Shukra Gochar: ಈ 3 ರಾಶಿಯವರ ಜೀವನದಲ್ಲಿ ವಿನಾಶವನ್ನೇ ಉಂಟು ಮಾಡಲಿದ್ದಾನೆ ಶುಕ್ರ

Tue, 30 May 2023-9:17 am,

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾರ ಜಾತಕದಲ್ಲಿ ಶುಕ್ರನು ಶುಭ ಸ್ಥಾನದಲ್ಲಿದ್ದಾನೋ, ಅವರು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಅಂತಹ ಜನರು ತಮ್ಮ ಜೀವನದುದ್ದಕ್ಕೂ ರಾಜರಂತೆ ಸಂತೋಷವನ್ನು ಪಡೆಯುತ್ತಾರೆ. ಅಂತೆಯೇ ಯಾರ ಜಾತಕದಲ್ಲಿ ಶುಕ್ರ ನೀಚ ಸ್ಥಾನದಲ್ಲಿದ್ದಾನೋ ಅವರು ಜೀವನದಲ್ಲಿ ನಾನಾ ಬಗೆಯ ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ. 

ಇಂದು (ಮೇ 30) ರಾತ್ರಿ 07 ಗಂಟೆ 39 ನಿಮಿಷಕ್ಕೆ ಸರಿಯಾಗಿ ಪ್ರೀತಿ, ಸೌಂದರ್ಯ, ಸೃಜನಶೀಲತೆ ಮತ್ತು ಐಷಾರಾಮಿ ಜೀವನದ ಅಂಶವೆಂದು ಪರಿಗಣಿಸಲಾಗುವ ಶುಕ್ರನು ರಾಶಿ ಪರಿವರ್ತನೆ ಹೊಂದಲಿದ್ದಾನೆ. ಚಂದ್ರನ ರಾಶಿಯಲ್ಲಿ ಶುಕ್ರನ ಪ್ರವೇಶವು ಜುಲೈ 7ರ ಬೆಳಗಿನ ಜಾವ 3.59ರವರೆಗೆ ಇರಲಿದೆ. ಈ ಸಂದರ್ಭದಲ್ಲಿ ಶುಕ್ರನು ಕೆಲವು ರಾಶಿಯವರ ಜೀವನದಲ್ಲಿ ವಿನಾಶವನ್ನು ಸೃಷ್ಟಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯೋಣ... 

ತುಲಾ ರಾಶಿಯವರಿಗೆ ಶುಕ್ರ ರಾಶಿ ಪರಿವರ್ತನೆಯು ಅಮಂಗಳಕರ ಎಂದು ಸಾಬೀತುಪಡಿಸಲಿದೆ. ಈ ವೇಳೆ ತುಲಾ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಇದಲ್ಲದೆ ವ್ಯಾಪಾರಸ್ಥರಿಗೂ ನಷ್ಟ ಸಾಧ್ಯತೆ ಇರುವುದರಿಂದ ತುಂಬಾ ಎಚ್ಚರಿಕೆಯಿಂದ ಇರುವುದು ಅಗತ್ಯ.   

ಕರ್ಕಾಟಕ ರಾಶಿಯಲ್ಲಿ ಶುಕ್ರನ ಸಂಕ್ರಮಣ ಧನು ರಾಶಿಯವರಿಗೂ ಕೂಡ ಅಶುಭ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗಲಿದ್ದು ಇದು ಆರ್ಥಿಕ ಸಂಕಷ್ಟವನ್ನು ಹೆಚ್ಚಿಸಬಹುದು. ಯಾವುದೇ ರೀತಿಯ ಹೂಡಿಕೆಯು ನಿಮಗೆ ಅಪಾಯಕಾರಿ ಎಂದು ಸಾಬೀತು ಪಡಿಸಬಹುದು. 

ಚಂದ್ರನ ರಾಶಿಯಲ್ಲಿ ಶುಕ್ರನ ಸಂಚಾರವು ಕುಂಭ ರಾಶಿಯವರಿಗೆ ವೃತ್ತಿ ರಂಗದಲ್ಲಿ ಸವಾಲುಗಳನ್ನು ಹೆಚ್ಚಿಸಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಪಿತೂರಿಗೆ ಬಲಿಯಾಗುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಜಾಗರೂಕರಾಗಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link