ನಟ ಸಿದ್ಧಾರ್ಥ್ ಶುಕ್ಲಾಗೆ ಅಂತಿಮ ನಮನ: ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಪ್ರೇಯಸಿ ಮತ್ತು ತಾಯಿಯ ಚಿತ್ರಗಳು…
ನಟ ಸಿದ್ಧಾರ್ಥ್ ಶುಕ್ಲಾ ಅವರ ಅಂತ್ಯಕ್ರಿಯೆ ಬ್ರಹ್ಮಕುಮಾರಿ ನಿಯಮಗಳ ಪ್ರಕಾರ ಮುಂಬೈನಲ್ಲಿ ನೆರವೇರಿತು. ಮುಂಬೈನ ಒಶಿವರ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವ ನಟನ ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ಸಿದ್ಧಾರ್ಥ್ ಅವರ ತಾಯಿ ರೀಟಾ ಕಂಡುಬಂದಿದ್ದು ಹೀಗೆ. ಸಣ್ಣ ವಯಸ್ಸಿನಲ್ಲಿಯೇ ಮಗನನ್ನು ಕಳೆದುಕೊಂಡ ತಾಯಿಯ ಹೃದಯವು ಒಡೆದುಹೋಗಿದ್ದು, ಶೂನ್ಯ ಭಾವನೆ ಆವರಿಸಿತ್ತು.
ನಟ ಸಿದ್ಧಾರ್ಥ್ ಶುಕ್ಲಾ ನಿಧನದಿಂದ ಅವರ ಗೆಳತಿ ಶೆಹನಾಜ್ ಗಿಲ್(Shehnaaz Kaur Gill) ಕಂಗೆಟ್ಟು ಹೋಗಿದ್ದಾರೆ. ಕಾರಿನಿಂದ ಇಳಿದ ತಕ್ಷಣ ಅವರು ಸಿದ್ಧಾರ್ಥ್… ಸಿದ್ಧಾರ್ಥ್… ಎಂದು ಕೂಗುತ್ತಾ ನಟನ ಮೃತದೇಹವನ್ನು ಇರಿಸಿದ್ದ ಆಂಬ್ಯುಲೆನ್ಸ್ ಕಡೆಗೆ ಓಡೋಡಿ ಬಂದಿದ್ದು ನೋಡುಗರ ಕಣ್ಣಂಚಲ್ಲಿ ನೀರು ತರಿಸಿತ್ತು.
ಕರುಳ ಕುಡಿಯನ್ನು ಕಳೆದುಕೊಂಡ ಸಿದ್ಧಾರ್ಥ್ ತಾಯಿಯವರಿಗೆ ದಿಕ್ಕೇ ತೋಚದಂತಾಗಿತ್ತು. ತೇವವಾದ ಕಣ್ಣುಗಳಿಂದ ನಟನ ತಾಯಿ ಬಳಲಿದಂತೆ ಕಂಡುಬಂದರು. ನಟನ ಅಂತ್ಯಸಂಸ್ಕಾರದ ವೇಳೆ ದುಃಖ ಮಡುಗಟ್ಟಿತ್ತು. ಇನ್ನೂ ಬಾಳಿ ಬದುಕಬೇಕಾಗಿದ್ದ ಹೆತ್ತ ಮಗನನ್ನು ಕಳೆದುಕೊಂಡ ತಾಯಿ ರೀಟಾ ಅತ್ಯಂತ ದುಃಖದಿಂದಲೇ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
40ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟ ನಟ ಸಿದ್ಧಾರ್ಥ್ ಶುಕ್ಲಾ ಸಾವು ಅನೇಕರಿಗೆ ದೊಡ್ಡ ಪ್ರಶ್ನೆಯಾಗಿದೆ. ಫಿಟ್ ಆಗಿಯೇ ಇದ್ದ ನಟ ಹಠಾತ್ ನಿಧನ ಹೊಂದಿದ್ದು ಅನೇಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಾಲಿವುಡ್ ಜನಪ್ರಿಯತೆಯ ಉತ್ತಂಗಕ್ಕೇರುತ್ತಿದ್ದ ನಟ ಮಧ್ಯೆದಲ್ಲಿ ಸಾವನ್ನಪ್ಪಿದ್ದು, ಅವರ ಲಕ್ಷಾಂತರ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಸಿದ್ಧಾರ್ಥ್ ಶುಕ್ಲಾ ಸಾವಿನ ಸುದ್ದಿ ನಟಿ ಶೆಹನಾಜ್ ಗಿಲ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗೆಳೆಯನನ್ನು ಕಳೆದುಕೊಂಡು ಶೆಹನಾಜ್ ಕುಸಿದು ಹೋಗಿದ್ದಾರೆ. ಸಿದ್ಧಾರ್ಥ್ ಅಂತಿಮ ವಿಧಿವಿಧಾನದ ವೇಳೆ ಶೆಹನಾಜ್ ಬಿಕ್ಕಿಬಿಕ್ಕಿ ಅಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ನಟ ಸಿದ್ಧಾರ್ಥ್ ಶುಕ್ಲಾ ಪ್ರೇಯಸಿ ಶೆಹನಾಜ್ ಗಿಲ್ ಅಂತ್ಯಕ್ರಿಯೆ ವೇಳೆ ಕಂಡುಬಂದಿದ್ದು ಹೀಗೆ…