ಅತಿಯಾಗಿ ಲಿಪ್‌ಕಿಸ್ ಮಾಡುವುದು ಆರೋಗ್ಯಕ್ಕೆ ಹಾನಿಕರ..! ಹೇಗೆ ಗೊತ್ತಾ..?
ಕಿಸ್ ಭಾವನೆ ವ್ಯಕ್ತಪಡಿಸುವ ಒಂದು ಭಾಷೆ. ಪ್ರೀತಿಯನ್ನು ವ್ಯಕ್ತಪಡಿಸಲು ಇದು ಉತ್ತಮ ಮಾರ್ಗವಾಗಿದೆ. ಅದಕ್ಕಾಗಿಯೇ ಪ್ರೇಮಿಗಳು ಯಾವಾಗಲೂ ಕಿಸ್ ಮಾಡಲು ಕಾಯುತ್ತಿರುತ್ತಾರೆ. ಇದು ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ. ಆದರೂ, ಆಗಾಗ್ಗೆ ಚುಂಬನವು ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿದೆ.
ಚುಂಬಿಸುವುದರಿಂದ ಪ್ರಯೋಜನಗಳಿರುಷ್ಟು ಅಪಾಯಗಳೂ ಸಹ ಇವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ಪದೇ ಪದೇ ಚುಂಬಿಸುವುದರಿಂದ ಅನೇಕ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಕಿಸ್ ಮಾಡುವುದರಿಂದ ಆಗುವ ಆರೋಗ್ಯ ಸಮಸ್ಯೆಗಳೇನು ಎಂದು ಈಗ ತಿಳಿಯೋಣ..
ಇತ್ತೀಚಿನ ಅಧ್ಯಯನಗಳು ಹೇಳುವಂತೆ ಶೀತ, ಜ್ವರ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗೆ ಆರೋಗ್ಯವಂತರು ಚುಂಬಿಸಿದರೆ ಆ ರೋಗಗಳು ಇವರಿಗೂ ಬರುವ ಸಾಧ್ಯತೆಯಿದೆ ಎಂದು ಹೇಳುತ್ತವೆ.
ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಸಂಗಾತಿಗೆ ಲಿಪ್ ಕಿಸ್ ನೀಡುವುದರಿಂದ ಅವರಿಗೂ ಆ ರೋಗ ಹರಡುವ ಸಾಧ್ಯತೆ ಇದೆ. ತುರಿಕೆ ಮತ್ತು ಊತದಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಚುಂಬಿಸುವಾಗ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಚುಂಬಿಸುವುದರಿಂದ ಹಲ್ಲಿನ ಸಮಸ್ಯೆಯೂ ಉಂಟಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದರಿಂದ ಕೆಲವರಲ್ಲಿ ವಸಡಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ.
ಪರಸ್ಪರ ಚುಂಬಿಸುವುದರಿಂದ ತುಟಿ ಮತ್ತು ನಾಲಿಗೆ ಗಾಯವಾಗುವ ಸಾಧ್ಯತೆಗಳೂ ಇವೆ. ಹಾಗಾಗಿ ಹೆಚ್ಚು ಕಿಸ್ ಮಾಡದಿರುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು.
ಕೆಲವು ಜನರು ಅತಿಯಾದ ಚುಂಬನದಿಂದ ಕ್ಲಮೈಡಿಯ ಮತ್ತು ಗೊನೊರಿಯಾದಂತಹ ಲೈಂಗಿಕವಾಗಿ ಹರಡುವ ರೋಗಗಳಿಗೆ ಗುರಿಯಾಗುತ್ತಾರೆ. ಇದರಿಂದ ಹಲವು ರೀತಿಯ ದೀರ್ಘಕಾಲದ ಕಾಯಿಲೆಗಳು ಬರಬಹುದು
ಪರಸ್ಪರ ಚುಂಬಿಸುವುದರಿಂದ ನ್ಯುಮೋನಿಯಾದಂತಹ ಬ್ಯಾಕ್ಟೀರಿಯಾಗಳು ಪ್ರವೇಶಿಸುವ ಸಾಧ್ಯತೆಗಳಿವೆ. ಹಾಗಾಗಿ ದಿನಗಳಲ್ಲಿ ಒಂದೇರಡು ಬಾರಿ ಮಾತ್ರ ಕಿಸ್ ಮಾಡುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು .