾಶಿ:  ಶುಕ್ರ ಗೋಚಾರವು ಮೇಷ ರಾಶಿಯವರಿಗೆ ಅದೃಷ್ಟದ ಸಮಯ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು ಹೂಡಿಕೆಯಿಂದ ಲಾಭವಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರಲಿದೆ. 

ಮಿಥುನ ರಾಶಿ:  ಶುಕ್ರ ಸಂಚಾರವು ಮಿಥುನ ರಾಶಿಯವರಿಗೆ ಹಲವು ರೀತಿಯಲ್ಲಿ ಲಾಭದಾಯಕವಾಗಿರಲಿದೆ. ಈ ವೇಳೆ ನಿಮಗೆ ವೃತ್ತಿ ಬದುಕಿನಲ್ಲಿ ಪ್ರಗತಿ ಸಾಧ್ಯತೆ ಇದ್ದರೆ, ಬೇರೆಡೆ ಸಿಲುಕಿರುವ ಹಣವೂ ಶೀಘ್ರದಲ್ಲೇ ನಿಮ್ಮ ಕೈ ಸೇರಲಿದೆ. 

ಸಿಂಹ ರಾಶಿ:  ಶುಕ್ರ ರಾಶಿ ಪರಿವರ್ತನೆಯು ಸಿಂಹ ರಾಶಿಯವರಿಗೆ ಆದಾಯವನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ವೃತ್ತಿಜೀವನದಲ್ಲಿ ಬದಲಾವಣೆ ಮಾಡಲು ಬಯಸುವವರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ನಿಮ್ಮ ಜೀವನದಲ್ಲಿ ಇಷ್ಟು ದಿನಗಳು ಎದುರಾಗಿದ್ದ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ. 

ಧನು ರಾಶಿ:  ಧನು ರಾಶಿಯವರಿಗೆ ಶುಕ್ರ ರಾಶಿ ಬದಲಾವಣೆಯಿಂದಾಗಿ ತಾಯಿ ಲಕ್ಷ್ಮಿ ಆಶೀರ್ವಾದದಿಂದ ಸಂಪತ್ತು ಪ್ರಾಪ್ತಿ ಯೋಗವಿದೆ. ಈ ಸಮಯದಲ್ಲಿ ಆಸ್ತಿ, ವಾಹನ ಅಥವಾ ಇನ್ನಾವುದಾದರೂ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವ ಯೋಗ ಸಿಗಲಿದೆ. 

ಕುಂಭ ರಾಶಿ:  ಶುಕ್ರ ಸಂಚಾರವು ಕುಂಭ ರಾಶಿಯವರಿಗೂ ಬಂಪರ್ ಲಾಭವನ್ನು ತರಲಿದೆ. ಈ ಸಮಯದಲ್ಲಿ ಭವಿಷ್ಯಕ್ಕಾಗಿ ಹಣ ಉಳಿತಾಯ ಮಾಡುವುದನ್ನು ಪರಿಗಣಿಸಿದರೆ ಹೆಚ್ಚಿನ ಲಾಭವಾಗಲಿದೆ. ವ್ಯಾಪಾರಸ್ಥರಿಗೆ ನಿರೀಕ್ಷೆಗಿಂತ ಹೆಚ್ಚಿನ ಲಾಭ ಸಾಧ್ಯತೆ ಇದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link