ವಿವಾಹಿತ ಮಹಿಳೆಯರು ಮಂಗಳಸೂತ್ರ ಧರಿಸುವುದರ ಮಹತ್ವ
ಭಾರತೀಯ ಸಂಸ್ಕೃತಿಯಲ್ಲಿ ಅದರಲ್ಲೂ ಹಿಂದೂ ಧರ್ಮದಲ್ಲಿ ಮಂಗಳ ಸೂತ್ರಕ್ಕೆ ತುಂಬಾ ಮಹತ್ವವಿದೆ.
ನಮ್ಮ ಭಾರತೀಯ ಸಂಸೃತಿಯಲ್ಲಿ ವಿವಾಹಿತ ಮಹಿಳೆಯರು ಮಂಗಳ ಸೂತ್ರವನ್ನು ಧರಿಸುವ ಸಂಪ್ರದಾಯವಿದೆ.
ಹಿಂದೂ ಸಂಸ್ಕೃತಿಯಲ್ಲಿ ಮಂಗಳ ಸೂತ್ರವನ್ನು ಎಂದರೆ ತಾಳಿಯನ್ನು ಧರಿಸುವುದರಿಂದ ಸಾಕಷ್ಟು ವಿಶೇಷ ಪ್ರಯೋಜನಗಳಿವೆ ಎಂದು ನಂಬಲಾಗಿದೆ.
ಮುತ್ತೈದೆಯರಿಗೆ ಮಾಂಗಲ್ಯ ಸೌಭಾಗ್ಯದ ಸಂಕೇತವಾಗಿದೆ.
ಮಾಂಗಲ್ಯ ಧಾರಣೆಯು ಪತಿ-ಪತ್ನಿಯ ನಡುವೆ ಅನ್ಯೋನ್ಯವಾದ ಬಾಂಧವ್ಯ ಬೆಸೆಯುವ ಕೊಂಡಿಯಾಗಿದೆ.
ವಿವಾಹಿತ ಮಹಿಳೆ ಮಂಗಳ ಸೂತ್ರವನ್ನು ಧರಿಸುವುದರಿಂದ ಪತಿಯ ಆರೋಗ್ಯ, ಆಯಸ್ಸು ವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.
ಮುತ್ತೈದೆಯರು ಮಂಗಳಸೂತ್ರದೊಂದಿಗೆ ಕರಿಮಣಿಯನ್ನು ಸಹ ಧರಿಸುತ್ತಾರೆ. ಇದರಿಂದ ಅವರ ವೈವಾಹಿಕ ಜೀವನದಲ್ಲಿ ಯಾವುದೇ ರೀತಿ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂಬ ದೃಢವಾದ ನಂಬಿಕೆಯಿದೆ.
ವಿವಾಹಿತ ಮಹಿಳೆ ಮಂಗಳ ಸೂತ್ರವನ್ನು ಧರಿಸುವುದರಿಂದ ಆಕೆಯಲ್ಲಿ ಉದ್ವೇಗದ ತರಂಗಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ಮುತ್ತೈದೆಯರು ಮಾಂಗಲ್ಯ ಧರಿಸುವುದರಿಂದ ಅಂತಹ ಮನೆಯಲ್ಲಿ ಏಳ್ಗೆ, ಪ್ರಗತಿಯನ್ನು ಕಾಣಬಹುದು ಎಂಬ ನಂಬಿಕೆಯೂ
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. ಇದೆ.