Cleaning Tips: ಅಡುಗೆ ಮನೆ ಟೈಲ್ಸ್ ನಲ್ಲಿ ಅಂಟಿಕೊಂಡಿರುವ ಎಣ್ಣೆ ಜಿಡ್ಡು, ಕಲೆಗಳನ್ನು ನಿಮಿಷಗಳಲ್ಲಿ ಹೋಗಲಾಡಿಸುತ್ತದೆ ಈ ಸಿಂಪಲ್ ಟಿಪ್ಸ್
ಅಡುಗೆ ಮಾಡಿದ ನಂತರ ಅಡುಗೆ ಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ಅಡುಗೆ ಮಾಡುವಾಗ ಅಲ್ಲಲ್ಲಿ ಎಣ್ಣೆ ಮತ್ತು ಮಸಾಲೆ ಕಲೆಗಳು ಚಿಮುತ್ತಿರುತ್ತದೆ. ಅದನ್ನು ಸುಲಭವಾಗಿ ಸ್ವಚ್ಛಗೊಳಿಸಲು ಅಡಿಗೆ ಸೋಡಾವನ್ನು ಬಳಸಬೇಕು. ಅಡುಗೆ ಸೋಡಾ ಬಳಸಿ ಸ್ವಚ್ಛ ಮಾಡುವುದರಿಂದ ಅಡುಗೆ ಮನೆಯ ಟೈಲ್ಸ್ ಮತ್ತು ಸ್ಲಾಬ್ ಗಳಲ್ಲಿ ಅಂಟಿ ಕುಳಿತಿರುವ ಕಲೆಗಳು ಮಾಯವಾಗಿ ಬಿಡುತ್ತವೆ.
ಬಿಳಿ ಟೂತ್ಪೇಸ್ಟ್ ಅಡುಗೆಮನೆಯ ಕೊಳೆಯನ್ನು ಸುಲಭವಾಗಿ ಶುಚಿಗೊಳಿಸಲು ಸಹಾಯ ಮಾಡುತ್ತದೆ. ಯಾವ ಜಾಗದಲ್ಲಿ ಕಲೆ, ಕೊಳೆ ಕಾಣಿಸುತ್ತದೆಯೋ ಅಲ್ಲಿ ಟೂತ್ಪೇಸ್ಟ್ ಅನ್ನು ಹಾಕಿ 5 ನಿಮಿಷಗಳವರೆಗೆ ಹಾಗೆಯೇ ಬಿಡಿ. ನಂತರ ಆ ಜಾಗವನ್ನು ಉಜ್ಜಿ ತೊಳೆದರೆ ನಿಮ್ಮ ಅಡುಗೆ ಮನೆ ಫಳ ಫಳನೇ ಹೊಳೆಯಲು ಆರಂಭಿಸುತ್ತದೆ.
ವಿನೆಗರ್ ತೈಲ ಕಲೆಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವ ಅತ್ಯುತ್ತಮ ಆಮ್ಲವಾಗಿದೆ. ನೀರಿನಲ್ಲಿ ವಿನೆಗರ್ ಮಿಶ್ರಣ ಮಾಡುವ ಮೂಲಕ ಅಡುಗೆ ಮನೆಯ ಎಣ್ಣೆ ಜಿಡ್ಡಿನಿಂದ ಪರಿಹಾರ ಕಂಡು ಕೊಳ್ಳಬಹುದು. ನೀರಿನಲ್ಲಿ ಬೆರೆಸಿದ ವಿನೆಗರ್ ಮಿಶ್ರಣವನ್ನು ಕೊಳಕು ಅಂಟಿಕೊಂಡಿರುವ ಜಾಗಕ್ಕೆ ಸುರಿಯಬೇಕು. 5 ನಿಮಿಷಗಳ ನಂತರ ಆ ಜಾಗವನ್ನು ಉಜ್ಜಿ ತೊಳೆದರೆ ಸಂಪೂರ್ಣ ಸ್ವಚ್ಛ ಅಡುಗೆ ಮನೆ ನಿಮ್ಮದಾಗುತ್ತದೆ.
ನಿಂಬೆ ಮತ್ತು ವಿನೆಗರ್ ನ ದಪ್ಪ ಪೇಸ್ಟ್ ಅನ್ನು ತಯಾರಿಸಿ, ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಬೇಕು. ನಂತರ ಈ ಮಿಶ್ರಣವನ್ನು ಸ್ವಚ್ಚಗೊಳಿಸಬೇಕಾಗಿರುವ ಜಾಗಕ್ಕೆ ಹಾಕಿ ತಿಕ್ಕಿ ತೊಳೆದರೆ ಅದ್ಭುತ ಹೊಳಪು ಪಡೆಯಬಹುದು.
ನೀವು ಮೊಂಡುತನದ ಎಣ್ಣೆಯ ಕಲೆಗಳನ್ನು ಉಪ್ಪು ನೀರಿನಿಂದಲೂ ಸ್ವಚ್ಛಗೊಳಿಸಬಹುದು. ಎಣ್ಣೆಯ ಕಲೆಗಳನ್ನು ಹೋಗಲಾಡಿಸಲು ಇದು ಅತ್ಯುತ್ತಮ ಪರಿಹಾರವಾಗಿದೆ.