Simhapriya: ಮದುವೆ ವಾರ್ಷಿಕೋತ್ಸವದ ಸಂಭ್ರಮ: ನಾಯಿಮರಿಯಿಂದ ಶುರುವಾದ ಸಿಂಹಪ್ರಿಯಾ ಲವ್‌ಸ್ಟೋರಿ!

Sun, 28 Jan 2024-5:08 pm,

ಚಂದನವನದ ಸ್ಟಾರ್‌ ಜೋಡಿಯಾದ  ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮೊನ್ನೆ ಅಂದರೆ ಜನವರಿ 26ರಂದು ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.

ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾರವರ ಮದುವೆಯ ಮೊದಲ ವಾರ್ಷಿಕೋತ್ಸವದ ಖುಷಿಯಲ್ಲಿರುವಾಗಲೇ ತಮ್ಮ ಲವ್‌ ಸ್ಟೋರಿಯ ಸೀಕ್ರೇಟ್‌ ರಿವಿಲ್‌ ಆಗಿದೆ.

ಸಿಂಹಪ್ರಿಯಾ ಜೋಡಿಯ ನಡುವೆ ಪ್ರೀತಿ ಮೊಳಗಲು ಕಾರಣ ಕ್ರಿಸ್ಟಲ್​ ಎಂಬ ನಾಯಿಮರಿ ಎಂದಿದ್ದರು. ವಸಿಷ್ಠ ಅವರು ನೀಡಿದ್ದ  ನಾಯಿಮರಿಯಿಂದ ಇವರ ಲವ್​ ಸ್ಟೋರಿ ಶುರುವಾಗಿದ್ದಂತೆ.

ಹರಿಪ್ರಿಯಾ ಲಕ್ಕಿ ಮತ್ತು ಹ್ಯಾಪಿ ಎಂಬ ನಾಯಿಮರಿಗಳನ್ನು ಸಾಕಿದ್ದು, ಆದರೆ ಲಕ್ಕಿ ಸತ್ತುಹೋಯಿತು. ಆಗ  ಹ್ಯಾಪಿಗೆ ಒಂಟಿತನ ಕಾಡಿದ್ದು, ಹಾಗೆಯೇ ಹರಿಪ್ರಿಯಾ ಕೂಡ ಲಕ್ಕಿ ಇಲ್ಲದ ನೋವಿನಲ್ಲಿದ್ದಾಗ ಸಂವಸಿಷ್ಠ ಸಿಂಹ ಕ್ರಿಸ್ಟಲ್​ ಎಂಬ ನಾಯಿಮರಿಯನ್ನು ನೀಡಿದರು.

ಹರಿಪ್ರಿಯಾಗೆ ವಸಿಷ್ಠ ಈ ನಾಯಿಯನ್ನು ಗಿಫ್ಟ್​ ಮಾಡಿದಾಗ ಇವನು ಒಂದು ಮೆಸೇಜ್​ ತಂದಿದ್ದಾನೆ ಎಂಬುದು ಗೊತ್ತಿರಲಿಲ್ಲ. ಅವನ ಹೊಟ್ಟೆಯಲ್ಲಿ ಹಾರ್ಟ್​ ಶೇಪ್​ನ ಒಂದು ಬರ್ತ್​ ಮಾರ್ಕ್​ ಇದೆ. ಅವನು ಬೆಳೆಯುತ್ತಾ ಬೆಳೆಯುತ್ತಾ ನಮ್ಮ ಪ್ರೀತಿ ಕೂಡ ಬೆಳೆಯಿತು ಎಂದಿದ್ದಾರೆ.

ತೆಲುಗಿನ ‘ಎವರು’ ಎಂಬ ರಿಮೇಕ್  ಸಿನಿಮಾದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ  ನಟಿಸಿದ್ದು, ಅದು ಕಳೆದ ವರ್ಷ ರಿಲೀಸ್‌ ಆಗಿತ್ತು. ಈ ಚಿತ್ರದಲ್ಲೇ ಇವರಿಬ್ಬರೂ ಪರಸ್ಪರ  ಅರ್ಥ ಮಾಡಿಕೊಂಡರು ಎಂದು ಹೇಳಲಾಗಿತ್ತು.

ಹರಿಪ್ರಿಯಾ  ಹಾಗೂ ವಸಿಷ್ಠ ಸಿಂಹ ಕೆಲ ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿ ದಾಂಪತ್ಯಕ್ಕೆ ಇಬ್ಬರು ಕಾಲಿರಿಸಿದರು.

'ಸಿಂಹಪ್ರಿಯಾ' ಜೋಡಿ 2022ರ ಡಿಸೆಂಬರ್ ತಿಂಗಳಿನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡು, ಬಳಿಕ ಕಳೆದ ವರ್ಷದ  ಜನವರಿ 26ರಂದು ಇವರು ಮೈಸೂರಿನ ಗಣಪತಿ ಸಚಿದಾನಂದ ಆಶ್ರಮದಲ್ಲಿ  ಮದುವೆಯಾದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link