ಹೊಸ ವರ್ಷಾರಂಭದಲ್ಲಿ ಮಾಲವ್ಯ ರಾಜಯೋಗ ನಿರ್ಮಾಣ, ಶ್ರೀಹರಿ ಲಕ್ಷ್ಮಿ ಕೃಪೆಯಿಂದ ಈ ಜನರ ಜೀವನದಲ್ಲಿ ಶುಕ್ರದೆಸೆ ಆರಂಭ!
1. ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಧನ-ಐಶ್ವರ್ಯ-ವೈಭವದ ಕಾರಕನಾಗಿರುವ ಶುಕ್ರದೇವ ತನ್ನ ಸ್ವರಾಶಿಗಳಾಗಿರುವ ವೃಷಭ, ತುಲಾ ಅಥವಾ ತನ್ನ ಉಚ್ಚ ರಾಶಿಯಾಗಿರುವ ಮೀನ ರಾಶಿಯ ಪ್ರಥಮ, ಚತುರ್ಥ, ಸಪ್ತಮ ಹಾಗೂ ದಶಮ ಭಾವದಲ್ಲಿ ವಿರಾಜಮಾನನಾದರೆ ಮಾಲವ್ಯ ರಾಜಯೋಗ ರೂಪುಗೊಳ್ಳುತ್ತದೆ ಎನ್ನಲಾಗುತ್ತದೆ.
2. ಹೊಸ ವರ್ಷದಲ್ಲಿ ಯಾವಾಗ ಈ ಯೋಗ ರೂಪುಗೊಳ್ಳುತ್ತಿದೆ? : ಹೊಸವರ್ಷದಲ್ಲಿ ಮಾರ್ಚ್ 31, 2024 ರಂದು ಸಂಜೆ 4 ಗಂಟೆ 54 ನಿಮಿಷಕ್ಕೆ ಶುಕ್ರ ತನ್ನ ಉಚ್ಚ ರಾಶಿಯಾಗಿರುವ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ ಮತ್ತು ಇದರಿಂದ ಮಾಲವ್ಯ ರಾಜಯೋಗ ರೂಪುಗೊಳ್ಳುತ್ತಿದೆ. ಇದಲ್ಲದೆ ಮೇ 19, 2024 ರಂದು ಶುಕ್ರನ ವೃಷಭ ರಾಶಿ ಪ್ರವೇಶ ಹಾಗೂ ಸೆಪ್ಟೆಂಬರ್ 18, 2024 ರಂದು ಶುಕ್ರನ ತುಲಾ ರಾಶಿ ಪ್ರವೇಶದಿಂದಲೂ ಕೂಡ ಈ ಯೋಗ ರೂಪುಗೊಳ್ಳುತ್ತಿದೆ. ಹಾಗಾದರೆ ಬನ್ನಿ ವರ್ಷಾರಂಭದಲ್ಲಿ ಈ ಯೋಗ ಯಾವ ಅದೃಷ್ಟವಂತ ರಾಶಿಗಳಿಗೆ ಲಾಭ ತಂದು ಕೊಡಲಿದೆ ನೋಡೋಣ,
3. ಮಿಥುನ ರಾಶಿ: ನಿಮ್ಮ ಗೋಚರ ಜಾತಕದ ಧಶಮ ಭಾವದಲ್ಲಿ ಈ ರಾಜಯೋಗ ರೂಪುಗೊಳ್ಳುತ್ತಿದೆ. ಹೀಗಾಗಿ ಈ ರಾಶಿಗಳ ಜಾತಕದವರಿಗೆ ಸುಖ ಪ್ರಾಪ್ತಿಯಾಗಲಿದೆ. ವಾಹನ, ಮನೆ, ಸಂಪತ್ತು ಖರೀದಿಸುವ ನಿಮ್ಮ ಆಸೆ ಈಡೇರಲಿದೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ಹೊಸ ನೌಕರಿಯ ಹುಡುಕಾಟಕ್ಕೆ ತೆರೆಬೀಳಲಿದೆ. ವಿದ್ಯಾರ್ಥಿಗಳ ಉನ್ನತ ವ್ಯಾಸಂಗ ಮಾಡುವ ಕನಸು ನನಸಾಗಲಿದೆ. ನಿಮ್ಮ ಪರಿಶ್ರಮಕ್ಕೆ ನಿಮಗೆ ತಕ್ಕ ಪ್ರತಿಫಲ ಸಿಗಲಿದೆ. ಈ ಅವಧಿಯಲ್ಲಿ ನೀವು ಆತ್ಮವಿಶ್ವಾಸದಿಂದ ತುಂಬಿರುವಿರಿ. ಬಿಸ್ನೆಸ್ ನಲ್ಲಿ ಅಪಾರ ಯಶಸ್ಸು ಮತ್ತು ಧನಲಾಭ ಉಂಟಾಗುವ ಸಾಧ್ಯತೆ ಇದೆ. ದೀರ್ಘಕಾಲದಿಂದ ನಿಮ್ಮ ಕೈಸೇರಬೇಕಿದ್ದ ಹಣ ನಿಮ್ಮತ್ತ ಮರಳಲಿದೆ.
4. ಕರ್ಕ ರಾಶಿ: ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ಮಾಲವ್ಯ ರಾಜಯೋಗ ರೂಪುಗೊಳ್ಳುತ್ತಿದೆ. ಹೀಗಿರುವಾಗ ಮಾರ್ಚ ತಿಂಗಳಿನಲ್ಲಿ ನಿಮಗೆ ವಿಶೇಷ ಲಾಭ ಸಿಗುವ ಸಾಧ್ಯತೆ ಇದೆ. ಆರ್ಥಿಕ ವೇದಿಕೆಯ ಕುರಿತು ಹೇಳುವುದಾದರೆ, ಹಣಕಾಸಿನ ಮುಗ್ಗಟ್ಟಿನಿಂದ ನಿಮಗೆ ಪರಿಹಾರ ಸಿಗುವ ಎಲ್ಲಾ ಸಂಕೇತಗಳಿವೆ. ಆದಾಯದ ಹೊಸ ಮಾರ್ಗಗಳು ನಿಮ್ಮ ಪಾಲಿಗೆ ತೆರೆದುಕೊಳ್ಳಲಿವೆ. ಹಣ ಉಳಿತಾಯ ಮಾಡುವಲ್ಲಿಯೂ ಕೂಡ ನೀವು ಯಶಸ್ಸನ್ನು ಕಾಣುವಿರಿ. ಪರಿಶ್ರಮದ ಸಂಪೂರ್ಣ ಫಲ ನಿಮಗೆ ಪ್ರಾಪ್ತಿಯಾಗಲಿದೆ. ಹೊಸ ಸಂಪತ್ತು ಸೃಷ್ಟಿಸುವಲ್ಲಿ ನೀವು ಯಶಸ್ವಿಯಾಗುವ ಯೋಗವಿದೆ. ಹಿರಿಯ ಅಧಿಕಾರಿಗಳ ಬೆಂಬಲದಿಂದ ಉನ್ನತಿಯ ಮಾರ್ಗ ನಿಚ್ಚಳವಾಗಲಿದೆ. ಆಧ್ಯಾತ್ಮದತ್ತ ನಿಮ್ಮ ಸದಭಿರುಚಿ ಹೆಚ್ಚಾಗಲಿದೆ. ಕುಟುಂಬದ ಜೊತೆಗೆ ಉತ್ತಮ ಕಾಲ ಕಳೆಯುವಲ್ಲಿ ಯಶಸ್ವಿಯಾಗುವಿರಿ. ವೃತ್ತಿ ಜೀವನದ ಕುರಿತು ಹೇಳುವುದಾದರೆ, ಹೊಸಬರಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಪದೋನ್ನತಿಯ ಸಂಕೇತಗಳು ಕೂಡ ಗೋಚರಿಸುತ್ತಿವೆ. ಬಿಸ್ನೆಸ್ ನಲ್ಲಿ ಅಪಾರ ಲಾಭ ಸಂಭವಿಸಿ, ನೀವು ಹೊಸ ವ್ಯಾಪಾರ ಆರಂಭಿಸಲು ಯೋಚಿಸಬಹುದು.
5. ಕನ್ಯಾ ರಾಶಿ: ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ಮಾಲವ್ಯ ರಾಜಯೋಗ ರೂಪುಗೊಳ್ಳುತ್ತಿದೆ. ಇದು ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲವನ್ನು ನೀವು ಕಳೆಯುವಿರಿ. ಸಂಗಾತಿಯ ಬೆಂಬಲದಿಂದ ನೀವು ಪ್ರತಿಯೊಂದು ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುವಲ್ಲಿ ಯಶಸ್ಸನ್ನು ಸಾಧಿಸುವಿರಿ. ಶಾರೀರಿಕ ಹಾಗೂ ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಬಿಸ್ನೆಸ್ ಕುರಿತು ಹೇಳುವುದಾದರೆ, ಬಿಸ್ನೆಸ್ ನಲ್ಲಿ ಅಪಾರ ಲಾಭದ ಜೊತೆಗೆ ನೀವು ಮಹತ್ವದ ಒಪ್ಪಂದವನ್ನು ಅಂತಿಮಗೊಳಿಸುವ ಸಂಕೇತಗಳಿವೆ. ಬಂಧು ಮಿಂತ್ರರು ಅಥವಾ ಕುಟುಂಬ ಸದಸ್ಯರ ಜೊತೆಗೆ ನೀವು ಯಾತ್ರೆಯನ್ನು ಕೈಗೊಳ್ಳುವ ಸಾಧ್ಯತೆ ಇದೆ. ನೀವು ನಿಮ್ಮ ಕುಶಲ ಮುಂದಾಳತ್ವದಿಂದ ಸಮಾಜದಲ್ಲಿ ಸ್ಥಾನಮಾನ, ಪ್ರತಿಷ್ಠೆಯನ್ನು ಸಂಪಾದಿಸುವಿರಿ. ಹೂಡಿಕೆಗಾಗಿ ಯೋಚಿಸುತ್ತಿದ್ದರೆ, ಈ ಅವಧಿ ನಿಮಗೆ ಲಾಭದಾಯಕ ಸಾಬೀತಾಗುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)