Side Effects Of Milk: ಅಧಿಕ ಹಾಲು ಸೇವನೆ ಆರೋಗ್ಯಕ್ಕೆ ಹಾನಿಕರ

Mon, 26 Oct 2020-11:05 am,

ಬೆಂಗಳೂರು: ಅನೇಕ ಜನರು ಹಾಲು ಕುಡಿಯಲು ಇಷ್ಟಪಡುತ್ತಾರೆ. ಆದರೆ ಇನ್ನೂ ಕೆಲವರಿಗೆ ಹಾಲು ಹಾಕಿದ ಪದಾರ್ಥವೇ ಇಷ್ಟವಾಗುವುದಿಲ್ಲ. ಹಾಲನ್ನು ಅಮೃತ ಎಂದು ಪರಿಗಣಿಸಲಾಗುತ್ತದೆ. ಇದು ಪ್ರೋಟೀನ್, ಕ್ಯಾಲ್ಸಿಯಂ, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ಹಾಲು ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಹಾಲು ಸೇವನೆ ನಿಮ್ಮ ಆರೋಗ್ಯಕ್ಕೆ ಹಾನಿಕರ ಎಂಬುದು ನಿಮಗೆ ತಿಳಿದಿದೆಯೇ?ಅದು ನಿಮ್ಮ ಆರೋಗ್ಯವನ್ನು ಆರೋಗ್ಯಕರವಾಗಿ ಮತ್ತು ತಂಪಾಗಿ ಮಾಡುತ್ತದೆ. ಆದರೆ ನೀವು ಹೆಚ್ಚು ಹಾಲು ಸೇವಿಸಿದರೆ ಅದು ನಿಮ್ಮ ಆರೋಗ್ಯವನ್ನೂ ಹಾಳು ಮಾಡುತ್ತದೆ ಮತ್ತು ನಿಮಗೆ ಹಲವಾರು ಸಮಸ್ಯೆಗಳಿರಬಹುದು ಎಂದು ನಿಮಗೆ ತಿಳಿದಿದೆಯೇ?

ಹಾಲು ಮೂಳೆಗಳಿಗೆ ಒಳ್ಳೆಯದು ಮತ್ತು ಅದು ತೂಕವನ್ನು ಕಡಿಮೆ ಮಾಡುತ್ತದೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ಎಚ್ಚರ... !  ನೀವು ಅಗತ್ಯಕ್ಕಿಂತ ಹೆಚ್ಚು ಹಾಲು ಕುಡಿದರೆ, ಅದು ನಿಮ್ಮ ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು, ಇದರಿಂದಾಗಿ ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದ  ಹಲವು ರೀತಿಯ ಸಮಸ್ಯೆಗಳು ಎದುರಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚು ಹಾಲು ಕುಡಿಯುವುದರಿಂದ ಯಾವ ರೀತಿಯ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿಯೋಣ...

ನೀವು ಹೆಚ್ಚು ಹಾಲು ಕುಡಿದರೆ ನಿಮಗೆ ಜೀರ್ಣಕ್ರಿಯೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ಉಂಟಾಗಬಹುದು. ಇದರೊಂದಿಗೆ ಕೆಲವೊಮ್ಮೆ ವಾಯು ಸಮಸ್ಯೆ, ಹಾಗೆಯೇ ಗ್ಯಾಸ್ಟ್ರಿಕ್ ರೀತಿಯ ಸಮಸ್ಯೆಯಿಂದ ನೀವು ಅಸಮಾಧಾನಗೊಳ್ಳಬಹುದು. ಇದನ್ನು ಗಮನದಲ್ಲಿಟ್ಟುಕೊಂಡು ಹಿತ-ಮಿತವಾಗಿ ಹಾಲನ್ನು ಸೇವಿಸಿ.  

ಹಾಲಿನ ಅತಿಯಾದ ಸೇವನೆಯು ನಿಮ್ಮ ಚರ್ಮಕ್ಕೆ ಪ್ರಯೋಜನಕಾರಿಯಲ್ಲ, ಇದು ನಿಮ್ಮ ಮುಖದ ಮೇಲೆ ಗುಳ್ಳೆಗಳನ್ನು ಮತ್ತು ಮೊಡವೆ ಸಮಸ್ಯೆಗಳನ್ನೂ ಉಂಟುಮಾಡಬಹುದು, ಈ ಸಂದರ್ಭದಲ್ಲಿ ನಿಮ್ಮ ಮುಖದಲ್ಲಿ ಮೊಡವೆ ಮೂಡಲು ಕಾರಣ ಏನೆಂಬುದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು.

ಹೌದು ಇದನ್ನು ಕೇಳಲು ನಿಮಗೆ ವಿಚಿತ್ರವೆನಿಸಬಹುದು. ಆದರೆ ಹಾಲು ಕುಡಿಯುವುದರಿಂದ ವಾಕರಿಕೆ, ಚಡಪಡಿಕೆ, ಆಯಾಸ ಮತ್ತು ಆಲಸ್ಯದ ತೊಂದರೆಗಳು ಉಂಟಾಗಬಹುದು ಎಂಬುದು ನಿಜ. ನೀವು ಡೈರಿ ಹಾಲನ್ನು ಬಳಸಿದರೆ, ಅದರಲ್ಲಿ ಎ 1 ಕ್ಯಾಸೀನ್ ಇದೆ, ಇದು ಕರುಳಿನಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ ಮತ್ತು ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ. ಇಂತಹ ಸಮಯದಲ್ಲಿ ಆಯಾಸ, ಆಳಸ್ಯದಂತಹ ಅನುಭವವಾಗುವ ಸಾಧ್ಯತೆಯೂ ಇದೆ.  

ನೀವು ದಿನದಲ್ಲಿ ಮೂರು ಲೋಟಕ್ಕಿಂತ ಹೆಚ್ಚು ಹಾಲು ಕುಡಿಯುತ್ತಿದ್ದರೆ, ನಿಮಗೆ ಹೃದಯ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು ಎಂಬ ಅಂಶ ಅನೇಕ ಸಂಶೋಧನೆಗಳಲ್ಲಿ ಕಂಡುಬಂದಿದೆ. ಆದ್ದರಿಂದ ವೈದ್ಯರ ಸಲಹೆಯಂತೆ ನಿಮ್ಮ ದೇಹ ಆರೋಗ್ಯವಾಗಿರಲು ಅಗತ್ಯವಿರುವಷ್ಟು ಹಾಲನ್ನು ಮಾತ್ರ ಸೇವಿಸಿ. ಆರೋಗ್ಯವಾಗಿರಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link