Mangli Car Accident: ಖ್ಯಾತ ಗಾಯಕಿ ಮಂಗ್ಲಿ ಕಾರಿಗೆ ಭೀಕರ ಅಪಘಾತ.. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ!!
ರಂಗಾರೆಡ್ಡಿ ಜಿಲ್ಲೆಯ ನಂದಿಗಾಮ ಮಂಡಲದ ಕನ್ಹಾ ಶಾಂತಿ ವನದಲ್ಲಿ ನಡೆದ ವಿಶ್ವ ಆಧ್ಯಾತ್ಮಿಕ ದಿನಾಚರಣೆಯಲ್ಲಿ ಪಾಲ್ಗೊಂಡು ಮಂಗ್ಲಿ ವಾಪಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಸಣ್ಣ ಟ್ರಕ್ ಮಂಗ್ಲಿ ಕಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮಂಗ್ಲಿ ಹಾಗೂ ಅವರ ಜೊತೆಯಲ್ಲಿದ್ದ ಮೇಘರಾಜ್ ಮತ್ತು ಮನೋಹರ್ ಎಂಬುವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಈ ಘಟನೆ ಸಂಬಂಧ ಶಂಶಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಣ್ಣ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮಂಗ್ಲಿ ಅವರ ಕಾರಿನ ಹಿಂಬದಿ ಜಖಂಗೊಂಡಿದೆ. ಖ್ಯಾತ ಗಾಯಕಿ ಮಾಂಗ್ಲಿ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಕಿರುತೆರೆ ಕಾರ್ಯಕ್ರಮಗಳ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ ಮಂಗ್ಲಿ ಇದೀಗ ಬೆಳ್ಳಿತೆರೆಯಲ್ಲಿ ತಮ್ಮ ಕಂಠಸಿರಿಯಿಂದ ಮಿಂಚುತ್ತಿದ್ದಾರೆ.
ಮಂಗ್ಲಿ ಟಾಲಿವುಡ್ ಮತ್ತು ಕಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ಬಹು ಬೇಡಿಕೆಯ ಗಾಯಕಿಯಾಗಿದ್ದಾರೆ. ಗಾಯಕಿಯಾಗಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ಮಂಗ್ಲಿ ಕೆಲವೇ ಸಮಯದಲ್ಲಿ ಟಾಪ್ ಮೋಸ್ಟ್ ಸಿಂಗರ್ ಆದರು.