ಯೂರಿನ್ ಇನ್ಫೆಕ್ಷನ್ ಸಮಸ್ಯೆಗೆ ಅತ್ಯುತ್ತಮ ಮನೆಮದ್ದುಗಳಿವು
ಮೂತ್ರದ ಸೋಂಕು ಅಥವಾ ಯುರಿನರಿ ಟ್ರ್ಯಾಕ್ ಇನ್ಫೆಕ್ಷನ್- ಯುಟಿಐ (Urinary tract infection- UTI) ಮಹಿಳೆಯರನ್ನು ಹೆಚ್ಚಾಗಿ ಬಾಧಿಸುವ ಸರ್ವೇ ಸಾಮಾನ್ಯವಾದ ಆರೋಗ್ಯ ಸಮಸ್ಯೆ.
ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯದೇ ಇರುವುದು, ಮೂತ್ರವಿಸರ್ಜನೆ ಬಳಿಕ ಹಾಗೂ ಲೈಂಗಿಕ ಕ್ರಿಯೆಯ ನಂತರ ಶುಚಿತ್ವಕ್ಕೆ ಹೆಚ್ಚಿನ ಗಮನಹರಿಸದೇ ಇರುವುದು ಇದಕ್ಕೆ ಯುಟಿಐ ಸಮಸ್ಯೆಗೆ ಪ್ರಮುಖ ಕಾರಣಗಳು.
ನೈಸರ್ಗಿಕ ಪಾನೀಯ ಹಾಗೂ ಕೆಲವು ನಿಮ್ಮ ಮನೆಯಲ್ಲಿಯೇ ತಯಾರಿಸಬಹುದಾದ ಪಾನೀಯಗಳ ಸಹಾಯದಿಂದ ಯುಟಿಐ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಅವುಗಳೆಂದರೆ...
ಆರೋಗ್ಯಕ್ಕೆ ವರದಾನದಂತಿರುವ ಎಳನೀರಿನ ಸೇವನೆಯು ಮೂತ್ರನಾಳದ ಸೋಂಕು ನಿವಾರಣೆಗೆ ಅತ್ಯುತ್ತಮ ಮನೆಮದ್ದು.
ಒಂದು ಲೋಟ ನೀರಿನಲ್ಲಿ ಎರಡು ಚಮಚ ಕೊತ್ತಂಬರಿ ಬೀಜ ಹಾಕಿ ಚೆನ್ನಾಗಿ ಕುದಿಸಿ ಶೋಧಿಸಿ ಕುಡಿಯಿರಿ. ದಿನಕ್ಕೆ ಮೂರರಿಂದ ನಾಲ್ಕು ಬಾರಿ ಈ ಪಾನೀಯ ಸೇವಿಸುವುದರಿಂದ ಯುಟಿಐ ಸಮಸ್ಯೆಗೆ ಸುಲಭ ಪರಿಹಾರ ದೊರೆಯುತ್ತದೆ.
ಅಕ್ಕಿಯನ್ನು ಚೆನ್ನಾಗಿ ತೊಳೆದು ಬಳಿಕ ನೀರು ಹಾಕಿ ಒಂದು ಗಂಟೆ ನೆನೆಸಿ. ನಂತರ ಈ ನೀರನ್ನು ಶೋಧಿಸಿ ಸೇವಿಸುವುದರಿಂದ ಮೂತ್ರದ ಸೋಂಕಿನಿಂದ ಪರಿಹಾರ ಪಡೆಯಬಹುದು.
ಮೂತ್ರನಾಳದ ಸೋಂಕಿನ ಸಂದರ್ಭದಲ್ಲಿ ದಿನಕ್ಕೆ ಒಂದು ಬಾರಿಯಾದರೂ ಬಾಳೆದಿಂಡಿನ ರಸವನ್ನು ಸೇವಿಸುವುದರಿಂದ ಶೀಘ್ರದಲ್ಲೇ ಸೋಕು ನಿವಾರಿಸಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.