ಸಣ್ಣಗಾಗಲು ರಾತ್ರಿ ಊಟ ಬಿಡಬೇಡಿ ! ಎದುರಿಸಬೇಕಾಗುತ್ತದೆ ಈ ಸಮಸ್ಯೆ !
ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ರಾತ್ರಿಯ ಊಟ ಮಾತ್ರವಲ್ಲ, ಯಾವುದೇ ಸಮಯದಲ್ಲಿ ಭೋಜನವನ್ನು ಸ್ಕಿಪ್ ಮಾಡಿದರೆ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. ದೀರ್ಘಕಾಲದವರೆಗೆ ಹೀಗೆ ಆಹಾರವನ್ನು ತ್ಯಜಿಸುತ್ತಾ ಬಂದರೆ ದೇಹವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ.
ರಾತ್ರಿ ಊಟ ಮಾಡದಿರುವುದು ನಿಮ್ಮ ಮೆದುಳಿನ ಕಾರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ನಿಮ್ಮ ಒತ್ತಡದ ಮಟ್ಟವನ್ನು ಹೆಚ್ಚಿಸಬಹುದು. ಇದರಿಂದಾಗಿ ನೀವು ಖಿನ್ನತೆಗೆ ಒಳಗಾಗಬಹುದು.
ಭೋಜನವನ್ನು ಬಿಟ್ಟು ಬಿಡುವುದರ ಎರಡನೇ ದೊಡ್ಡ ಅನಾನುಕೂಲವೆಂದರೆ ಅದು ದೇಹದ ಚಯಾಪಚಯ ದರವನ್ನು ನಿಧಾನಗೊಳಿಸುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ, ಅಥವಾ ತೂಕ ಇಳಿಸಿಕೊಳ್ಳಲು ಕಷ್ಟವಾಗುತ್ತದೆ.
ರಾತ್ರಿ ಊಟ ಮಾಡದೇ ಇದ್ದರೆ, ದೇಹದಲ್ಲಿ ಪ್ರಮುಖ ಪೋಷಕಾಂಶಗಳ ಕೊರತೆ ಉಂಟಾಗಬಹುದು ಮತ್ತು ಮೂಡ್ ಸ್ವಿಂಗ್ ಸಮಸ್ಯೆಯೂ ಎದುರಾಗಬಹುದು. ರಾತ್ರಿ ಏನೂ ತಿನ್ನದೇ ಹಾಗೆಯೇ ಮಲಗುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಕಡಿಮೆಯಾಗುತ್ತದೆ. ಇದು ಕಿರಿಕಿರಿಯನ್ನು ಉಂಟುಮಾಡುತ್ತದೆ ಎನ್ನುವುದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ.