IRCTC: ತತ್ಕಾಲ್ ಕನ್ಫರ್ಮ್ ರೈಲ್ವೇ ಟಿಕೆಟ್‌ಗಳನ್ನು ಬುಕ್ ಮಾಡಲು ಸಿಂಪಲ್ ಟ್ರಿಕ್ಸ್, ನೀವೂ ಪ್ರಯತ್ನಿಸಿ ನೋಡಿ!

Thu, 19 Sep 2024-11:03 am,

ದೂರದ ಪ್ರಯಾಣಕ್ಕಾಗಿ ಭಾರತೀಯ ರೈಲ್ವೇಯಲ್ಲಿ ಟಿಕೆಟ್ ಬುಕಿಂಗ್ ಮಾಡಲು ಬಯಸಿದರೆ ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಬೇಕು. ಆದಾಗ್ಯೂ, ಹಲವು ಬಾರಿ ಆಕಸ್ಮಿಕವಾಗಿ ಪ್ಲಾನ್ ರೂಪಿಸಿದಾಗ ರೈಲ್ವೇ ತತ್ಕಾಲ್ ಟಿಕೆಟ್ ಬುಕಿಂಗ್ ಮೂಲಕ ಟ್ರೈನ್ ಟಿಕೆಟ್ ಬುಕ್ ಮಾಡಲು ಅವಕಾಶವಿದೆ.

ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ದೃಢೀಕೃತ ಟ್ರೈನ್ ಟಿಕೆಟ್ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಆದರೆ, ನೀವು ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಕೆಲವು ಟ್ರಿಕ್ಸ್ ಅಳವಡಿಸಿಕೊಂಡರೆ ಸುಲಭವಾಗಿ ದೃಢೀಕೃತ ಟಿಕೆಟ್ ಪಡೆಯಬಹುದು. 

ನೀವು ಕನ್ಫರ್ಮ್  ಟ್ರೈನ್ ಟಿಕೆಟ್ ಪಡೆಯಲು ಬಯಸಿದರೆ ಇದಕ್ಕಾಗಿ ತತ್ಕಾಲ್ ಟಿಕೆಟ್‌ಗಳನ್ನು ಬುಕಿಂಗ್ ಮಾಡುವಾಗ ವೆಬ್‌ಸೈಟ್ ತೆರೆಯುತ್ತಿದ್ದಂತೆ ವೇಗವಾಗಿ ಟಿಕೆಟ್ ಬುಕ್ ಮಾಡಬೇಕು. 

ತತ್ಕಾಲ್ ಟಿಕೆಟ್ ಬುಕಿಂಗ್‌ಗಾಗಿ ನೀವು ವೆಬ್‌ಸೈಟ್ ತೆರೆಯುವ ಮೊದಲೇ ಎಲ್ಲಾ ಮಾಹಿತಿಯನ್ನು ತಯಾರಿಟ್ಟು ವಿವರಗಳನ್ನು ತ್ವರಿತವಾಗಿ ನಮೂದಿಸಿ ಟಿಕೆಟ್ ಬುಕ್ ಮಾಡಿದರೆ ಕನ್ಫರ್ಮ್ ಟಿಕೆಟ್ ಪಡೆಯುವ ಸಾಧ್ಯತೆ ಹೆಚ್ಚು. 

ತತ್ಕಾಲ್ ಟಿಕೆಟ್ ಬುಕಿಂಗ್ ಮಾಡುವಾಗ ಒಂದೇ ಸಾಧನದಲ್ಲಿ ಪ್ರಯತ್ನಿಸುವ ಬದಲಿಗೆ ಒಮ್ಮೆಗೆ ಹಲವು ಸಾಧನಗಳಲ್ಲಿ ಟಿಕೆಟ್ ಬುಕ್ಕಿಂಗ್ ಗಾಗಿ ಪ್ರಯತ್ನಿಸಿ.

ತತ್ಕಾಲ್ ಟಿಕೆಟ್ ಬುಕಿಂಗ್ ವೇಳೆ ವೇಗವಾಗಿ ಟಿಕೆಟ್ ಬುಕಿಂಗ್ ಮಾಡಲು  ಪ್ರಯಾಣಿಕರ ಹೆಸರುಗಳು, ವಯಸ್ಸು, ಆಧಾರ್ ಸಂಖ್ಯೆಗಳು ಮತ್ತು ಇತರ ವಿವರಗಳನ್ನು  ಮೊದಲೇ ತಯಾರಿಡಿ. 

ತತ್ಕಾಲ್ ಟಿಕೆಟ್ ಬುಕಿಂಗ್ ಮಾಡುವಾಗ ವೇಗವಾಗಿ ಟಿಕೆಟ್ ಬುಕ್ ಮಾಡುವುದರಿಂದ ಕನ್ಫರ್ಮ್ ಟಿಕೆಟ್ ಪಡೆಯುವ ಸಾಧ್ಯತೆ ಹೆಚ್ಚು. ಇದಕ್ಕಾಗಿ ಪಾವತಿಗಾಯಿ ನೆಟ್ ಬ್ಯಾಂಕಿಂಗ್, ಯುಪಿಐನಂತಹ ವೇಗದ ಪಾವತಿ ಆಯ್ಕೆಗಳನ್ನು ಬಳಸಿ. 

ಹಲವೊಮ್ಮೆ ಎಲ್ಲಾ ತಯಾರಿದ್ದರೂ ನಾವು ಎಷ್ಟೇ ಫಾಸ್ಟ್ ಆಗಿ ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದರೂ ಇಂಟರ್ನೆಟ್ ಕೈಕೊಡುವ ಸಂಭವವಿರುತ್ತದೆ. ಇದನ್ನು ತಪ್ಪಿಸಲು ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಹೈ-ಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಖಚಿತಪಡಿಸಿಕೊಳ್ಳಿ. 

ನೀವು ತತ್ಕಾಲ್ ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದರೆ ಸರಿಯಾಗಿ ಲಾಗಿನ್ ಆಗುವ ಬದಲು ಎರಡು ನಿಮಿಷ ಮೊದಲೇ ವೆಬ್‌ಸೈಟ್ ಲಾಗಿನ್ ಆಗಿ. 

ಒಂದೊಮ್ಮೆ ನೀವು ತತ್ಕಾಲ್ ಟಿಕೆಟ್‌ಗಳನ್ನು ನೀವೇ ಕಾಯ್ದಿರಿಸುವಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ ಬುಕಿಂಗ್ ಏಜೆಂಟ್‌ನ ಸಹಾಯವನ್ನು ತೆಗೆದುಕೊಳ್ಳುವುದು ಉತ್ತಮ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link