18ನೇ ವಯಸ್ಸಿಗೆ ಮದುವೆ, 20ಕ್ಕೆ ಮಕ್ಕಳು, 2 ಮದುವೆ, 43ರಲ್ಲೂ ಈಕೆ ಸಖತ್ ಹಾಟ್..!
ಶ್ವೇತಾ ಹಂಚಿಕೊಂಡಿರುವ ಫೋಟೋಗಳನ್ನು ನೋಡಿದ ನೆಟ್ಟಿಗರು ಈಕೆ ಮೂರು ಮಕ್ಕಳ ತಾಯಿ ಎಂದರೆ ನಂಬುವುದು ಕಷ್ಟ ಅಂತ ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸಾಕಷ್ಟು ಅವಮಾನ, ಸಂಕಷ್ಟಗಳನ್ನು ಎದುರಿಸಿರುವ ಈ ನಟಿ 43ರ ಹರೆಯದಲ್ಲೂ ಉದಯೋನ್ಮುಖ ನಟಿಯರಿಗೆ ಕಠಿಣ ಪೈಪೋಟಿ ನೀಡುತ್ತಿದ್ದಾರೆ. ಭೋಜ್‌ಪುರಿ ಚಲನಚಿತ್ರೋದ್ಯಮಕ್ಕಿಂತ ಟಿವಿಯಲ್ಲಿ ತನ್ನ ಛಾಪು ಮೂಡಿಸಿದ ನಂತರ, ನಟಿ ಒಟಿಟಿಯತ್ತ ಮುಖ ಮಾಡಿದರು.
ಶ್ವೇತಾ ತಿವಾರಿ ಟಿವಿಯ ಅತ್ಯಂತ ಜನಪ್ರಿಯ ಧಾರಾವಾಹಿ 'ಕಸೌತಿ ಜಿಂದಗಿ ಕಿ' ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ನಂತರ ಜನಪ್ರಿಯತೆ ಗಳಿಸಿದರು.
ಕೇವಲ 12 ವರ್ಷದವಳಿದ್ದಾಗ ಸಿನಿ ರಂಗ ಪ್ರವೇಶಿಸಿದ ನಟಿ, ಭೋಜ್‌ಪುರಿ ಸಿನಿ ಇಂಡ್ರಸ್ಟ್ರೀಯಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಾಲಿವುಡ್ ಚಲನಚಿತ್ರಗಳಲ್ಲಿಯೂ ಸಹ ನಟಿಸಿದ್ದಾರೆ.
ಶ್ವೇತಾ ತಿವಾರಿ ಅವರು ರಾಜಾ ಚೌಧರಿ ಅವರನ್ನು ವಿವಾಹವಾಗಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟಾಗ ನಟಿಗೆ ಕೇವಲ 18 ವರ್ಷ ವಯಸ್ಸಾಗಿತ್ತು.
ತಮ್ಮ 20 ನೇ ವಯಸ್ಸಿನಲ್ಲಿ, ಭುಜ ಎಂಬ ಮಗುವಿಗೆ ಶ್ವೇತಾ ಜನ್ಮ ನೀಡಿದರು. ಮಗು ಹುಟ್ಟಿದ ಕೂಡಲೇ ನಟಿ ತನ್ನ ಪತಿಗೆ ವಿಚ್ಛೇದನ ನೀಡಿದರು.
2013 ರಲ್ಲಿ ಅಭಿನವ್ ಕೊಹ್ಲಿಯನ್ನು ವಿವಾಹವಾದರು. ಈ ಮದುವೆಯ ನಂತರ ಶ್ವೇತಾ ತಿವಾರಿಗೆ ಒಬ್ಬ ಮಗ ಜನಿಸಿದನು. ಆದರೆ ಮದುವೆಯಾಗಿ 6 ವರ್ಷಗಳ ನಂತರ ಈ ಜೋಡಿ ಬೇರೆಯಾಯಿತು.
ಎರಡು ಬಾರಿ ಪ್ರೀತಿಯಲ್ಲಿ ಮೋಸ ಹೋದ ಶ್ವೇತಾ ಈಗ ಮಗಳು ಪಾಲಕ್ ತಿವಾರಿ ಹಾಗೂ ಮಗ ರೆಯಾನ್ಶ್ ಕೊಹ್ಲಿ ಜತೆ ಒಂಟಿಯಾಗಿ ವಾಸಿಸುತ್ತಿದ್ದಾರೆ.