7 ವರ್ಷದ ಮಗುವಿನೊಂದಿಗೆ ನಟಿ ಅನಸೂಯಾ ʼಲಿಪ್ ಕಿಸ್ʼ..! ವಿವಾದ ಸೃಷ್ಟಿಸುತ್ತಿದೆ ಗಾಯಕಿಯ ಫೋಸ್ಟ್
ಟಾಲಿವುಡ್ ನಿರೂಪಕಿ, ನಟಿ ಅನಸೂಯಾ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಇವರಿಗೆ ಹಿರಿತೆರೆ ಮತ್ತು ಬೆಳ್ಳಿತೆರೆಯಲ್ಲಿ ಒಂದು ರೇಂಜ್ ಇದೆ. ಮೇಲಾಗಿ ಈ ನಟಿ ಆಗಾಗ ವಿವಾದಗಳ ಮೂಲಕ ಸುದ್ದಿಯಲ್ಲಿರುತ್ತಾರೆ..
ಈ ಹಿಂದೆ ಟಿವಿ ಶೋ ಒಂದರಲ್ಲಿ ಅನಸೂಯಾ ಪುಟ್ಟ ಮಗುವನ್ನು ಎತ್ತಿಕೊಂಡು ಮುಖ, ಕೆನ್ನೆಗೆ ಕಿಸ್ ಮಾಡು ಎಂದು ಹೇಳುತ್ತಾಳೆ.. ಆಗ ಏನೂ ಅರಿಯದ ಆ ಮಗು ಕಿಸ್ ಮಾಡುತ್ತದೆ.. ಅದರ ನಂತರ ತುಟಿಗಳಿಗೆ ಮುತ್ತು ನೀಡುವಂತೆ ಕೇಳುತ್ತಾಳೆ.. ಆ ಮಗು ನೀಡುತ್ತದೆ.. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ.
ಸಧ್ಯ ಈ ವಿಡಿಯೋಗೆ ಗಾಯಕಿ ಚಿನ್ಮಯಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.. ಅನಸೂಯಾ ಹೆಸರು ಹೇಳದೆ.. ಪೋಷಕರು ಮತ್ತು ಪ್ರೇಕ್ಷಕರು ಹುರಿದುಂಬಿಸಲು ಟಿವಿ ಶೋ ನಿರೂಪಕರೊಬ್ಬರು ಮಗುವಿಗೆ ಲಿಪ್ ಕಿಸ್ ನೀಡುವಂತೆ ಕೇಳುವುದನ್ನು ನಾನು ನೋಡಿದೆ. ಇದು ತುಂಬಾ ಭಯಾನಕವಾಗಿತ್ತು. ಈ ಅಂಶಗಳು ಮಕ್ಕಳ ಮೇಲೆ ಬಹಳ ಪ್ರಭಾವ ಬೀರುತ್ತವೆ.
ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಚಿಕ್ಕ ಮಕ್ಕಳಿಗೆ ಕಲಿಸುವುದು ಪೋಷಕರ ಜವಾಬ್ದಾರಿ. ಆದರೆ ಇಂತಹ ಕೆಲಸಗಳನ್ನು ಮಾಡುವಾಗ ಚಪ್ಪಾಳೆ ತಟ್ಟುತ್ತಿರುವುದು ನಾಚಿಕೆಗೇಡಿನ ಸಂಗತಿ.
ಮಕ್ಕಳನ್ನು ಒಳಗೊಂಡ ಇಂತಹ ಈ ಟಿವಿ ಶೋಗಳು ಭಯಾನಕವಾಗಿವೆ. ಮಕ್ಕಳಿಗೆ ಸುರಕ್ಷಿತ ಬಾಲ್ಯವನ್ನು ನೀಡಲು ಬಯಸುವ ಸಮಾಜದಲ್ಲಿ ಇವುಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಚಿನ್ಮಯಿ ಕಿಡಿಕಾರಿದ್ದಾರೆ..
ಇನ್ನು ಅನಸೂಯಾ ಭಾರದ್ವಾಜ್ 2003 ರಲ್ಲಿ 'ನಾಗ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾದಲ್ಲಿ ಕಾನೂನು ವಿದ್ಯಾರ್ಥಿನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ದಶಕದ ನಂತರ, ಅವರು ಜಬರ್ದಸ್ತ್ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ದೂರದರ್ಶನದಲ್ಲಿ ಕಾಣಿಸಿಕೊಂಡರು. ಸಧ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ..