ರಾತ್ರಿ ಮೊಬೈಲ್ ನೋಡುತ್ತಲೇ ನಿದ್ದೆಗೆ ಜಾರುತ್ತೀರಾ ? ಹಾಗಿದ್ದರೆ ಈ ವಿಚಾರ ಕೂಡಾ ಗೊತ್ತಿರಲಿ
ಮೊಬೈಲ್ ನೋಡುತ್ತಾ ನೋಡುತ್ತಾ ಮಲಗುವಾಗ ಮೊಬೈಲ್ ಅನ್ನು ಅಲ್ಲೇ ಪಕ್ಕದಲ್ಲಿ ಇಟ್ಟುಕೊಳ್ಳುತ್ತೇವೆ. ಇಲ್ಲಾ ದಿಂಬಿನ ಅಡಿಗೆ ತಳ್ಳಿ ಬಿಡುತ್ತೇವೆ.
ಮೊಬೈಲನ್ನು ದಿಂಬಿನ ಕೆಳಗೆ ಇಟ್ಟರೆ ಶಾಖ ಹೊರಬರಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಮೊಬೈಲ್ ಬಹಳ ವೇಗವಾಗಿ ಬಿಸಿಯಾಗುತ್ತದೆ.
ಹೀಗೆ ಶಾಖ ಹೊರಗೆ ಬಾರದೆ ನಿರಂತರವಾಗಿ ಬಿಸಿಯಾಗುವುದರಿಂದ ಮೊಬೈಲ್ ಬ್ಯಾಟರಿ ಹಾಳಾಗಬಹುದು. ಬ್ಯಾಟರಿಯ ಸಾಮರ್ಥ್ಯವು ಕಡಿಮೆಯಾಗಬಹುದು.
ಹೆಚ್ಚು ಬಿಸಿಯಾಗುವುದರಿಂದ ಮೊಬೈಲ್ ನ ಪ್ರೊಸೆಸರ್ ವೇಗ ಕಡಿಮೆಯಾಗಿ ಮೊಬೈಲ್ ಹ್ಯಾಂಗ್ ಆಗಬಹುದು.ಇದು ಮೊಬೈಲ್‌ನ ಒಟ್ಟಾರೆ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ.
ಕೆಲವು ಸಂದರ್ಭಗಳಲ್ಲಿ, ಹೆಚ್ಚು ಬಿಸಿಯಾಗುವುದರಿಂದ ಮೊಬೈಲ್ ಶಾರ್ಟ್ ಸರ್ಕ್ಯೂಟ್‌ಗೂ ಕಾರಣವಾಗಬಹುದು.ಇದರಿಂದ ಮೊಬೈಲ್ ಸಂಪೂರ್ಣ ಹಾಳಾಗಬಹುದು.
ಇನ್ನು ಹಾಗೆಯೇ ಮೊಬೈಲ್ ಬಿಸಿಯಾಗುವುದರಿಂದ ಸ್ಫೋಟಗೊಳ್ಳುವ ಅಪಾಯ ಕೂಡಾ ಇಲ್ಲ ಎನ್ನುವ ಹಾಗಿಲ್ಲ.
ಮೊಬೈಲ್ ಲೈಟ್ ಮತ್ತು ನೋಟಿಫಿಕೇಶನ್ ಸೌಂಡ್ ನಿದ್ದೆಗೆ ಭಂಗ ತರುವುದನ್ನು ಕೂಡಾ ಅಲ್ಲಗಳೆಯುವಂತಿಲ್ಲ.