Yellow teeth whitening remedies: ಹಲ್ಲುಗಳಲ್ಲಿ ಆಂಟಿ ಕುಳಿತಿರುವ ಹಳದಿ ಕಲೆಗಳನ್ನು ನಿಮಿಷಗಳಲ್ಲಿ ಮಾಯ ಮಾಡುವ ಸರಳ ಉಪಾಯ ಇದು !
ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದರಿಂದ ದಂತ ಕುಳಿ, ಬಾಯಿಯಿಂದ ದುರ್ವಾಸನೆ, ಹಳದಿ ಹಲ್ಲುಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಧೂಮಪಾನದ ಅಭ್ಯಾಸ, ಔಷಧಿಗಳ ಅಡ್ಡಪರಿಣಾಮಗಳು, ಚಹಾ-ಕಾಫಿಯ ಅತಿಯಾದ ಸೇವನೆ ಅಥವಾ ಹೆಚ್ಚು ಸಂಸ್ಕರಿಸಿದ ಆಹಾರವನ್ನು ಸೇವಿಸುವುದರಿಂದಲೂ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ.
ಬೇಕಿಂಗ್ ಸೋಡಾ ಅಥವಾ ಅಡಿಗೆ ಸೋಡಾವನ್ನು ಹಲ್ಲುಗಳನ್ನು ಹೊಳೆಯುವಂತೆ ಮಾಡಲು ಬಳಸಬಹುದು. ಅಡಿಗೆ ಸೋಡಾ ಮತ್ತು ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ ಈ ಪೇಸ್ಟ್ ಅನ್ನು ಬ್ರಷ್ ಸಹಾಯದಿಂದ ಹಲ್ಲುಗಳ ಮೇಲೆ ಹಚ್ಚಿ ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸಬಹುದು.
ಕಿತ್ತಳೆ ಮತ್ತು ನಿಂಬೆಯಂತಹ ಸಿಟ್ರಸ್ ಹಣ್ಣುಗಳ ಸಿಪ್ಪೆಗಳ ಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ ನಂತರ ಹಲ್ಲುಗಳ ಮೇಲೆ ಚೆನ್ನಾಗಿ ಉಜ್ಜಿಕೊಳ್ಳಿ. ಹೀಗೆ ಮಾಡುವುದರಿಂದ ಹಲ್ಲಿನ ಹಳದಿ ಬಣ್ಣ ಕಡಿಮೆಯಾಗುತ್ತದೆ. ಇದು ಬಾಯಿಯ ದುರ್ವಾಸನೆಯನ್ನೂ ಕಡಿಮೆ ಮಾಡುತ್ತದೆ.
ತೆಂಗಿನ ಎಣ್ಣೆಯಿಂದ ಹಲ್ಲುಗಳ ಮೇಲೆ ಮಸಾಜ್ ಮಾಡುವುದರಿಂದ ಹಲ್ಲುಗಳ ಹಳದಿ ಬಣ್ಣವನ್ನು ಕಡಿಮೆ ಮಾಡಬಹುದು. ಅಲ್ಲದೆ, ಸ್ವಲ್ಪ ತೆಂಗಿನೆಣ್ಣೆಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಹೊತ್ತು ಬಾಯಿಯಲ್ಲಿ ಇರಿಸಿಕೊಳ್ಳಿ. 5-10 ನಿಮಿಷಗಳ ಕಾಲದ ನಂತರ ಎಣ್ಣೆಯನ್ನು ಉಗುಳಬೇಕು.
ಆಪಲ್ ಸೈಡರ್ ವಿನೆಗರ್ ಸಹಾಯದಿಂದ, ಹಲ್ಲುಗಳ ಹಳದಿ ಬಣ್ಣವನ್ನು ಕಡಿಮೆ ಮಾಡಬಹುದು. ಇದಕ್ಕಾಗಿ, ಅರ್ಧ ಬೌಲ್ ನೀರಿನಲ್ಲಿ 2 ಚಮಚ ಆಪಲ್ ವಿನೆಗರ್ ಅನ್ನು ಬೆರೆಸಿ ಮತ್ತು ಈ ಮಿಶ್ರಣದಿಂದ ಗಾರ್ಗಲ್ ಮಾಡಿ. ಹೀಗೆ ಮಾಡುವುದರಿದ ಹಲ್ಲುಗಳಲ್ಲಿ ಅಂಟಿಕೊಂಡಿರುವ ಕೊಳೆಯನ್ನು ಸ್ವಚ್ಛಗೊಳಿಸಳು ಸಹಾಯ ಮಾಡುತ್ತದೆ.