ಕನ್ನಡ ಬಿಗ್ ಬಾಸ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ.. ಮೂರನೇ ವಾರಕ್ಕೆ ಬಿಗ್ ಶಾಕ್ !!
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಬಹುದೊಡ್ಡ ಜಗಳದ ಬಳಿಕ ಜಗದೀಶ್ ಹಾಗೂ ರಂಜಿತ್ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿದ್ದಾರೆ. ಬಿಗ್ ಬಾಸ್ ಕನ್ನಡ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಈ ಸ್ಪರ್ಧಿಗೆ ವಿಶೇಷ ಅಧಿಕಾರ ಸಹ ದೊರೆತಿದೆ.
ಸರಿಗಮಪ ರಿಯಾಲಿಟಿ ಶೋ ಮೂಲಕ ಫೇಮಸ್ ಆದ ಗಾಯಕ ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದಾರೆ.
ಮೂರನೇ ವಾರ ವೈಲ್ಡ್ ಕಾರ್ಡ್ ಆಗಿ ಬಂದ ಸ್ಪರ್ಧಿಯ ಹನುಮಂತ ಅವರನ್ನೇ ಕ್ಯಾಪ್ಟನ್ ಎಂದು ಬಿಗ್‌ಬಾಸ್ ಘೋಷಣೆ ಮಾಡಿದ್ದರು. ಈ ಘೋಷಣೆ ಮನೆಯಲ್ಲಿನ ಉಳಿದ ಸದಸ್ಯರಿಗೆ ಶಾಕ್ ನೀಡಿದೆ.
ಸಿಂಗಿಂಗ್ ಜೊತೆ ಡ್ಯಾನ್ಸಿಂಗ್ ರಿಯಾಲಿಟಿ ಶೋನಲ್ಲಿಯೂ ಹನುಮಂತ ಕಾಣಿಸಿಕೊಂಡಿದ್ದರು. ಗ್ರಾಮೀಣ ಭಾಷೆಯ ಮೂಲಕವೇ ಖ್ಯಾತರಾದ ಹನುಮಂತ ಈಗ ಬಿಗ್‌ಬಾಸ್ ಮನೆಗೆ ಬಂದಿದ್ದು, ಸಾಕಷ್ಟು ಕುತೂಹಲ ಮೂಡಿದೆ.
ಕುರಿಗಾಹಿಯಾಗಿರುವ ಸಿಂಗರ್ ಹನುಮಂತ ಎಲ್ಲಾ ಸದಸ್ಯರನ್ನು ಪರಿಚಯ ಮಾಡಿಕೊಂಡು ನೇರವಾಗಿ ಊಟಕ್ಕೆ ಕುಳಿತಿದ್ದಾರೆ.
ಹಾವೇರಿ ಜಿಲ್ಲೆಯವರಾಗಿರುವ ಗಾಯಕ ಹನುಮಂತ ಅಭಿಪ್ರಾಯಗಳನ್ನು ನೇರವಾಗಿ ಹೇಳುವ ವ್ಯಕ್ರಿ ಎನ್ನಲಾಗದೆ. ಕ್ಯಾಪ್ಟನ್ ಆಗಿರುವ ಕಾರಣ ಹನುಮಂತ ಹಲವು ವಿಶೇಷ ಅಧಿಕಾರಗಳನ್ನು ಹೊಂದಿದ್ದಾರೆ.