ಶುಕ್ರ ನಕ್ಷತ್ರ ಬದಲಾವಣೆಯಿಂದ ಈ ರಾಶಿಯವರ ಅದೃಷ್ಟವೇ ಬದಲು, ರಾಜವೈಭೋಗ
ಪ್ರಸ್ತುತ ಮಕರ ರಾಶಿಯಲ್ಲಿ ವಿರಾಜಮಾನನಾಗಿರುವ ಐಷಾರಾಮಿ ಜೀವನದ ಅಂಶ ಶುಕ್ರನು ಇತ್ತೀಚೆಗಷ್ಟೇ ಶ್ರವಣ ನಕ್ಷತ್ರಕ್ಕೆ ಪದಾರ್ಪಣೆ ಮಾಡಿದ್ದಾನೆ.
ಶ್ರವಣ ನಕ್ಷತ್ರಕ್ಕೆ ಶುಕ್ರನ ಸಂಚಾರದಿಂದ ಮೂರು ರಾಶಿಯವರಿಗೆ ಕೈತುಂಬಾ ಸಂಪಾತನೆ ಜೊತೆಗೆ ಜೀವನದಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಳಿವೆ. ಪ್ರೀತಿ ಜೀವನವೂ ಅತ್ಯುತ್ತಮವಾಗಿರಲಿದೆ ಎನ್ನಲಾಗುತ್ತಿದೆ.
ಮೇಷ ರಾಶಿ: ಶುಕ್ರ ನಕ್ಷತ್ರ ಬದಲಾವಣೆಯಿಂದ ಈ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಸಮಸ್ಯೆಗಳು ಬಗೆಹರಿಯಲಿವೆ. ಹಣಕಾಸಿನ ಸ್ಥಿತಿ ಸುಧಾರಿಸಲಿದ್ದು, ಆರ್ಥಿಕ ಮುಗ್ಗಟ್ಟಿನಿಂದ ಹೊರಬರುವಿರಿ. ಭವಿಷ್ಯದ ಭದ್ರತೆಗಾಗಿ ಒಂದಿಷ್ಟು ಹಣವನ್ನು ಕೂಡಿಡುವಲ್ಲಿಯೂ ಯಶಸ್ವಿಯಾಗುವಿರಿ.
ಕನ್ಯಾ ರಾಶಿ: ಶುಕ್ರ ನಕ್ಷತ್ರ ಬದಲಾವನೆಯು ಈ ರಾಶಿಯಯ್ವರಿಗೆ ವ್ಯಾಪಾರದಲ್ಲಿ ಬಂಪರ್ ಲಾಭವನ್ನು ನೀಡಲಿದೆ. ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಸುಸಮಯ. ಹಠಾತ್ ಧನಲಾಭವು ಜೀವನದಲ್ಲಿ ಸೌಕರ್ಯಗಳನ್ನು ಹೆಚ್ಚಿಸಲಿದೆ. ಲವ್ ಲೈಫ್ ನಲ್ಲಿರುವವರಿಗೆ ಒಳ್ಳೆಯ ಸಮಯ.
ಮಕರ ರಾಶಿ: ಶ್ರವಣ ನಕ್ಷತ್ರದಲ್ಲಿ ಶುಕ್ರನ ಸಂಚಾರವು ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ಹಣಕಾಸಿನ ವಿಷಯದಲ್ಲಿ ಭಾರೀ ಅದೃಷ್ಟವನ್ನು ತರಲಿದೆ. ಅನಿರೀಕ್ಷಿತ ಮೂಲಗಳಿಂದ ಹಣದ ಹರಿವು ಹೆಚ್ಚಾಗಲಿದ್ದು ಸುಖದ ಸುಪ್ಪತ್ತಿಗೆಯಲ್ಲೇ ಜೀವನ ಕಳೆಯುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.