ಹಲ್ಲುಗಳಲ್ಲಿ ಹುಳುಕು, ಅಸಹನೀಯ ನೋವು ನಿವಾರಣೆಗೆ ಸರಳ ಪರಿಣಾಮಕಾರಿ ಮನೆಮದ್ದುಗಳು
ನಿತ್ಯ ಎರಡು ಬಾರಿ ಬ್ರಶ್ ಮಾಡಿದರೂ ಹಲ್ಲುಗಳ ಹುಳುಕು ಹಾಗೂ ಅಸಹನೀಯ ಹಲ್ಲು ನೋವು ಕಾಡುತ್ತಿದ್ದರೆ ಇದರಿಂದ ಸುಲಭವಾಗಿ ಪರಿಹಾರ ಪಡೆಯಲು ಇಲ್ಲಿದೆ ಕೆಲವು ಪರಿಣಾಮಕಾರಿ ಮನೆಮದ್ದುಗಳು.
ಉಪ್ಪಿನಿಂದ ಬ್ರಶ್ ಮಾಡುವುದರಿಂದ ಹಲ್ಲು ನೋವಿನಿಂದ ತಕ್ಷಣ ಉಪಶಮನ ಪಡೆಯಬಹುದು.
ಸಾಸಿವೆ ಎಣ್ಣೆಯಲ್ಲಿ ಉಪ್ಪು, ಅರಿಶಿನ ಬೆರೆಸಿ ಹುಳುಕಲ್ಲಿನ ಮೇಲೆ ಸವರಿ ಮಸಾಜ್ ಮಾಡಿದರೆ ಹಲ್ಲಿನ ಹುಳುಕನ್ನು ನಿವಾರಿಸಬಹುದು.
ಕಲ್ಲುಪ್ಪನ್ನು ಹರಳೆಣ್ಣೆಯಲ್ಲಿ ಬೆರೆಸಿ ಹತ್ತಿ ಉಂಡೆಯ ಸಹಾಯದಿಂದ ಹುಳುಕಲ್ಲಿನ ಜಾಗದಲ್ಲಿ ಇಡುವುದರಿಂದ ಹಲ್ಲಿನ ಹುಳುಕು ನೋವಿನಿಂದ ಪರಿಹಾರ ದೊರೆಯುತ್ತದೆ.
ಬೆಳ್ಳುಳ್ಳಿಯನ್ನು ಜಜ್ಜಿ ಇದರೊಂದಿಗೆ ಪುಡಿ ಉಪ್ಪನ್ನು ಬೆರೆಸಿ ಬ್ರಶ್ ಮಾಡಿದರೆ ಅಸಹನೀಯ ಹಲ್ಲು ನೋವು ಕೂಡಲೇ ಮಾಯವಾಗುತ್ತದೆ.
ಹಲ್ಲು ನೋವಿಗೆ ಲವಂಗದ ಎಣ್ಣೆ ಅತ್ಯುತ್ತಮ ಪರಿಹಾರವಾಗಿದೆ. ಹತ್ತಿ ಉಂಡೆಯಲ್ಲಿ ಲವಂಗದ ಎಣ್ಣೆಯನ್ನು ಅಡ್ಡಿ ಪೀಡಿತ ಜಾಗಕ್ಕೆ ಹಚ್ಚುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.
ತುಳಸಿದಳದಲ್ಲಿ ಉಪ್ಪು ಬೆರೆಸಿ ಹಲ್ಲು ನೋವಿರುವ ಜಾಗದಲ್ಲಿ ಇಡುವುದರಿಂದ ತಕ್ಷಣವೇ ಹಲ್ಲು ನೋವು ಮಾಯವಾಗುವುದರ ಜೊತೆಗೆ ಹುಳುಕಲ್ಲಿನಿಂದಲೂ ಪರಿಹಾರ ದೊರೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.