Sidharth Kiara Reception: ಆರತಕ್ಷತೆಯಲ್ಲಿ ಗೊಂಬೆಗಳಂತೆ ಕಂಗೊಳಿಸಿದ ಸಿದ್ಧಾರ್ಥ್ - ಕಿಯಾರಾ

Mon, 13 Feb 2023-7:29 am,

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಫೆಬ್ರವರಿ 12 ರಂದು ಬಾಲಿವುಡ್ ತಾರೆಯರು ಮತ್ತು ವಿಐಪಿ ಅತಿಥಿಗಳಿಗಾಗಿ ವಿವಾಹದ ಆರತಕ್ಷತೆಯನ್ನು ಏರ್ಪಡಿಸಿದರು. 

ಕಿಯಾರಾ ಅಡ್ವಾಣಿ ತಮ್ಮ ಮದುವೆಯ ಆರತಕ್ಷತೆಯಲ್ಲಿ ಬಿಳಿ ಮತ್ತು ಕಪ್ಪು ಬಣ್ಣದ ಉಡುಗೆಯನ್ನು ಧರಿಸಿದ್ದರು. ಇದರೊಂದಿಗೆ, ಪಚ್ಚೆ ಮತ್ತು ವಜ್ರಗಳಿಂದ ಕೂಡಿದ ಮಹಾರಾಣಿ ಹಾರವನ್ನು ಧರಿಸಿದ್ದರು. ನಟಿ ಕಿವಿಯಲ್ಲಿ ಯಾವುದೇ ರೀತಿಯ ಆಭರಣಗಳನ್ನು ಧರಿಸಿರಲಿಲ್ಲ. ಸರಳವಾದ ಮೇಕಪ್‌ನೊಂದಿಗೆ ಕಿಯಾರಾ ಲುಕ್‌ ಪೂರ್ಣಗೊಂಡಿತ್ತು.

ಸಿದ್ಧಾರ್ಥ್ ಮಲ್ಹೋತ್ರಾ ಅವರು ಪತ್ನಿ ಕಿಯಾರಾ ಜೊತೆ ಟ್ವಿನ್ ಮಾಡಿದ್ದರು. ಕಪ್ಪು ಸೀಕ್ವಿನ್ ಜಾಕೆಟ್, ಹೈನೆಕ್ ಟಿಶರ್ಟ್‌ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು. ಸಿದ್ಧಾರ್ಥ್ ಅವರ ಈ ಲುಕ್‌ ತುಂಬಾ ಸ್ಟೈಲಿಶ್ ಮತ್ತು ಡ್ಯಾಶಿಂಗ್ ಆಗಿತ್ತು. 

ಕಿಯಾರಾ ಮತ್ತು ಸಿದ್ಧಾರ್ಥ್ ವಿವಾಹದ ಆರತಕ್ಷತೆಯಲ್ಲಿ ಆಲಿಯಾ ಭಟ್, ಅಜಯ್ ದೇವಗನ್ ಮತ್ತು ಕಾಜೋಲ್ ಸೇರಿದಂತೆ ಕರಣ್ ಜೋಹರ್, ಕರೀನಾ ಕಪೂರ್, ವಿದ್ಯಾ ಬಾಲನ್, ರಾಕುಲ್ ಪ್ರೀತ್, ಕೃತಿ ಸನೋನ್, ವರುಣ್ ಧವನ್ ಮತ್ತು ಅವರ ಪತ್ನಿ ನತಾಶಾ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆ ಪಾರ್ಟಿಯಲ್ಲಿ ತಮ್ಮ ಕುಟುಂಬದೊಂದಿಗೆ ಸಾಕಷ್ಟು ಫೋಟೋಗಳನ್ನು ಕ್ಲಿಕ್ ಮಾಡಿದ್ದಾರೆ. ಅಡ್ವಾಣಿ ಮತ್ತು ಮಲ್ಹೋತ್ರಾ ಕುಟುಂಬವನ್ನು ಒಂದೇ ಫ್ರೇಮ್‌ನಲ್ಲಿ ನೋಡಿ ನೆಟಿಜನ್‌ಗಳು ತುಂಬಾ ಇಷ್ಟಪಡುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link