Virat Kohli-Smriti Mandhana: ಕಿಂಗ್ ಕೊಹ್ಲಿ - ಕ್ವೀನ್ ಸ್ಮೃತಿ… RCB ಇವರಿಬ್ಬರಲ್ಲಿ ಅತಿ ಹೆಚ್ಚು ಸಂಭಾವನೆ ನೀಡೋದು ಯಾರಿಗೆ?
ಇನ್ನೇನು ಐಪಿಎಲ್ ಮಹಾ ಟೂರ್ನಿ ಪ್ರಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 22ರಿಂದ ಪ್ರಾರಂಭವಾಗಲಿರುವ ಸೀಸನ್’ನಲ್ಲಿ ಮೊದಲ ಮುಖಾಮುಖಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ.
ಚೆನ್ನೈ ಮೈದಾನದಲ್ಲಿ ಈ ಹಣಾಹಣಿ ಪ್ರಾರಂಭವಾಗಲಿದ್ದು, ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಅಂದಹಾಗೆ ನಾವಿಂದು ಈ ವರದಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಮೃತಿ ಮಂಧಾನ ನಡುವೆ ಸಂಭಾವನೆಯಲ್ಲಿರುವ ಸಾಮ್ಯತೆ ಬಗ್ಗೆ ಮಾಹಿತಿ ನೀಡಲಿದ್ದೇವೆ.
IPLನ ಮೊದಲ ಸೀಸನ್’ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವೇ ಆಡುತ್ತಿರುವ ವಿರಾಟ್ ಕೊಹ್ಲಿಗೆ RCB ತಂಡವು 15 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ. 2022 ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್‌ಸಿಬಿ ವಿರಾಟ್ ಕೊಹ್ಲಿಯನ್ನು 15 ಕೋಟಿ ರೂ.ಗೆ ಉಳಿಸಿಕೊಂಡಿತ್ತು.
ಇನ್ನೊಂದೆಡೆ ಮಹಿಳಾ ಪ್ರೀಮಿಯರ್ ಲೀಗ್ ಫೆಬ್ರವರಿ 23 ರಿಂದ ಅಂದರೆ ಶುಕ್ರವಾರದಿಂದ ಪ್ರಾರಂಭವಾಗಿದೆ. ಇದು ಮಹಿಳಾ ಐಪಿಎಲ್ ಎರಡನೇ ಸೀಸನ್. ಮೊದಲ ಸೀಸನ್’ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಅಬ್ಬರದಿಂದಲೇ ಪ್ರಶಸ್ತಿ ಗೆದ್ದುಕೊಂಡಿತ್ತು. ಎರಡನೇ ಸೀಸನ್‌ನಲ್ಲಿ ಮತ್ತೊಮ್ಮೆ ಟ್ರೋಫಿಗಾಗಿ ಐದು ತಂಡಗಳ ನಡುವೆ ಹಣಾಹಣಿ ನಡೆಯಲಿದೆ.
ಡಬ್ಲ್ಯೂಪಿಎಲ್ ಸತತ ಗೆಲುವು ಸಾಧಿಸಿದ ಆರ್ ಸಿ ಬಿ ಇದೀಗ ಈ ಸಲ ಕಪ್ ನಮ್ದೇ ಎನ್ನುತ್ತಿದೆ. ಅಂದಹಾಗೆ ಕ್ರೀಡಾ ಲೋಕದ ಕ್ರಶ್ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಎಲ್ಲರ ಗಮನ ಸೆಳೆದಿರುವುದು ಸುಳ್ಳಲ್ಲ.
ಡಬ್ಲ್ಯೂಪಿಎಲ್ ಆರಂಭಕ್ಕೂ ಮುನ್ನ ಕನ್ನಡದಲ್ಲಿ ಮಾತನಾಡಿ ಕ್ರೇಜ್ ಸೃಷ್ಟಿಸಿದ್ದ ಸ್ಮೃತಿ, ಮಹಿಳಾ ಐಪಿಎಲ್ ಇತಿಹಾಸದಲ್ಲಿ ಸ್ಮೃತಿ ಮಂಧಾನ ಅತ್ಯಂತ ದುಬಾರಿ ಆಟಗಾರ್ತಿ.
ಇನ್ನು ಸ್ಮೃತಿ ಮಂಧಾನ ಅವರನ್ನು ಆರ್ ಸಿ ಬಿ ತಂಡ 3 ಕೋಟಿ 20 ಲಕ್ಷ ರೂ. ತಂಡದಲ್ಲಿ ಉಳಿಸಿಕೊಂಡಿದೆ. ಇವರು ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರು.