Shukraditya Yog: 18 ತಿಂಗಳುಗಳ ಬಳಿಕ ಶುಕ್ರ-ಸೂರ್ಯರಿಂದ ಶುಕ್ರಾದಿತ್ಯ ರಾಜಯೋಗ ರಚನೆ, ಈ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ!
ತುಲಾ ರಾಶಿ: ಶುಕ್ರಾದಿತ್ಯ ರಾಜಯೋಗ ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ. ನಿಮ್ಮ ಜಾತಕದ 7ನೇ ಮನೆಯಲ್ಲಿ ಈ ಯೋಗ ರಚನೆಯಾಗುತ್ತಿದೆ, ಇದರಿಂದ ವಿವಾಹಿತರ ವೈವಾಹಿಕ ಜೀವನ ಸಾಕಷ್ಟು ಅದ್ಭುತವಾಗಿರಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ.
ಇನ್ನೊಂದೆಡೆ ನಿಮ್ಮ ಜೀವನದಲ್ಲಿ ಬಡ್ತಿಯ ಎಲ್ಲಾ ಮಾರ್ಗಗಳು ತೆರೆದುಕೊಳ್ಳಲಿವೆ. ಅವಿವಾಹಿತರಿಗೆ ವಿವಾಹ ಕೂಡಿ ಬರಲಿದೆ. ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ನಿಮಗೆ ಲಾಭ ಸಿಗಲಿದೆ ಹಾಗೂ ಆಕಸ್ಮಿಕವಾಗಿ ನಿಮಗೆ ಬರಬೇಕಾದ ಹಣ ನಿಮ್ಮ ಕೈಸೇರಲಿದೆ. ಎಲ್ಲಾ ಯೋಜನೆಗಳು ಪೂರ್ಣಗೊಂಡು ಆತ್ಮ ವಿಶ್ವಾಸ ಹೆಚ್ಚಾಗಲಿದೆ.
ಮೇಷ ರಾಶಿ: ಶುಕ್ರಾದಿತ್ಯ ರಾಜಯೋಗ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ನಿಮ್ಮ ಜಾತಕದ ಲಗ್ನ ಭಾವದಲ್ಲಿ ಈ ಯೋಗ ರಚನೆಯಾಗುತ್ತಿದೆ. ಇದರಿಂದ ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿದೆ. ವೃತ್ತಿ ವ್ಯಾಪಾರದಲ್ಲಿ ಅಪಾರ ಯಶಸ್ಸು ನಿಮ್ಮದಾಗಲಿದೆ.
ನಿಮ್ಮ ಜೀವನದಲ್ಲಿ ಧನವೃದ್ಧಿಯಾಗಲಿದ್ದು, ನೌಕರಿಯಲ್ಲಿ ಪ್ರಮೋಷನ್ ಭಾಗ್ಯ ಕೂಡ ಇದೆ. ಈ ಅವಧಿಯಲ್ಲಿ ವಿವಾಹಿತರ ವೈವಾಹಿಕ ಜೀವನ ಸುಮಧುರವಾಗಿರಲಿದೆ. ನಿಮ್ಮ ಎಲ್ಲಾ ಆಸೆ ಆಕಾಂಕ್ಷೆಗಳು ಈಡೇರಲಿವೆ.
ಸಿಂಹ ರಾಶಿ: ಶುಕ್ರಾದಿತ್ಯ ರಾಜಯೋಗ ನಿಮ್ಮ ಪಾಲಿಗೆ ಒಳ್ಳೆಯ ದಿನಗಳನ್ನು ತರಲಿದೆ. ಏಕೆಂದರೆ ಈ ರಾಜಯೋಗ ನಿಮ್ಮ ಜಾತಕದ ನವಮ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಬೆಂಬಲ ಸಿಗಲಿದೆ. ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳು ಹೆಚ್ಚಾಗಲಿವೆ.
ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗುವ ಯೋಗ ಕೂಡ ರಚನೆಯಾಗುತ್ತಿದೆ. ಆರ್ಥಿಕ ಸ್ಥಿತಿ ಬಲವಾಗಲಿದೆ. ಧಾರ್ಮಿಕ ಹಾಗೂ ಮಂಗಳ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ದೇಶ ವಿದೇಶಗಳ ಯಾತ್ರೆ ಕೈಗೊಳ್ಳುವಿರಿ ಮತ್ತು ಅವು ನಿಮ್ಮ ಪಾಲಿಗೆ ಶುಭ ಸಾಬೀತಾಗಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ (shukraditya yog will be giving lot of prosperity to these zodiac signs astrology).
(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)