ಮನೆಯಲ್ಲಿ ಹಲ್ಲಿ ಇದ್ದರೆ ಶುಭವೋ ಅಶುಭವೋ? ಈ ಕುರಿತು ಶಾಸ್ತ್ರ ಹೇಳುವುದೇನು?

Mon, 02 Sep 2024-8:13 am,

ಹಲ್ಲಿ ಕಂಡರೆ ಶುಭ ಶಕುನ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಅಶುಭ ಶಕುನ ಎನ್ನುತ್ತಾರೆ. ಹಾಗಾದರೆ ಈ ನಂಬಿಕೆಯ ಹಿಂದಿನ ಸತ್ಯಾಸತ್ಯತೆ ಏನು? ತಿಳಿಯಲು ಮುಂದೆ ಓದಿ...  

ಮನೆಯಲ್ಲಿ ಜಿರಳೆ, ಜೀರುಂಡೆ, ಕಣಜ, ಹಲ್ಲಿಗಳಿರುವುದು ತೀರಾ ಸಹಜ. ಆದರೆ, ಕೆಲವರಿಗೆ ಅದನ್ನು ನೋಡಿದರೆ ಆಗುವುದಿಲ್ಲ, ಜಿರಳೆಗಳು ಮನುಷ್ಯರಲ್ಲಿ ಅನೇಕ ರೀತಿಯ ಸೋಂಕುಗಳನ್ನು ಉಂಟುಮಾಡುತ್ತವೆ. ಇನ್ನೂ ಹಲ್ಲಿಗಳನ್ನು ಹಲರಿಗೆ ಕಂಡೆ ಆಗುವುದೇ ಇಲ್ಲ, ಇವು ಎಲ್ಲಿ ಕಂಡುಬಂದರೂ ಒಡೆದು ಹೊರ ಹಾಕುತ್ತಾರೆ. 

ಹಲ್ಲಿಗಳು ಸಾಮಾನ್ಯವಾಗಿ  ಮನೆಯ ಗೋಡೆಗಳು ಮತ್ತು ಮೂಲೆಗಳಲ್ಲಿ ಕಂಡುಬರುತ್ತವೆ ಇವು ಯಾರಿಗೂ ತೊಂದರೆ ಕೊಡುವುದಿಲ್ಲವಾದರೂ, ಹೆಚ್ಚು ಕಿರಿ ಕಿರಿ ಉಂಟು ಮಾಡುತ್ತದೆ. ಜ್ಯೋತಿಷ್ಯದಲ್ಲಿ ಇಂತಹ ಹಲ್ಲಿಗಳ ಬಗ್ಗೆ ಹೆಚ್ಚು ಹೇಳಲಾಗಿದೆ. ಹೀಗಾಗಿ ಕೆಲವರು ಹಲ್ಲಿ ಕಂಡರೆ ಶುಭ ಶಕುನ ಎಂದರೆ ಇನ್ನು ಕೆಲವರು ಅಶುಭ ಎನ್ನುತ್ತಾರೆ. 

ಹೆಚ್ಚಿನ ಜನರು ಹಲ್ಲಿಗಳಿಗೆ ಹೆದರುತ್ತಾರೆ. ಅವುಗಳನ್ನು ಕಂಡ ಕೂಡಲೇ ಮನೆಯಿಂದ ಹೊರ ಹಾಕಲು ಯತ್ನಿಸುತ್ತಾರೆ.  ಆದರೆ ಜ್ಯೋತಿಷ್ಯದಲ್ಲಿ ಹಲ್ಲಿ ಕಾಣಿಸಿಕೊಳ್ಳುವುದು ಹಣದ ಆಗಮನದ ಸಂಕೇತ ಎಂದು ಉಲ್ಲೇಕಿಸಲಾಗಿದೆ. ಅಂದರೆ, ಹಲ್ಲಿಯು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ.

ಕೆಲವು ರಾಜ್ಯಗಳಲ್ಲಿ ಹೊಸ ಮನೆಯ ವಾಸ್ತು ಪೂಜೆಯಲ್ಲಿ ಬೆಳ್ಳಿ ಹಲ್ಲಿಯ ವಿಗ್ರಹಗಳನ್ನು ಬಳಸಿ ಪೂಜೆಯನ್ನು ಮಾಡುತ್ತಾರೆ. ಏಕೆಂದರೆ ಹಲ್ಲಿಗಳು ಮನೆಯಲ್ಲಿ ಸಂತೋಷ ಮತ್ತು ಸಂಪತ್ತನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ.  

ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಪೂಜಾ ಕೊಠಡಿಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಅದು ಶುಭದ ಸಂಕೇತ, ಮಂಗಳಕರ ಸಂಗತಿ ನಡೆಯಲಿದೆ ಎಂದರ್ಥ. ಮುಂದಿನ ದಿನಗಳಲ್ಲಿ ನೀವು ಹೆಚ್ಚು ಹಣವನ್ನು ಪಡೆಯುತ್ತೀರಿ ಎಂದರ್ಥ. ದೀಪಾವಳಿಯಂದು ನಿಮ್ಮ ಮನೆಯಲ್ಲಿ ಹಲ್ಲಿ ಇದ್ದರೆ ವರ್ಷವಿಡೀ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. 

ಮನೆಯಲ್ಲಿ ಒಂದೇ ಸ್ಥಳದಲ್ಲಿ 3 ಹಲ್ಲಿಗಳನ್ನು ನೋಡುವುದು ತುಂಬಾ ಅದೃಷ್ಟ. ಹೀಗಾಗಿ, ನೀವು ಶೀಘ್ರದಲ್ಲೇ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ. ನೀವು ಹೊಸ ಮನೆಗೆ ಪ್ರವೇಶಿಸುವ ಸಮಯದಲ್ಲಿ ನೀವು ಹಲ್ಲಿಯನ್ನು ನೋಡಿದರೆ, ಅದು ತುಂಬಾ ಒಳ್ಳೆಯ ಶಕುನ ಎಂದು ಹೇಳಲಾಗುತ್ತದೆ.

ಹಲ್ಲಿಯನ್ನು ನೋಡುವುದರಿಂದ ಪೂರ್ವಜರ ಆಶೀರ್ವಾದ ಮತ್ತು ಅನುಗ್ರಹ ನಮಗೆ ಸಿಗುತ್ತದೆ ಎಂದು ನಂಬಲಾಗುತ್ತದೆ. ಅಲ್ಲದೆ, ಲಕ್ಷ್ಮಿ ದೇವಿಯೂ ನಿಮ್ಮನ್ನು ಆಶೀರ್ವದಿಸಲಿದ್ದಾಳೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.  

ಕೆಲವು ದೇವಾಲಯಗಳಲ್ಲಿ ಅನೇಕ ಜನರು ಮರದ ಸುತ್ತಲೂ ನಿಂತು ಏನನ್ನಾದರೂ ತೋರಿಸುವುದನ್ನು ನಾವು ಗಮನಿಸಿದ್ದೇವೆ. ಅದು ಬೇರೇನೂ ಅಲ್ಲ, ಹಲ್ಲಿ. ಹೀಗಾಗಿ ದೇವಸ್ಥಾನಗಳಲ್ಲಿ ವೃಚ್ಚ ಮರಗಳಲ್ಲಿ ಹಲ್ಲಿಯನ್ನು ನೋಡುವುದು ದೇವರ ದರ್ಶನಕ್ಕೆ ಸಮಾನ.

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link