ಬೆಳ್ಳಿ ಉಂಗುರ ಧರಿಸಿದರಷ್ಟೇ ಈ ರಾಶಿಯವರ ಹೆಗಲೇರುವುದು ಅದೃಷ್ಟ, ಸುಖದ ಸುಪ್ಪತ್ತಿಗೆಯಲ್ಲೇ ಜೀವನ...!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರಿಗೆ ಚಿನ್ನದ ಉಂಗುರವನ್ನು ಧರಿಸುವುದಕ್ಕಿಂತ ಬೆಳ್ಳಿಯ ಉಂಗುರ ಧರಿಸಿದರೆ ಅದೃಷ್ಟ ಖುಲಾಯಿಸುತ್ತದೆ ಎಂದು ಬಣ್ಣಿಸಲಾಗಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಲೋಹಗಳ ಮಹತ್ವವನ್ನೂ ಕೂಡ ವಿವರಿಸಲಾಗಿದ್ದು, ಇದರ ಪ್ರಕಾರ, ಎಲ್ಲಾ 12 ರಾಶಿಗಳಲ್ಲಿ ಕೆಲವು ರಾಶಿಯವರಿಗೆ ಬೆಳ್ಳಿ ಉಂಗುರ ಧಾರಣೆಯಿಂದ ಮಾತ್ರ ಜೀವನದಲ್ಲಿ ಪ್ರಗತಿ, ಆರ್ಥಿಕ ಸಮೃದ್ಧಿ ಉಂಟಾಗುತ್ತದೆ. ಅಂತಹ ಅದೃಷ್ಟದ ರಾಶಿಗಳೆಂದರೆ...
ಸಿಂಹ ರಾಶಿ: ಧಾರ್ಮಿಕ ನಂಬಿಕೆಗಳ ಪ್ರಕಾರ, ಸಿಂಹ ರಾಶಿಯ ಜನರಿಗೆ ಚಿನ್ನಕ್ಕಿಂತ ಬೆಳ್ಳಿಯ ಉಂಗುರ ತುಂಬಾ ಪ್ರಾಶಸ್ತ್ಯವಾಗಿದೆ. ಇದರಿಂದ ಅವರ ಜೀವನದಲ್ಲಿ ರಾತ್ರೋರಾತ್ರಿ ಶ್ರೀಮಂತರಾಗುವ ಭಾಗ್ಯದ ಬಾಗಿಲುಗಳು ತೆರೆಯಲಿದೆ ಎನ್ನಲಾಗುತ್ತದೆ.
ಕನ್ಯಾ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕನ್ಯಾ ರಾಶಿಯವರಿಗೆ ಬೆಳ್ಳಿ ಉಂಗುರ ಧಾರಣೆಯಿಂದ ಅದೃಷ್ಟ ಖುಲಾಯಿಸುತ್ತದೆ. ಇವರ ಜೀವನದಲ್ಲಿ ಕಷ್ಟಗಳು ಸರಿದು ಸುಖದ ಹಾದಿ ತೆರೆಯುತ್ತದೆ. ಹಣಕಾಸಿನ ಹರಿವು ಉತ್ತಮಗೊಳ್ಳುತ್ತದೆ.
ತುಲಾ ರಾಶಿ: ಬೆಳ್ಳಿ ಉಂಗುರ ಧರಿಸುವುದರಿಂದ ತುಲಾ ರಾಶಿಯವರಿಗೆ ಅದೃಷ್ಟ ಹೆಗಲೇರುತ್ತದೆ. ಇದರಿಂದ ಇವರು ಕೈ ಹಾಕಿದ ಕೆಲಸಗಳಲ್ಲೆಲ್ಲಾ ಯಶಸ್ಸು ಹಿಂಬಾಲಿಸುತ್ತದೆ.
ಮೀನ ರಾಶಿ: ಬೆಳ್ಳಿ ಉಂಗುರ ಧರಿಸುವುದರಿಂದ ಮೀನ ರಾಶಿಯ ಜನರಿಗೆ ಕಷ್ಟದ ದಿನಗಳು ಕಳೆದು ಒಳ್ಳೆಯ ದಿನಗಳು ಆರಂಭವಾಗುತ್ತದೆ. ಹೆಜ್ಜೆ-ಹೆಜ್ಜೆಗೂ ಅದೃಷ್ಟ ಕೈ ಹಿಡಿಯಲಿದ್ದು ಐಷಾರಾಮಿ ಜೀವನವನ್ನು ಆನಂದಿಸುವ ಸುವರ್ಣ ಸಮಯವನ್ನು ಕಾಣುವರು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.