ಸನ್‌ಬರ್ನ್‌ನಿಂದ ಮುಕ್ತಿ ಹೊಂದಿ ಬೇಸಿಗೆಯಲ್ಲಿ ಕಾಂತಿಯುತ ಚರ್ಮ ಪಡೆಯಲು ಸಿಂಪಲ್ ಟಿಪ್ಸ್
ಬೇಸಿಗೆಯಲ್ಲಿ ಸನ್‌ಬರ್ನ್ ಸಮಸ್ಯೆ ಸಾಮಾನ್ಯ ಸಮಸ್ಯೆ. ಸನ್‌ಬರ್ನ್ ಸಮಸ್ಯೆಯಿಂದ ಪರಿಹಾರ ಪಡೆಯಲು ಕೆಲವು ಸಲಹೆಗಳು ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಅವುಗಳೆಂದರೆ...
ಬೇಸಿಗೆಯಲ್ಲಿ ಮುಖ ತುಂಬಾ ಬೆವರುತ್ತದೆ. ಹಾಗಾಗಿ, ಆಗಾಗ್ಗೆ ಮುಖವನ್ನು ಶುಚಿಗೊಳಿಸುವುದು ಅಗತ್ಯ. ದಿನಕ್ಕೆ ಮೂರ್ನಾಲ್ಕು ಬಾರಿ ಫೇಸ್ ವಾಶ್ ಮಾಡಿ. ಹೊರಗೆ ಹೋಗಿ ಬಂದ ಕೂಡಲೇ ಮುಖ ತೊಳೆಯುವುದನ್ನು ಮರೆಯಬೇಡಿ.
ಮನೆಯಿಂದ ಹೊರಹೋಗುವಾಗ ಸನ್ ಸ್ಕ್ರೀನ್ ಕ್ರೀಂ ಗಳನ್ನು ಬಳಸುವುದನ್ನು ಮರೆಯಬೇಡಿ.
ಬೇಸಿಗೆ ಕಾಲದಲ್ಲಿ ವಾರಕ್ಕೆ ಒಮ್ಮೆಯಾದರೂ ಫೇಸ್ ಪ್ಯಾಕ್ ಬಳಸುವುದು ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ಬೇಸಿಗೆಯಲ್ಲಿ ಮುಖದ ಹೊಳಪನ್ನು ಕಾಪಾಡಿಕೊಳ್ಳಲು, ಫೇಸ್ ವಾಶ್ ಮಾಡಿದ ನಂತರ ಜೆಲ್ ಆಧಾರಿತ ಶೀಟ್ ಮಾಸ್ಕ್ ಬಳಸಿ. ಅಲೋವೆರಾ ಜೆಲ್ ಸಹಾಯದಿಂದ ನೀವು ಇದನ್ನು ಮನೆಯಲ್ಲಿಯೇ ತಯಾರಿಸಬಹುದು. ಇದರಿಂದ ಸನ್ ಬರ್ನ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಬೇಸಿಗೆಯಲ್ಲಿ ಬಿಸಿಲಿಗೆ ಹೋಗುವಾಗ ಮುಖವನ್ನು ಕಾಟನ್ ಬಟ್ಟೆಯಿಂದ ಕವರ್ ಮಾಡಿ. ಇದರೊಂದಿಗೆ ಸೂರ್ಯನ ನೇರ ಕಿರಣಗಳು ನಿಮ್ಮ ಚರ್ಮದ ಮೇಲೆ ಬೀಳದಂತೆ ನಿಗಾವಹಿಸಲು ಉಡುಪಿನ ಬಗ್ಗೆ ಗಮನಹರಿಸಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.