ಈ ರಾಶಿಯವರ ಬದುಕನ್ನು ಬಂಗಾರವಾಗಿಸುವುದು ಬೆಳ್ಳಿ ! ಆದರೆ ಈ ರಾಶಿಯವರಿಗೆ ಮಾತ್ರ ಅಶುಭ
ಸಿಂಹ ರಾಶಿಯ ಅಧಿಪತಿ ಸೂರ್ಯ. ಸೂರ್ಯ ಬಿಸಿ ಗ್ರಹವಾಗಿದ್ದು, ಚಂದ್ರ ತಣ್ಣನೆಯ ಸ್ವಭಾವ ಹೊಂದಿರುತ್ತಾನೆ. ಹಾಗಾಗಿ ಈ ರಾಶಿಯವರು ಬೆಳ್ಳಿ ಧರಿಸಬಾರದು. ಈ ರಾಶಿಯವರು ಬೆಳ್ಳಿ ಆಭರಣ ಧರಿಸಿದರೆ ಕೆಲಸ ಕೈಗೂಡುವುದಿಲ್ಲ. ಮಾತ್ರವಲ್ಲ ಆರ್ಥಿಕ ಸಮಸ್ಯೆ ತಲೆದೋರುತ್ತದೆ.
ಧನು ರಾಶಿಯವರ ಅಧಿಪತಿ ಗುರು. ಗುರುವಿನ ಲೋಹ ಚಿನ್ನ. ಹಾಗಾಗಿ ಧನು ರಾಶಿಯವರು ಬೆಳ್ಳಿ ಧರಿಸಬಾರದು. ಒಂದು ವೇಳೆ ಧನು ರಾಶಿಯವರು ಬೆಳ್ಳಿ ಧರಿಸಿದರೆ ಅವಘಡವಾಗುವ ಸಾಧ್ಯತೆ ಇರುತ್ತದೆ.
ಮೇಷ ರಾಶಿಯವರ ಅಧಿಪತಿ ಮಂಗಳ. ಈ ರಾಶಿಯವರು ಬೆಳ್ಳಿ ಧರಿಸಿದರೆ ಹಣಕಾಸಿನ ಸಮಸ್ಯೆ ಎದುರಾಗುತ್ತದೆ. ಮೇಷ ರಾಶಿಯವರು ಬೆಳ್ಳಿ ಧರಿಸಿದರೆ ಒಂದರ ಹಿಂದೆ ಒಂದರಂತೆ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ.
ಕಟಕ, ವೃಶ್ಚಿಕ, ಮೀನ ರಾಶಿಯವರಿಗೆ ಬೆಳ್ಳಿ ಶುಭ. ಈ ರಾಶಿಯನ್ನು ಜಲತತ್ವ ರಾಶಿ ಎನ್ನಲಾಗುತ್ತದೆ. ಬೆಳ್ಳಿ ಕೂಡಾ ಜಲ ತತ್ವ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.