ನಟ ಧನುಷ್ ಸಲಿಂಗಕಾಮಿಯೇ? ಹಿರಿಯ ಗಾಯಕಿ ಪತಿಯ ಜೊತೆಗಿತ್ತೇ ಸಂಬಂಧ.! ಸ್ಟಾರ್ ಸಿಂಗರ್‌ ಕೊಟ್ಟ ಹೇಳಿಕೆ ವೈರಲ್‌ !

Wed, 15 May 2024-2:20 pm,

ತಮಿಳು ಗಾಯಕಿ ಸುಚಿತ್ರಾ ಇತ್ತೀಚೆಗೆ ತಮ್ಮ ಮಾಜಿ ಪತಿ, ನಟ ಕಾರ್ತಿಕ್ ಕುಮಾರ್ ಹಾಗೂ ನಟ ಧನುಷ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಧನುಷ್ ಮತ್ತು ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ 2022 ರಲ್ಲಿ ತಮ್ಮ ವಿಚ್ಛೇದನವನ್ನು ಘೋಷಿಸಿದರು. ನಟ ಧನುಷ್ ಮತ್ತು ಸೂಪರ್‌ ಸ್ಟಾರ್‌ ರಜನಿಕಾಂತ್‌ ಪುತ್ರಿ ಐಶ್ವರ್ಯಾ ವಿಚ್ಛೇದನದ ಕುರಿತು ಗಾಯಕಿ ಸುಚಿತ್ರಾ ಮಾತನಾಡಿದ್ದು, ಇಬ್ಬರೂ ಪರಸ್ಪರ ಮೋಸ ಮಾಡುತ್ತಿದ್ದರು ಎಂದಿದ್ದಾರೆ. 

ಇಬ್ಬರೂ ಬೇರೆ ಬೇರೆಯವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಐಶ್ವರ್ಯ ತಮ್ಮ ಮಕ್ಕಳಿಗೆ ಒಳ್ಳೆ ತಾಯಿ ಅಲ್ಲ. ಆದರೆ ಧನುಷ್ ಒಳ್ಳೆ ತಂದೆ ಎಂದು ಸುಚಿತ್ರಾ ಹೇಳಿದ್ದಾರೆ. 

"ನನ್ನ ಪತಿ ಗೇ, ಅವನು ನಟ ಧನುಷ್ ಒಂದೇ ರೂಮ್‌ನಲ್ಲಿ ಏನು ಮಾಡುತ್ತಿದ್ದರು ಎನ್ನುವುದು ನನಗೆ ಗೊತ್ತಿಲ್ಲ" ಎಂದು ಸುಚಿತ್ರಾ ಹೇಳಿದ್ದಾರೆ. 

ನಟ ಧನುಷ್, ನನ್ನ ಮಾಜಿ ಪತಿ ಕಾರ್ತಿಕ್, ಆಂಡ್ರಿಯಾ ಮತ್ತು ರಾಮು ಹೀಗೆ ಒಂದಷ್ಟು ಜನರ ಗುಂಪಿದೆ. ಇವರೆಲ್ಲರೂ ಆಗಾಗೆ ಒಂದು ಕಡೆ ಸೇರುತ್ತಾರೆ. ಏನೇನೊ ಚರ್ಚೆ ಮಾಡುತ್ತಾರೆ, ಅಶ್ಲೀಲ ಮೆಸೇಜ್‌ಗಳನ್ನು ಫಾರ್ವರ್ಡ್ ಮಾಡಿಕೊಳ್ಳುತ್ತಾರೆ. ಇನ್ನು ಏನೇನೋ ಮಾಡ್ತಾರೆ. ನನ್ನ ಪತಿ ಗೇ ಎಂದು ವೈದ್ಯರು ಕೂಡ ಹೇಳಿದ್ದರು ಎಂದು ಗಾಯಕಿ ಸುಚಿತ್ರಾ ಹೇಳಿದ್ದು, ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಸುಚಿತ್ರಾ ಅವರ ಈ ಹೇಳಿಕೆಗೆ ನಟ ಕಾರ್ತಿಕ್‌, "ಒಂದು ವೇಳೆ ನಾನು ಸಲಿಂಗಕಾಮಿ ಆಗಿದ್ದರೆ ಅದನ್ನು ಹೇಳಿಕೊಳ್ಳಲು ನನಗೆ ನಾಚಿಕೆ ಇಲ್ಲ. ಅದು ಏನೇ ಆಗಿದ್ದರೂ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಗರ್ವದಿಂದ ಬದುಕಿ" ಎಂದು ಇನ್‌ ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link