Green Tea : ನೀವು ಗ್ರೀನ್ ಟೀ ಸೇವಿಸುತ್ತೀರಾ ? ಹಾಗಿದ್ದರೆ ಇದನ್ನೊಮ್ಮೆ ಓದಲೇಬೇಕು

Wed, 30 Dec 2020-9:19 pm,

ಗ್ರೀನ್ ಟೀಯಲ್ಲಿ ಕೆಫಿನ್ ಪ್ರಮಾಣವಿರುತ್ತದೆ. ಕಾಫಿಗೆ (Coffee) ಹೋಲಿಸಿದರೆ ಗ್ರೀನ್ ಟೀಯಲ್ಲಿರುವ ಕೆಫಿನ್ ಪ್ರಮಾಣ ಕಡಿಮೆಯೇ. ಆದರೂ ನವು ಹೆಚ್ಚಿನ ಪ್ರಮಾಣದಲ್ಲಿ ಗ್ರೀನ್ ಟೀ ಸೇವಿಸುತ್ತಿದ್ದರೆ ಅದರ ಗಂಭೀರ ಪರಿಣಾಮ ನಿಮ್ಮ ಆರೋಗ್ಯದ ಮೇಲೆ ಬೀರಬಹುದು. ಅತಿಯಾದ ಗ್ರೀನ್ ಟೀ ಸೇವನೆಯಿಂದ ಉದರಕ್ಕೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳಬಹುದು.

ಗ್ರೀನ್ ಟೀ ಹೆಚ್ಚಿನ ಪ್ರಮಾಣದಲ್ಲಿಸೇವಿಸುವುದರಿಂದ ದೇಹದಲ್ಲಿ ಐರನ್ ಅಂಶ ಕಡಿಮೆಯಾಗಬಹುದು. ಗ್ರೀನ್ ಟೀಯಲ್ಲಿರುವ ಟೆನಿನ್ ಅಂಶದಿಂದ ದೇಹದಲ್ಲಿ ಐರನ್ ಪ್ರಮಾಣ ಕಡಿಮೆಯಾಗುವಂತೆ ಮಾಡುತ್ತದೆ.   

ಗ್ರೀನ್ ಟೀಯ ಅತಿಯಾದ ಸೇವನೆಯಿಂದ ಹಸಿವು ಕಡಿಮೆಯಾಗುತ್ತದೆ. ಹೀಗಾದಾಗ ಸಾಮಾನ್ಯವಾಗಿಯೇ ಕಡಿಮೆ ಆಹಾರ ಸೇವಿಸುತ್ತೇವೆ. ಇದರಿಂದ ದೇಹ ಶಕ್ತಿಹೀನವಾಗುತ್ತದೆ. ಇದಾದ ನಂತರ ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ.  

 ಗರ್ಭವತಿಯಾದವಳು ಅತಿಯಾಗಿ ಗ್ರೀನ್ ಟೀ ಸೇವಿಸಿದರೆ ಗರ್ಭದಲ್ಲಿರುವ ಮಗುವಿಗೂ ಹಾನಿಯಾಗಬಹುದು. ಗರ್ಭಪಾತವಾಗುವ ಸಂಭವವೂ ಇರುತ್ತದೆ. ದಿನದಲ್ಲಿ 2 ಲೋಟಕ್ಕಿಂತ ಹೆಚ್ಚು ಗ್ರೀನ್ ಟೀ ಸೇವನೆ ಅಪಾಯಕಾರಿಯಾಗಿ ಮಾರ್ಪಡಾಗಬಹುದು.   

ಗ್ರೀನ್ ಟೀಯಲ್ಲಿ ಆಕ್ಸಾಲಿಕ್ ಆಸಿಡ್ ಇರುತ್ತದೆ.  ಆಕ್ಸಾಲಿಕ್ ಆಸಿಡ್ ಕಾರಣದಿಂದ ಕಿಡ್ನಿ ಸ್ಟೋನ್ ಸಮಸ್ಯೆ ಎದುರಾಗಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link