Heart attack: ಹೃದಯಾಘಾತವಾಗುವ ಮೊದಲು ದೇಹದ ಈ 5 ಭಾಗಗಳು ಮರಗಟ್ಟುತ್ತವೆ..!

Thu, 31 Aug 2023-10:47 am,

ವೈದ್ಯರ ಪ್ರಕಾರ ಹೃದಯವು ಸರಿಯಾಗಿ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ ಸಮಸ್ಯೆ ಉದ್ಭವಿಸುತ್ತದೆ. ರಕ್ತದ ಹರಿವು ಸರಿಯಾಗಿ ಆಗದಿದ್ದರೆ ಹೃದಯದ ಜೊತೆಗೆ ಅದರ ಸುತ್ತಮುತ್ತಲಿನ ಭಾಗಗಳ ಮೇಲೆ ಪರಿಣಾಮ ಬೀರಬಹುದು. ಈ ಕಾರಣದಿಂದ ಸೊಂಟದ ಮೇಲಿನ ಎಡ ಭಾಗವು ನಿಶ್ಚೇಷ್ಟಿತವಾಗಬಹುದು. ಅಲ್ಲದೆ ಇದರಲ್ಲಿ ಸೌಮ್ಯವಾದ ನೋವಿನ ಭಾವನೆಯೂ ಇರಬಹುದು.

ತಜ್ಞರ ಪ್ರಕಾರ ಹೃದಯಾಘಾತಕ್ಕೂ ಮೊದಲು ಎಡಭಾಗದಲ್ಲಿರುವ ದವಡೆಯು ನಿಶ್ಚೇಷ್ಟಿತವಾಗಬಹುದು ಅಥವಾ ನೋವು ಇರಬಹುದು. ಯಾವುದೇ ಒಬ್ಬ ವ್ಯಕ್ತಿಯು ಈ ರೋಗಲಕ್ಷಣಗಳನ್ನು ಅನುಭವಿಸಿದರೆ ನಿರ್ಲಕ್ಷ್ಯ ಮಾಡಬಾರದು. ಕೂಡಲೇ ವೈದ್ಯರನ್ನು ಸಂಪರ್ಕಿಸಿ ಆರೋಗ್ಯ ಪರಿಶೀಲಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು.

ಹೃದಯಾಘಾತದ ಅನೇಕ ಪ್ರಕರಣಗಳಲ್ಲಿ ವ್ಯಕ್ತಿಯ ಎಡ ಭುಜದ ಮರಗಟ್ಟುವಿಕೆ ಪ್ರಕರಣಗಳು ವರದಿಯಾಗಿವೆ. ವಾಸ್ತವವಾಗಿ ನಮ್ಮ ಹೃದಯವು ದೇಹದ ಎಡಭಾಗದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಹೃದಯದಲ್ಲಿ ಸಮಸ್ಯೆ ಉಂಟಾದಾಗ, ದೇಹದ ಎಡಭಾಗದಲ್ಲಿ ರಕ್ತ ಪರಿಚಲನೆಯು ಸ್ಥಗಿತಗೊಳ್ಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅದು ನಿಶ್ಚೇಷ್ಟಿತವಾಗುತ್ತದೆ. ಈ ರೋಗಲಕ್ಷಣವನ್ನು ಸಹ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.

ಹೃದಯದ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಯಿದ್ದರೆ, ಕತ್ತಿನ ಎಡಭಾಗದ ಮೇಲೂ ಪರಿಣಾಮ ಬೀರುತ್ತದೆ. ರಕ್ತ ಪೂರೈಕೆಯಲ್ಲಿ ಅಡಚಣೆಯಿಂದ ಕತ್ತಿನ ಎಡಭಾಗವು ನಿಶ್ಚೇಷ್ಟಿತವಾಗುತ್ತದೆ. ಅದೇ ರೀತಿ ಕ್ರಮೇಣ ನೋವು ಅನುಭವಿಸಲು ಪ್ರಾರಂಭಿಸುತ್ತದೆ. ತಕ್ಷಣ ಚಿಕಿತ್ಸೆ ನೀಡದಿದ್ದರೆ ಪರಿಸ್ಥಿತಿ ಗಂಭೀರವಾಗಬಹುದು. 

ಹೃದಯಾಘಾತಕ್ಕೂ ಮೊದಲು ದೇಹದ ಅನೇಕ ಭಾಗಗಳಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ. ಈ ಕಾರಣದಿಂದ ಆ ಭಾಗಗಳಲ್ಲಿ ಮರಗಟ್ಟುವಿಕೆ ಪ್ರಾರಂಭವಾಗುತ್ತದೆ. ಇದರಲ್ಲಿ ಎಡಗೈಯೂ ಸೇರಿದೆ. ನಿಮ್ಮ ಎಡಗೈಯಲ್ಲಿಯೂ ಜುಮ್ಮೆನಿಸುವ ಅನುಭವ ಕಂಡುಬಂದರೆ ಎಚ್ಚರ ವಹಿಸಬೇಕು. ಹೃದಯದ ಸಮಸ್ಯೆಯಿಂದ ಇದು ಸಂಭವಿಸಬಹುದು. ಕೂಡಲೇ ನೀವು ವೈದ್ಯರ ಹತ್ತಿರ ಪರಿಶೀಲಿಸಬೇಕು.

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link