ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ, ವೃತ್ತಿ-ವ್ಯವಹಾರದಲ್ಲಿ ಪ್ರಗತಿ, ಇಷಾರ್ಥಗಳೆಲ್ಲಾ ಈಡೇರುವ ಪರ್ವಕಾಲ
![ಶುಕ್ರ ಗೋಚಾರ ಫಲ Shukra Gochar Phala](https://kannada.cdn.zeenews.com/kannada/sites/default/files/2024/11/19/467441-shukradeseeffect.jpg?im=FitAndFill=(500,286))
ವೈದಿಕ ಜ್ಯೋತಿಷ್ಯದ ಪ್ರಕಾರ, ವರ್ಷಾಂತ್ಯದಲ್ಲಿ ಮಕರ ರಾಶಿಗೆ ಪದಾರ್ಪಣೆ ಮಾಡಲಿರುವ ಶುಕ್ರ 2025ರ ಹೊಸ ವರ್ಷದಲ್ಲಿ ಕೆಲವು ರಾಶಿಯವರ ಬದುಕನ್ನು ಬೆಳಗಲಿದ್ದಾನೆ.
![ಶುಕ್ರ ದೆಸೆ Shukra Dese](https://kannada.cdn.zeenews.com/kannada/sites/default/files/2024/11/19/467440-shukradeseeffect-1.jpg?im=FitAndFill=(500,286))
ಶುಕ್ರ ದೆಸೆಯ ಪ್ರಭಾವದಿಂದ ಈ ರಾಶಿಯವರ ಬದುಕಿನಲ್ಲಿ ಭಾರೀ ಅದೃಷ್ಟ, ಹಣದ ಸುರಿಮಳೆಯೇ ಆಗಲಿದೆ. ಆ ಅದೃಷ್ಟದ ರಾಶಿಗಳೆಂದರೆ...
![ಸಿಂಹ ರಾಶಿ Leo](https://kannada.cdn.zeenews.com/kannada/sites/default/files/2024/11/19/467439-shukradeseeffect-2.jpg?im=FitAndFill=(500,286))
ಮಾಡುವ ಕೆಲಸಗಳಲ್ಲಿ ಭಾರೀ ಯಶಸ್ಸು, ಉದ್ಯೋಗದಲ್ಲಿ ಬಡ್ತಿ, ರಹಸ್ಯ ಶತ್ರುಗಳ ವಿರುದ್ಧ ಜಯ ಲಭಿಸಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಬಹುಕಾಲದ ಕನಸು ನನಸಾಗುವ ಸುಂದರ ಸಮಯ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಬಹುದು.
ದೀರ್ಘ ಸಮಯದಿಂದ ನೀವು ಅನುಭವಿಸುತ್ತಿದ್ದ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ವ್ಯವಹಾರವನ್ನು ವಿಸ್ತರಿಸುವ ಕನಸು ನನಸಾಗಲಿದೆ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದ್ದು, ಸಂಗಾತಿಯೊಂದಿಗೆ ಸುಮಧುರ ಕ್ಷಣಗಳನ್ನು ಅನುಭವಿಸುವಿರಿ.
ಶುಕ್ರ ದೆಸೆಯು ನಿಮ್ಮ ಬದುಕಿನಲ್ಲಿ ಭೌತಿಕ ಸುಖ-ಸಂತೋಷಗಳನ್ನು ಹೆಚ್ಚಿಸಲಿದೆ. ವೃತ್ತಿಯಲ್ಲಿ ಬಡ್ತಿ, ಆದಾಯ ಹೆಚ್ಚಳ ಸಾಧ್ಯತೆ ಇದೆ. ವಾಹನ, ಆಸ್ತಿ ಖರೀದಿಸುವ ಪರ್ವಕಾಲ ಇದಾಗಿರಲಿದೆ.
ನಿಮ್ಮಲ್ಲಿರುವ ನಾಯಕತ್ವದ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸುವಿರಿ. ಕೆಲಸದಲ್ಲಿ ಉನ್ನತ ಸ್ಥಾನಮಾನವನ್ನು ಅಲಂಕರಿಸುವಿರಿ. ನಿಮ್ಮ ವ್ಯಕ್ತಿತ್ವ ಇತರರ ಮೇಲೆ ಪ್ರಭಾವ ಬೀಉರ್ತ್ತದೆ. ಹಣಕಾಸಿನ ಸ್ಥಿತಿ ಅದ್ಭುತವಾಗಿರಲಿದೆ. ವೈವಾಹಿಕ ಜೀವನವೂ ಆನಂದಮಯವಾಗಿರಲಿದೆ.
ಶುಕ್ರ ದೆಸೆಯು ನಿಮ್ಮ ಜೀವನದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡಲಿದೆ. ವಿದೇಶ ವ್ಯವಹಾರದಲ್ಲಿ ಭಾರೀ ಲಾಭವನ್ನು ಗಳಿಸುವಿರಿ. ವೃತ್ತಿ ಬದುಕಿನಲ್ಲಿ ಆತ್ಮವಿಶ್ವಾಸ ಹೆಚ್ಚಳವಾಗಿ, ಸಮಾಜದಲ್ಲಿ ನಿಮ್ಮ ಕೀರ್ತಿ-ಗೌರವವೂ ಹೆಚ್ಚಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.